ಫೆಂಗಲ್ (Fengal) ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ತಮಿಳುನಾಡಿನ ಚೆನ್ನೈ (Chennai) ಚಂಡಮಾರುತದ ಹೊಡೆತಕ್ಕೆ ನಲುಗಿಹೋಗಿದೆ. ವೇಗವಾದ ಗಾಳಿ ಮತ್ತು ಭಾರೀ ಮಳೆಗೆ ಅನೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು ಮೂವರು ಮೃತಪಟ್ಟಿದ್ದಾರೆ (3 dead). ಬಹುತೇಕ ಕಡೆಗಳಲ್ಲಿ ಹಳ್ಳಿಗಳಿಗೆ ಸಂರ್ಪಕಿಸೋ ರಸ್ತೆಗಳು ಮಳೆ ನೀರಲ್ಲಿ ಮರೆಯಾಗಿದೆ. ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚೆನ್ನೈ ನ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಸುಮಾರು ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರೀ ಮಳೆ ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ ಪ್ರಮುಖ ರಸ್ತೆಗಳು ಜಲಾವೃತವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಚ್ಚಿಮೇಡು ಪ್ರದೇಶದ ಸುತ್ತಮುತ್ತ ನಗರಗಳಲ್ಲೂ ಪ್ರವಾಹ ಪರಿಸ್ಥಿತಿ ಇದೆ. ಕಡಲೂರು ಪ್ರವಾಹದಲ್ಲಿ ಸಿಲುಕಿರೋ ಜನರನ್ನ ಎನ್ಡಿಆರ್ ಎಫ್ (NDRF) ಸಿಬ್ಬಂದಿ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ವಿಲ್ಲುಪುರಂ ಜಿಲ್ಲೆಯ ಮೈಲಂ ಎಂಬಲ್ಲಿ ಪ್ರವಾಹ ಪರಿಪರಿಸ್ಥಿತಿ ನಿರ್ಮಾಣವಾಗಿದೆ.