• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕ್ರೀಡಾಂಗಣಕ್ಕಿಂತ ಪರಿಸರ ಮುಖ್ಯ; ಬನ್ನೇರುಘಟ್ಟ ಯೋಜನೆ ಕೈಬಿಡಲು ಒತ್ತಾಯ

ಪ್ರತಿಧ್ವನಿ by ಪ್ರತಿಧ್ವನಿ
June 9, 2026
in Top Story
0
ಕ್ರೀಡಾಂಗಣಕ್ಕಿಂತ ಪರಿಸರ ಮುಖ್ಯ; ಬನ್ನೇರುಘಟ್ಟ ಯೋಜನೆ ಕೈಬಿಡಲು ಒತ್ತಾಯ
Share on WhatsAppShare on FacebookShare on Telegram

 

ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಮೀಪದ ಸೂರ್ಯನಗರ ನಾಲ್ಕನೇ ಹಂತ (ಇಂಡ್ಲವಾಡಿ) ಪ್ರದೇಶದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ತೀವ್ರವಾಗಿ ವಿರೋಧಿಸಿದೆ.ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಹಾಗೂ ಜಂಟಿ ಕಾರ್ಯದರ್ಶಿ ಎಲ್. ಜೀವನ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ರಾಜ್ಯದ ಪ್ರಮುಖ ಜೀವವೈವಿಧ್ಯ ತಾಣವಾಗಿದ್ದು, ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಪರಿಸರ ಕೊಂಡಿಯಾಗಿದೆ ಎಂದು ತಿಳಿಸಿದರು.

Harohalli CM DK Road Show: ತವರೂರಲ್ಲಿ ಡಿಕೆ ಶಿವಕುಮಾರ್‌ಗೆ ಭರ್ಜರಿ ವೆಲ್‌ ಕಮ್‌..! #pratidhvani

ಇಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬೃಹತ್ ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ವನ್ಯಜೀವಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಸ್ಟೇಡಿಯಂನಲ್ಲಿ ಅಳವಡಿಸುವ ಫ್ಲಡ್‌ಲೈಟ್‌ಗಳು, ಪಂದ್ಯಾವಳಿ ಸಂದರ್ಭದ ಭಾರಿ ಜನಸಂದಣಿ, ವಾಹನ ದಟ್ಟಣೆ ಹಾಗೂ ಪ್ರೇಕ್ಷಕರ ಗದ್ದಲದಿಂದ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳ ಸ್ವಾಭಾವಿಕ ಜೀವನ ಕ್ರಮಕ್ಕೆ ಅಡ್ಡಿಯಾಗಲಿದೆ ಎಂದು ಅವರು ಹೇಳಿದರು.
ಇದರ ಜೊತೆಗೆ, ಈ ಪ್ರದೇಶ ಕ್ರಮೇಣ ನಗರೀಕರಣ ಮತ್ತು ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗುವ ಅಪಾಯವಿದ್ದು, ಪರಿಸರ ಸಮತೋಲನಕ್ಕೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು.

MB Patil on Price hike: ಎಲ್ಲ ರಂಗದಲ್ಲೂ ಕೇಂದ್ರ ಸರ್ಕಾರ ವಿಫಲ ಆಗಿದೆ ಎಂದ ಸಚಿವ MB ಪಾಟೀಲ್ #pratidhvani

ರಾಜ್ಯದ ಲಕ್ಷಾಂತರ ಜನರಿಗೆ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗದ ಕರ್ನಾಟಕ ಗೃಹ ಮಂಡಳಿ ಈಗ ಪರಿಸರಕ್ಕೆ ಹಾನಿಕಾರಕವಾಗುವ ಯೋಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಕೆಆರ್‌ಎಸ್ ನಾಯಕರು ಟೀಕಿಸಿದರು.ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರಿನಲ್ಲಿ ಈಗಾಗಲೇ ಕೆಎಸ್‌ಸಿಎ ಮೈದಾನ ಹಾಗೂ ಯಲಹಂಕದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ‘ಸೆಂಟರ್ ಆಫ್ ಎಕ್ಸಲೆನ್ಸ್’ ಮೈದಾನಗಳಂತಹ ಅಗತ್ಯ ಮೂಲಸೌಕರ್ಯಗಳು ಲಭ್ಯವಿವೆ. ಹೀಗಾಗಿ ಹೊಸ ಕ್ರೀಡಾಂಗಣ ನಿರ್ಮಿಸುವ ಬದಲು ಈಗಿರುವ ಸೌಲಭ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

Tags: #Bannerghatta#BannerghattaNationalPark#bengaluru#CricketStadium#EcoSensitiveZone#EnvironmentalConcern#EnvironmentFirst#SaveBannerghatta#WildlifeConservationbreakingnewskarnatakanewsKRSparty
Previous Post

“ಮೂರು ಬಾರಿ ಕೈತಪ್ಪಿದ ಸಿಎಂ ಗದ್ದುಗೆ”: ಪರಮೇಶ್ವರ್ ಭಾವುಕ ಮಾತುಗಳಿಂದ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆ

Next Post

ನೈತಿಕತೆಯಿಲ್ಲದ ಮಾಧ್ಯಮ ಸೇತುವೆಗಳು

Related Posts

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
Top Story

LPG ಗ್ರಾಹಕರಿಗೆ ಹೊಸ ನಿಯಮಗಳು ಜಾರಿ: ಸಿಲಿಂಡರ್ ಬುಕ್ಕಿಂಗ್‌ನಿಂದ ಕನೆಕ್ಷನ್ ರದ್ದತಿವರೆಗೆ ಮಹತ್ವದ ಬದಲಾವಣೆ

by ಪ್ರತಿಧ್ವನಿ
July 14, 2026
0

ನವದೆಹಲಿ: ದೇಶಾದ್ಯಂತ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಸಿಲಿಂಡರ್ ಬುಕ್ಕಿಂಗ್, ರೀಫಿಲ್ಲಿಂಗ್, ಹೊಸ ಕನೆಕ್ಷನ್ ಹಾಗೂ ಕನೆಕ್ಷನ್ ರದ್ದತಿ...

Read moreDetails
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ?ಕುವೆಂಪು ನಾಡಗೀತೆಗೆ ಹೊಸ ರೂಪ? 

July 14, 2026
ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ತಿರುಮಲ ಆರತಿ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

July 14, 2026
AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

July 14, 2026
FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

July 14, 2026
Next Post
ನೈತಿಕತೆಯಿಲ್ಲದ ಮಾಧ್ಯಮ ಸೇತುವೆಗಳು

ನೈತಿಕತೆಯಿಲ್ಲದ ಮಾಧ್ಯಮ ಸೇತುವೆಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada