ಬಾಬಾ ರಾಮ್ ದೇವ್ ವಿರುದ್ಧ ಸಿಡಿದೆದ್ದ ವೈದ್ಯಕೀಯ ಸಂಘ: ಜೂನ್‌ 1 ಕರಾಳ ದಿನಾಚರಣೆಗೆ ಕರೆ

ಯೋಗಗುರು ಬಾಬಾರಾಮ್‌ ದೇವ್‌ ಅಲೋಪಥಿ ವೈದ್ಯಕೀಯ ಪದ್ಧತಿಯನ್ನು ಟೀಕಿಸಿದ್ದಕ್ಕಾಗಿ  ಭಾರತೀಯ ವೈದ್ಯಕೀಯ ಸಂಘ ರಾಮ್‌ದೇವ್‌ ವಿರುದ್ಧ ಆಕ್ರೋಶಗೊಂಡಿದ್ದಲ್ಲದೆ ಕಠಿಣಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲೆ, ಜೂನ್ 1 ರಂದು ರಾಷ್ಟ್ರವ್ಯಾಪಿ   ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ರಾಮ್‌ದೇವ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು, ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ, ಆದ್ದರಿಂದ ದೇಶಾದ್ಯಂತ ಅಲೋಪಥಿಕ್​ ವಿವಿಧ ವಿಭಾಗದ ವೈದ್ಯರು ಜೂ.1 ರಂದು ಬಾಬಾ ರಾಮ್​ದೇವ್​ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಜೊತೆಗೆ ಆ ದಿನವನ್ನು ಕರಾಳ ದಿನವೆಂದು ಪರಿಗಣಿಸುವುದಾಗಿ ವೈದ್ಯರ ಸಂಘಟನೆ ತಿಳಿಸಿದೆ. ಆದರೆ ಆರೋಗ್ಯ ಸೇವೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೋವಿಡ್‌ ಚಿಕಿತ್ಸೆ ಸಂಬಂಧ ರಾಮ್ ದೇವ್‌   ಅಲೋಪಥಿಕ್ (ಆಧುನಿಕ ವೈದ್ಯ ವಿಜ್ಞಾನ) ಎಂಬುವುದು ಅವಿವೇಕಿ ಮತ್ತು ಅಸಮರ್ಪಕ ವಿಜ್ಞಾನ, ಮೊದಲು ಹೈಡ್ರೋಕ್ಸಿಕ್ಲೂರೊಖ್ವಿನ್ ವಿಫಲವಾಯಿತು, ನಂತರ ರೆಮ್ಡಿಸಿವಿರ್‌, ಐವರ್ಮೆಕ್ಟಿನ್‌ ಹಾಗು ಪ್ಲಾಸ್ಮಾ ಥೆರಪಿ ವಿಫಲವಾಯಿತು, ನಂತರ ಆಂಟಿಬಯೋಟಿಕ್ಸ್‌ಗಳಾದ ಫ್ಯಾಬಿಫ್ಲೂ ಮತ್ತು ಸ್ಟೆರಾಯ್ಡ್‌ ಕೂಡ ವಿಫಲವಾಯಿತು ಎಂದು ಇತ್ತೀಚೆಗೆ ಬಾಬಾ ರಾಮ್‌ ದೇವ್‌ ಅಲೋಪಥಿ ಚಿಕಿತ್ಸೆಯನ್ನು ಟೀಕಿಸಿ ಹೇಳಿಕೆ ಕೊಟ್ಟಿದ್ದರು, ಜೊತೆಗೆ ಆಕ್ಸಿಜನ್‌ ಕೊರತೆಗಿಂತಲೂ ಅಲೋಪಥಿ ಔಷಧದಿಂದ ಲಕ್ಷಾಂತರ ಕೋವಿಡ್‌ ಸೋಂಕಿತರು ಸಾವನ್ನಪ್ಪಿದ್ದಾರೆಂದಿದ್ದರು.

ರಾಮ್‌ ದೇವ್‌ ಅಲೋಪಥಿಕ್ ಔಷಧಿಯನ್ನು ಟೀಕಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅಲೋಪಥಿಕ್ ವೈದ್ಯಕೀಯ ಪದ್ಧತಿ ಒಂದು ಮೂರ್ಖ ಪದ್ಧತಿ. ಈ ಔಷಧಿ ತೆಗೆದುಕೊಂಡು ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆಂಬ ಹೇಳಿಕೆಯ ವಿರುದ್ಧ ಅಲೋಪಥಿಕ್ ವೈದ್ಯರ ಸಂಘಟನೆ ತೀವ್ರ ಆಕ್ರೋಶ ಹೊರಹಾಕಿದೆ.  ಈ ಮಧ್ಯೆ ಪತಂಜಲಿ ಯೋಗ ಟ್ರಸ್ಟ್​  ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದರೂ ವೈದ್ಯರು ಅದನ್ನು ಒಪ್ಪುತ್ತಿಲ್ಲ. ಜನರಲ್ಲಿ ತಪ್ಪು ಕಲ್ಪನೆ ಬಿತ್ತಲಾಗಿದೆ. ಜೊತೆಗೆ ಅಲೋಪಥಿಕ್​ನ್ನು ಅಗೌರವಿಸುತ್ತಿದ್ದಾರೆ ಎಂದು ಐಎಂಎ ಆರೋಪಿಸಿದೆ. ಜೊತೆಗೆ ರಾಮ್ ದೇವ್ ಅವರಿಂದ ಬಹಿರಂಗ, ಬೇಷರತ್ ಕ್ಷಮೆಯನ್ನು ಅಪೇಕ್ಷಿಸಿದೆ. 

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...