ಕೇಂದ್ರ ಚುನಾವಣೆ ಆಯೋಗ ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದು, ಈಗ ರಾಜಸ್ಥಾನ ವಿಧಾನಸಭೆ ಚುನಾವಣೆ ದಿನಾಂಕವನ್ನ ಆಯೋಗ ಬದಲಾಯಿಸಿದೆ. ಈ ಮೊದಲು ನವೆಂಬರ್ 23ರಂದು ಮತದಾನ ನಡೆಯಬೇಕಿತ್ತು. ಈಗ ಇದನ್ನು ಬದಲಾಯಿಸಲಾಗಿದೆ. ನವೆಂಬರ್ 25ರಂದು ಮತದಾನ ನಡೆಯಲಿದೆ ಎಂದು ದಿನಾಂಕವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ಹೌದು, ನವೆಂಬರ್ 23 ರಂದು ದೇವ್ ಉಥಾನಿ ಏಕಾದಶಿ ಇದು ಅವತ್ತು ನೂರಾರು ಮದುವೆಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಮತದಾರರು ಮತದಾನಕ್ಕೆ ಬರುವ ಪ್ರಮಾಣ ಕಡಿನೆಯಾಗುತ್ತದೆ. ಹಾಗಾಗಿ ಚುನಾವಣಾ ದಿನಾಂಕವನ್ನ ಬದಲಾಯಿಸಲು ವಿವಿಧ ಸಂಸ್ಥೆಗಳಿಂದ ಬೇಡಿಕೆ ಇತ್ತು. ಈ ಕಾರಣದಿಂದಾಗಿ ಚುನಾವಣಾ ಆಯೋಗ ದಿನಾಂಕವನ್ನು ಪರಿಷ್ಕರಣೆ ಮಾಡಿದೆ.