ಪಾನ್ ಕಾರ್ಡ್ಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕೆಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಲಿಂಕ್ ಮಾಡುವ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದೆ. ಈ ಮೂಲಕ ಪಾನ್- ಆಧಾರ್ ಲಿಂಕ್ ನಡುವೆ ಇದ್ದ ಅವಧಿ ಮಾರ್ಚ್ 30 ರಿಂದ ಜೂನ್ 30, 2023ರವರೆಗೆ ವಿಸ್ತರಣೆ ಆದಂತಾಗಿದೆ.
ಪಾನ್ ಕಾರ್ಡ್ ಜೊತೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಬಾರಿ ಗಡುವುಗಳನ್ನು ನೀಡುತ್ತಲೇ ಬಂದಿತ್ತು. ಆದರೆ ಈ ಬಾರಿ ಪಾನ್ಗೆ ಆಧಾರ್ ಲಿಂಕ್ ಮಾಡಲು 1000 ರೂಪಾಯಿ ದಂಡವನ್ನು ಪಾವತಿ ಮಾಡಬೇಕೆಂದು ಹೇಳಲಾಗಿತ್ತು. ಅಲ್ಲದೇ ಮಾರ್ಚ್ 31ರ ಬಳಿಕ ಆಧಾರ್ ಜೊತೆ ಲಿಂಕ್ ಆಗದ ಪಾನ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳಲಿದೆ ಎಂದು ಹೇಳಲಾಗಿತ್ತು.
ಇದೀಗ ಕೇಂದ್ರ ಹಣಕಾಸು ಸಚಿವಾಲಯ ಈ ಗಡುವನ್ನು ಮುಂದೂಡಿಕೆ ಮಾಡಿದ್ದು ಜೂನ್ 30ರವರೆಗೂ ದೇಶದ ಜನತೆಗೆ ಆಧಾರ್ ಜೊತೆಯಲ್ಲಿ ಪಾನ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಲು ಅವಕಾಶ ಸಿಕ್ಕಂತಾಗಿದೆ. ಜುಲೈ 1ರಿಂದ ಆಧಾರ್ ಜೊತೆ ಲಿಂಕ್ ಆಗದ ಪಾನ್ಕಾರ್ಡ್ಗಳು ಶಾಶ್ವತವಾಗಿ ನಿಷ್ಕ್ರಿಯಗೊಳ್ಳಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಕುರಿತಂತೆ ಕೇಂದ್ರ ಸರ್ಕಾರವು ಗಂಭೀರವಾಗಿದ್ದು ಇದನ್ನು ಕಡೆಗಣಿಸಿದಲ್ಲಿ ಜನಸಾಮಾನ್ಯರು ಮುಂದೆ ಭಾರೀ ದೊಡ್ಡ ಮೊತ್ತದ ದಂಡ ತೆರಬೇಕಾಗಿ ಬರಲಿದೆ. ಅಲ್ಲದೇ ಸರ್ಕಾರದ ಸಾಕಷ್ಟು ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗುತ್ತದೆ. ಹೀಗಾಗಿ ಗಡುವು ಮುಂದುವರಿಕೆಯ ಲಾಭವನ್ನು ಪಡೆದು ಕೂಡಲೇ ಆಧಾರ್ನೊಂದಿಗೆ ಪಾನ್ ಲಿಂಕ್ ಮಾಡುವುದು ಉತ್ತಮ.