ಇಂಡೋನೇಷ್ಯಾದ ಪೂರ್ವ ಪಪುವಾ ನ್ಯೂ ಜಿನಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 6.2ರ ಪ್ರಮಾಣದ ಪ್ರಬಲ ಭೂಕಂಪನ ಸಂಭವಿಸಿದೆ.
ಇಂಡೋನೇಷ್ಯಾದ (Indonesia) ಪೂರ್ವ ಪಪುವಾ ನ್ಯೂಗಿನಿಯಾದ ಕರಾವಳಿ ಪ್ರದೇಶವಾದ ಮಡಂಗ್ ಬಳಿ ಭಾನುವಾರ ತಡರಾತ್ರಿ 6.2 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ.
ಭೂಕಂಪನದ ಬಗ್ಗೆ ಅಮೆರಿಕದ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದ್ದು ಸುನಾಮಿ (Tsunami) ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಈ ಪ್ರದೇಶಗಳಲ್ಲಿ ಪದೇಪದೇ ಭೂಕಂಪನ ಅನುಭವ ಆಗುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಭೂಕಂಪನದಿಂಣದ ಮಡಂಗ್ ಬಳಿ ಹಾಗೂ ಒಳನಾಡಿನ ಪ್ರದೇಶಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೈನಂಟು ಪಟ್ಟಣದ 67 ಕಿ.ಮೀ ದೂರದಲ್ಲಿ, ಭೂಮಿಯ 61 ಕಿ.ಮೀ ಆಳದಲ್ಲಿ ಭೂಕಂಪದ ಕೆಂದ್ರಬಿಂದುವನ್ನು ಪತ್ತೆಹಚ್ಚಲಾಗಿದೆ. ಸುನಾಮಿ ಬೆದರಿಕೆ ಈಗ ಕಳೆದುಹೋಗಿದೆ ಎನ್ನಲಾಗುತ್ತಿದೆ. ಆದರೂ ಕೆಲ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಮಟ್ಟದಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.