• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಿಕ್ಷಣ ಸೇವೆಗೆ ಗೌರವದ ಗರಿ: ನಾಳೆ ಪ್ರೊ. ಶ್ರೀಕಂಠಯ್ಯ ಅವರಿಗೆ ಅಭಿನಂದನಾ ಸಮಾರಂಭ | Prof. Srikanthayya

ಪ್ರತಿಧ್ವನಿ by ಪ್ರತಿಧ್ವನಿ
October 3, 2026
in Top Story, ಕರ್ನಾಟಕ
0
Felicitation ceremony for Prof. Srikantaiah tomorrow
Share on WhatsAppShare on FacebookShare on Telegram

ಬೆಂಗಳೂರು : ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ, ರಾಜಾಜಿನಗರ (Rajajinagar) ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಕೆಟಿಎಸ್‌ವಿ ಪ್ರಾಂಶುಪಾಲರಾದ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ (Prof. Srikanthayya) ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ADVERTISEMENT
Nirmala Sitharaman : ರೈತರಿಂದ 1 ರೂಪಾಯಿ ಕೂಡ ಹೆಚ್ಚು ಹಣ ವಸೂಲಿ ಮಾಡಬಾರದು ಅಂತ ಮೋದಿ ಖಡಕ್ಕಾಗಿ ಹೇಳಿದ್ದಾರೆ..!

ಪ್ರಾಚಾರ್ಯ ರತ್ನ ಶ್ರೀಕಂಠಯ್ಯ ಅಭಿನಂದನಾ ಸಮಿತಿ ವತಿಯಿಂದ ಈ ಸಮಾರಂಭವು ಅಕ್ಟೋಬರ್ 4ರಂದು ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬೆಳಗ್ಗೆ 10:30ಕ್ಕೆ ಜರುಗಲಿದೆ.

ನಾಡೋಜ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಘನ ಉಪಸ್ಥಿತರಾಗಿ ಪಾಲ್ಗೊಳ್ಳಲಿದ್ದು, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರು ಹಾಗೂ ಕೆಎಕೆಟಿಎಸ್ ಅಧ್ಯಕ್ಷರಾದ ಶ್ರೀಕಾಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Mysuru Dasara 2026 : ಕಂಬಳ ಎಷ್ಟು ಸ್ಪೆಷಲ್..? ಏನೆಲ್ಲ ವ್ಯವಸ್ಥೆ..? | #pratidhvani

ಉದ್ಯಮಿ ಎಂ.ಕೆ. ಚಂದ್ರಕುಮಾರ್, ಕೆಎಕೆಟಿಎಸ್ ಕಾರ್ಯಾಧ್ಯಕ್ಷ ಅರ್ಜುನ್, ಬಿಡಿಎ ಸದಸ್ಯ ಪಿ. ಗಾಂಧಿ ಹಾಗೂ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕ ಎಲ್. ಮುತ್ತುರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ತಿಗಳರ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ, ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ, ಬೆಂಗಳೂರು ಉತ್ತರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ಅನುದಾನಿತ ನೌಕರರ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.

ಬೆಸ್ಕಾಂಗೆ ಬರೋಬ್ಬರಿ ₹293.62 ಕೋಟಿ ಲಾಭ: ಆರ್ಥಿಕ ಶಿಸ್ತಿಗೆ ಸಿಕ್ಕಿತು ಭರ್ಜರಿ ಯಶಸ್ಸು | BESCOM

Tags: Felicitation CeremonyProf. Srikantaiahtomorrow
Previous Post

ಬೆಸ್ಕಾಂಗೆ ಬರೋಬ್ಬರಿ ₹293.62 ಕೋಟಿ ಲಾಭ: ಆರ್ಥಿಕ ಶಿಸ್ತಿಗೆ ಸಿಕ್ಕಿತು ಭರ್ಜರಿ ಯಶಸ್ಸು | BESCOM

Next Post

ಕರ್ನಾಟಕಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ : ಕೇಂದ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ | CM DK Shivakumar

Related Posts

Recruitment of 16,000 Teachers by the End of This Year: Minister Madhu Bangarappa
Top Story

ಈ ವರ್ಷಾಂತ್ಯದೊಳಗೆ 16 ಸಾವಿರ ಶಿಕ್ಷಕರ ನೇಮಕಾತಿ : ಸಚಿವ ಮಧುಬಂಗಾರಪ್ಪ |  Madhu Bangarappa

by ಪ್ರತಿಧ್ವನಿ
October 15, 2026
0

ಮೈಸೂರು : ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು ಹಾಗೂ ಶೈಕ್ಷಣಿಕ ವಾತಾವರಣವನ್ನು ಸುಧಾರಿಸುವ ಉದ್ದೇಶದಿಂದ ಪ್ರಸಕ್ತ ವರ್ಷಾಂತ್ಯದೊಳಗೆ ಒಟ್ಟು 16,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು...

Read moreDetails
State government orders the official observance of 'Sri Madhvacharya Jayanti' on October 21st every year

ಪ್ರತಿ ವರ್ಷ ಅಕ್ಟೋಬರ್ 21ರಂದು ಅಧಿಕೃತವಾಗಿ ‘ಶ್ರೀ ಮಧ್ವಾಚಾರ್ಯ ಜಯಂತಿ’ ಆಚರಣೆಗೆ ರಾಜ್ಯ ಸರ್ಕಾರ ಆದೇಶ | Sri Madhvacharya Jayanti

October 15, 2026
Indira Gandhi Central Government drops Indira Gandhi's name from pension schemes

ಪಿಂಚಣಿ ಯೋಜನೆಗಳಿಂದ ಇಂದಿರಾ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ | Indira Gandhi

October 15, 2026
ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೊಸ ಸಂಕಷ್ಟ; ವರ್ಕ್ ಪರ್ಮಿಟ್ ನಿಯಮದಲ್ಲಿ ಮಹತ್ವದ ಬದಲಾವಣೆ!

ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೊಸ ಸಂಕಷ್ಟ; ವರ್ಕ್ ಪರ್ಮಿಟ್ ನಿಯಮದಲ್ಲಿ ಮಹತ್ವದ ಬದಲಾವಣೆ!

October 15, 2026
ಮೇರಿ ಮಿಲ್ಬೆನ್ ಸ್ಫೋಟಕ ಆರೋಪ:ಕಾಕ್ರೋಚ್ ಜನತಾ ಪಾರ್ಟಿಗೆ ಅಮೆರಿಕದಿಂದ ಹಣಕಾಸು ನೆರವು?

ಮೇರಿ ಮಿಲ್ಬೆನ್ ಸ್ಫೋಟಕ ಆರೋಪ:ಕಾಕ್ರೋಚ್ ಜನತಾ ಪಾರ್ಟಿಗೆ ಅಮೆರಿಕದಿಂದ ಹಣಕಾಸು ನೆರವು?

October 15, 2026
Next Post
Provide ₹7,142.64 crore in drought relief to Karnataka CM DK Shivakumar

ಕರ್ನಾಟಕಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ : ಕೇಂದ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ | CM DK Shivakumar

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada