ಕಾಂಗ್ರೆಸ್ನ (CONGRESS) ನಾಯಕ ರಾಹುಲ್ ಗಾಂಧಿ (Rahul Gandhi) ಇತ್ತೀಚಿಗೆ ತಮ್ಮ ವರ್ಚಸ್ಸನ್ನ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಜೊತೆಗೆ ಜನಸಾಮಾನ್ಯರ ವಿಶ್ವಾಸವನ್ನು ಮನ್ನಣೆಯನ್ನ ಗಳಿಸುವಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ ಇದು ಬಿಜೆಪಿ ನಾಯಕರಿಗೆ ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ರಾಹುಲ್ ಗಾಂಧಿಯವರ ಸಣ್ಣ ಸಣ್ಣ ತಪ್ಪುಗಳು ಕೂಡ ದೊಡ್ಡ ಮಟ್ಟದ ವಿವಾದದ ರೂಪವಾಗಿ ಬದಲಾಗುತ್ತಿದೆ.
ಅದರಲ್ಲೂ ಈ ಹಿಂದಿನಿಂದಲೂ ಬಿಜೆಪಿ (BJP) ನಾಯಕರು ರಾಹುಲ್ ಗಾಂಧಿಯ ವಿರುದ್ಧ ಹರಿಹಾಯ್ದುಕೊಂಡು ಬರುತ್ತಿದ್ದಾರೆ. ರಾಹುಲ್ ಗಾಂಧಿಯ ವಿರುದ್ಧ ವೈಫಲ್ಯಗಳು ಹಾಗೂ ವಿವಿಧ ವಿವಾದಗಳನ್ನು ಸೃಷ್ಟಿಸುವಲ್ಲಿಯೂ ಬಿಜೆಪಿಯ ನಾಯಕರು ಯಶಸ್ವಿಯಾಗುತ್ತಿದ್ದಾರೆ ಇದು ಕಾಂಗ್ರೆಸ್ನ ಬಗ್ಗೆ ಜನರಿಗೆ ವಿರೋಧ ಭಾಸವನ್ನ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಆದರೆ ಇತ್ತೀಚಿಗೆ ಬಿಜೆಪಿಯ ಈ ಸ್ಟ್ರ್ಯಾಟಜಿಗಳು ಕಡಿಮೆ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಜೊತೆಗೆ ನಿಧಾನವಾಗಿ ಬಿಜೆಪಿ ಆಡಳಿತ ವಿರೋಧಿ ಅಲೆ ಹೆಚ್ಚಾಗುತ್ತದೆ. ಇನ್ನು ಲೋಕಸಭೆ ಚುನಾವಣೆ ಕೂಡ ಸಮೀಪಿಸುತ್ತಿದ್ದು, ಈ ಬಾರಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರುವ ನಿರೀಕ್ಷೆಯಲ್ಲಿರುವ ಬಿಜೆಪಿ, ಹಾಗೂ ಬಿಜೆಪಿಯ ನಾಯಕರು ಇದೀಗ ರಾಹುಲ್ ಗಾಂಧಿಯನ್ನು ಹಣಿಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ
ಇದರ ಮುಂದುವರಿದ ಭಾಗವಾಗಿ ಇದೀಗ ವಿತ್ತ ಸಚಿವೆ ನಿರ್ಮಲ ಸೀತಾರಾಮ ಅವರು ರಾಹುಲ್ ಗಾಂಧಿಯವರ ವಿರುದ್ಧ ಹರಿಹಾಯ್ದಿದ್ದು, ಚೀನಾದ (CHINA) ವಿಚಾರದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ನಾಯಕರು ಮೃದು ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂಬ ರೀತಿಯ ಪರೋಕ್ಷ ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತು ಮುಂಬೈನಲ್ಲಿ ಹೇಳಿಕೆ ನೀಡಿರುವ ನಿರ್ಮಲ ಸೀತಾರಾಮನ್ ” ಅವರು (ರಾಹುಲ್ ಗಾಂಧಿ) ಚೀನಾ ವಿಷಯದ ಬಗ್ಗೆ ಭಾರತ ಸರ್ಕಾರವನ್ನು ಲೇವಡಿ ಮಾಡಲು ನಾಚಿಕೆಪಡಬೇಕು. ಆದರೆ, ಈ ವಿಚಾರದಲ್ಲಿ ನಮ್ಮ ಪ್ರಧಾನಿ ಏನು ಹೇಳಿದರೂ ಅವರು ಕೇಳುವುದಿಲ್ಲ. ಅವರು (ನರೇಂದ್ರ ಮೋದಿ) ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದಾಗಲೆಲ್ಲಾ ಕಾಂಗ್ರೆಸ್ ನಾಯಕರು ಹೊರನಡೆಯುತ್ತಾರೆ ಅಥವಾ ಅವರ ಭಾಷಣಕ್ಕೆ ಅಡ್ಡಿಪಡಿಸಲು ತಮ್ಮ ಗಟ್ಟಿ ಧ್ವನಿಯಲ್ಲಿ ಕೂಗುತ್ತಾರೆ.” ಎಂದು ಹೇಳಿಕೆಯನ್ನು ನೀಡಿದ್ದಾರೆ
ಇದೀಗ ಈ ಹೇಳಿಕೆಗೆ ಕಾಂಗ್ರೆಸ್ನ ಹಲವು ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ನಿರ್ಮಲ ಸೀತಾರಾಮನ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಜೊತೆಗೆ ಚುನಾವಣೆ ಹತ್ತಿರ ಸಮೀಪಿಸದಿದ್ದಂತೆ ನಿಮಗೆ ಚೀನಾ ಮತ್ತು ಪಾಕಿಸ್ತಾನ ನೆನಪಾಗುತ್ತದೆ ಅದಕ್ಕೆ ಮೊದಲು ನೀವು ಇನ್ನೂ ಯಾವ ವಿಚಾರವನ್ನು ಮಾತನಾಡುವುದಿಲ್ಲ ಎಂದು ಸಾಕಷ್ಟು ಜನ ನಿರ್ಮಲ ಸೀತಾರಾಮನ್ ಅವರ ವಿರುದ್ಧವೇ ಹರಿಹಾಯ್ದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಬಿಜೆಪಿ ಯಾವ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತದೆ ಅನ್ನೋದನ್ನ ಕಾದುನೋಡಬೇಕಾಗಿದೆ