ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯ 3 ದಿನಗಳ ಕಾಲ ವಿಚಾರಣೆ ನಡೆಸಿದ್ದು, ಹೊಸದಾಗಿ ಸಮನ್ಸ್ ಜಾರಿಗೊಳಿಸಿಲ್ಲ.
೭೫ ವರ್ಷದ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯ 3 ದಿನಗಳಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, 100 ಪ್ರಶ್ನೆಗಳನ್ನು ಕೇಳಿದೆ.

ಮಂಗಳವಾರ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸೋನಿಯಾ ಗಾಂಧಿ ಅತ್ಯಂತ ವೇಗವಾಗಿ ಉತ್ತರ ನೀಡಿದ್ದಾರೆ. ಅವರ ಪಟಪಟನೆ ಉತ್ತರ ನೀಡುವ ಶೈಲಿಗೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಇದಕ್ಕೂ ಮುನ್ನ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು 5 ದಿನಗಳಲ್ಲಿ 150 ಪ್ರಶ್ನೆಗಳನ್ನು ಕೇಳಿತ್ತು. ಕೊರೊನಾ ಸೋಂಕಿನ ಕಾರಣ ಸೋನಿಯಾ ಹೆಚ್ಚುವರಿ ಸಮಯ ಪಡೆದು ವಿಚಾರಣೆಗೆ ಹಾಜರಾಗಿದ್ದರು.