ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ನಾನು ಜಾತಿ ಗಣತಿ – ಜನಗಣತಿ ಆಗಬೇಕು ಅಂತಾ 2023 ರಲ್ಲಿ ಒತ್ತಾಯ ಮಾಡಿದ್ದೆ. ಆದರೆ ಅವಾಗ ಅವರು ಅದನ್ನ ಗಮನಕ್ಕೆ ತಗೆದುಕೊಳ್ಳಲಿಲ್ಲ. ನಾನು ಹಿಂದೆ ವಿರೋಧ ಪಕ್ಷದ ನಾಯಕ ಆಗಿದ್ದಾಗಲೂ ಒತ್ತಾಯ ಮಾಡಿದ್ದೆ. ಆಗಲೂ ಅವರು ಅದನ್ನ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಒತ್ತಾಯ ಜೋರಾದ ಬಳಿಕ ಈಗ ಸರ್ಕಾರ ಗಣತಿಗೆ ಮುಂದಾಗಿದೆ. ಈಗ ಕೇಂದ್ರ ಸರ್ಕಾರ ಅದನ್ನ ಅಸ್ತ್ರ ಮಾಡಿಕೊಳ್ಳಲು ಮುಂದಾಗಿದೆ. ದೇಶಕ್ಕೆ ಒಳ್ಳೆಯದಾಗುತ್ತೆ ಅಂದ್ರೆ ಅದನ್ನ ನಾನೂ ಸ್ವಾಗತ ಮಾಡ್ತೇನೆ ಎಂದಿದ್ದಾರೆ.

ಇಂದು ಯಾರೋ ಒಬ್ಬ ಸಚಿವರು ಜವಾಹರ ಲಾಲ್ ನೆಹರು ಜಾತಿ ಗಣತಿಗೆ ವಿರೋಧ ಮಾಡಿದ್ರು ಅಂತಾ ಹೇಳಿದ್ದಾರೆ. ಆದ್ರೆ ಅಂದು ಇದ್ದ ಪರಿಸ್ಥಿತಿ ಬೇರೆ ಇತ್ತು, ನೆಹರು, ಗಾಂಧಿ, ಇಂದಿರಾ ಗಾಂಧಿ ವಿರೋಧ ಮಾಡಿದ್ರು ಅಂತಾ ಇದಾರೆ. ಬಿಜೆಪಿ ಮೀಸಲಾತಿ ವಿರೋಧಿ ಪಕ್ಷವಾಗಿದೆ. ಈಗ ನಮ್ಮಗೆ ಬುದ್ದಿ ಹೇಳಲು ಬಂದಿದ್ದಾರೆ. ಆದಷ್ಟು ಬೇಗ ಆಗ ಬೇಕು.. ಇದು ತೋರಿಕೆಗೆ ಆಗಬಾರದು. ಎಲ್ಲರಿಗೂ ಸಮಾಧಾನ ತರುವ ರೀತಿಯಲ್ಲಿ ಗಣತಿ ಆಗಬೇಕು. ನಾನು – ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದೇವೆ. 550 ಕೋಟಿ ಹಣ ಸರ್ವೆಗೆ ಸಾಲುವುದಿಲ್ಲ. ಜನಗಣತಿ, ಜಾತಿಗಣತಿಗೆ ನಿರ್ಧಿಷ್ಟ ಸಮಯಾವಕಾಶ ನಿಗದಿ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಜಾತಿಗಣತಿ ಹೆಸರಿನಲ್ಲಿ ಯಾರಿಗೂ ಅನ್ಯಾಯ ಆಗಬಾರದು ಎಂದಿರುವ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಜಾತಿ, ಧರ್ಮವನ್ನ ಸಂಘರ್ಷ ಮಾಡ್ತಾ ಇದಾರೆ ಅಂತಾರೆ. ಈಗ ಅವರು ಮಾಡ್ತಾ ಇರೋದಕ್ಕೆ ಎನೂ ಹೇಳಬೇಕು..? ಎಂದಿದ್ದಾರೆ. ಇನ್ನೂ ರಾಜ್ಯ ಸರ್ಕಾರದ ಗಣತಿ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿರುವ ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಾತಿಗಣತಿ ನಿರ್ಧಾರ ಪ್ರಚಾರ, ತೋರ್ಪಡಿಕೆಗೆ ಆಗಬಾರದು. ಟೈಂ ಬಾಂಡ್ ಫಿಕ್ಸ್ ಮಾಡಿ ನಿಗಧಿತ ಅವಧಿಯೊಳಗೆ ಗಣತಿ ಮುಗಿಸಿ, ಈಗ ಮೀಸಲಿಟ್ಟ ಅನುದಾನ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಜಾತಿಗಣತಿ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ ಎಂದಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ನಾನು ಕೆಲಸದ ಮೇಲೆ ನಂಬಿಕೆ ಇಟ್ಟವನು. ನಾನು ಯಾರಿಗೂ ಸುಳಿವು ನೀಡದೇ 371 ಕಲಂ ಜಾರಿ ಮಾಡಿದೆ. ನೆಹರು ಹೆಸರಿನಲ್ಲಿ ಈಗ ಟೀಕೆ ಮಾಡುವವರು ಅಂದು ಹುಟ್ಟಿರಲಿಲ್ಲ. ಅಂದು ದೇಶ ಯಾವ ಸ್ಥಿತಿಯಲ್ಲಿತ್ತು ಅದು ಅವರಿಗೆ ಗೊತ್ತಿಲ್ಲ. ಆರ್.ಎಸ್.ಎಸ್ & ಬಿಜೆಪಿ ಮೀಸಲಾತಿಗೆ ವಿರೋಧಿಯಾಗಿತ್ತು ಎಂದು ನೆನಪಿಸಿದ್ದಾರೆ. ಪೆಹಲ್ಗಾಮ್ ದಾಳಿ ವಿಚಾರವಾಗಿ ವಿಶೇಷ ಅಧಿವೇಶನಕ್ಕೆ ಒತ್ತಾಯ ಮಾಡಿದ್ದೆ. ಕೇಳುವುದು ನಮ್ಮ ಧರ್ಮ. ಆದ್ರೆ ನಿರ್ಧಾರ ತಗೆದುಕೊಳ್ಳುವುದು ಅವರ ನಿರ್ಧಾರ. ಇನ್ನೆರಡು ದಿನಗಳಲ್ಲಿ ಆಗಲಿ. ಮುಂದಿನ ಸಂಪುಟ ಸಭೆಯಲ್ಲಿ ಆದ್ರು ಅವರು ವಿಶೇಷ ಅಧಿವೇಶನದ ಕರೆಯುವ ಬಗ್ಗೆ ಪ್ರಕಟ ಮಾಡಬೇಕು. ಇದು ಪಕ್ಷಗಳ ಒತ್ತಾಯವಾಗಿದೆ ಎಂದಿದ್ದಾರೆ.







