ಬರ್ತ್ ಡೇ ಸಮಾರಂಭದಲ್ಲಿ ಬಳಸುವ ಕ್ಯಾಂಡಲ್ ಗಳನ್ನು ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, 8 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಸಭೆ ಸಮಾರಂಭಗಳಲ್ಲಿ ಲೈಟರ್ ಮೂಲಕ ಹೊತ್ತಿಸುವ ಸ್ಪಾರ್ಕರ್ ತಯಾರಿಸುವ ಘಟಕಕ್ಕೆ ಬೆಂಕಿ ತಗುಲಿದ್ದು, ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ., ಬೆಂಕಿಯ ಕಿನ್ನಾಲಿಗೆ 8 ಮಂದಿ ಗಾಯಗೊಂಡಿದ್ದಾರೆ.
ಹುಬ್ಬಳ್ಳಿಯ ಹೊರವಲಯದಲ್ಲಿರುವ ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದ ಮೊದಲ ಕ್ರಾಸಿನಲ್ಲಿ ನಡೆದಿದ್ದು, 15 ದಿನದ ಹಿಂದೆಯಷ್ಟೇ ಕಾರ್ಖಾನೆ ಆರಂಭಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಂಬ್ಯುಲೆನ್ಸ್ ಆಗಮಿಸಿದ್ದು, ರಕ್ಷಣೆಗೆ ಮುಂದಾಗಿದ್ದಾರೆ. ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ಅವಘಡದಲ್ಲಿ ಸಾವನ್ನಪ್ಪಿದವರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗಷ್ಟೇ ಆರಂಭವಾಗಿದ್ದ ತಯಾರಿಕಾ ಘಟಕದಲ್ಲಿ ಇಂತಹದೊಂದು ಅವಘಡ ಸಂಭವಿಸಿದ್ದು, ಅವಘಡದ ಬಗ್ಗೆ ಕೂಲಂಕಷವಾದ ಮಾಹಿತಿ ಲಭ್ಯವಾಗಬೇಕಿದೆ.
ಸ್ಥಳೀಯರ ಸಮಯಪ್ರಜ್ಞೆಯಿಂದ ಜೀವಹಾನಿ ತಪ್ಪಿದೆ. ಪರಿಹಾರ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.