ಫ್ಲೋರಿಡಾದ 29 ವರ್ಷದ ನರ್ಸ್ ಕಿರ್ಸ್ಟಿ ರಾಬರ್ಟ್ಸ್ ಅವರು ತಮ್ಮ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಕಂಡ ಮರಣದ ಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಐಸಿಯು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ರೋಗಿಗಳ ಅಂತಿಮ ಕ್ಷಣಗಳನ್ನು ಕಣ್ಣಾರೆ ಕಂಡಿದ್ದಾರೆ.

ಈ ಅನುಭವವನ್ನು ಕಿರ್ಸ್ಟಿ ಒಂದು ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.ಸಾವಿಗೆ ಕೆಲವೇ ಗಂಟೆಗಳು ಅಥವಾ ನಿಮಿಷಗಳು ಬಾಕಿ ಇರುವಾಗ ರೋಗಿಗಳಲ್ಲಿ ಒಂದು ವಿಚಿತ್ರ ಬದಲಾವಣೆ ಕಾಣಿಸುತ್ತದೆ. ಸಾಯುವ ಮುನ್ನ ಬಹುತೇಕ ರೋಗಿಗಳು ಒಂದೇ ರೀತಿಯ ಮಾತುಗಳನ್ನು ಹೇಳುತ್ತಾರೆ. “ದಯವಿಟ್ಟು ನನ್ನ ಕುಟುಂಬಕ್ಕೆ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿ”, “ನನಗೆ ಹುಷಾರಿಲ್ಲ, ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಾಗಿದೆ.” ಇವು ಸಾಮಾನ್ಯವಾಗಿ ಕೇಳಿಬರುವ ಮಾತುಗಳು. ಈ ಮಾತುಗಳನ್ನು ಹೇಳಿದ ಕೆಲವೇ ಸಮಯದ ಬಳಿಕ ರೋಗಿಯು ನಿಧನರಾಗುತ್ತಾರೆ.

ವೈಜ್ಞಾನಿಕವಾಗಿ ಹೇಳುವುದಾದರೆ, ಅಂಗಾಂಗ ವೈಫಲ್ಯ ಆರಂಭವಾಗುವ ಮೊದಲು ಮಿದುಳು ಕೆಲವು ಸಂಕೇತಗಳನ್ನು ಕಳುಹಿಸುವುದರಿಂದ ರೋಗಿಗಳಲ್ಲಿ ಆತಂಕ ಅಥವಾ ಅಸ್ಥಿರತೆ ಕಂಡುಬರಬಹುದು. ಮರಣದ ಶಬ್ದವು ಮೊದಲು ಮೆದುಳಿಗೆ ಅಲ್ಲ ಹೊಕ್ಕುಳಿನಲ್ಲಿ ಗೋಷರಿಸುತ್ತದೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ. ಹೊಕ್ಕುಳಿನಿಂದ ಹುಟ್ಟಿದ ವ್ಯಕ್ತಿಯು ಹೊಕ್ಕುಳದಿಂದಲೇ ಸಾಯುತ್ತಾನೆ.

ಸಾವು ಹತ್ತಿರ ಬಂದಾಗ, ವ್ಯಕ್ತಿಯು ತನ್ನ ಹತ್ತಿರ ಕುಳಿತ ವ್ಯಕ್ತಿಯನ್ನು ನೋಡುವುದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆಯುರ್ವೇದದ ಪ್ರಕಾರ, ಸಾವಿನ ಮೊದಲು ಮಾನವ ದೇಹದಿಂದ ವಿಚಿತ್ರವಾದ ವಾಸನೆ ಬರಲು ಪ್ರಾರಂಭಿಸುತ್ತದೆ. ಇದನ್ನು ಸಾವಿನ ವಾಸನೆ ಎಂದು ಕರೆಯಲಾಗುತ್ತದೆ. ಇದು ಕೆಲವು ಕಾಯಿಲೆಗಳು, ಹೃದಯಾಘಾತ, ಮಿದುಳಿನ ದಾಳಿ ಇತ್ಯಾದಿಗಳಿಂದ ಉಂಟಾಗುತ್ತದೆ. ಈ ವಾಸನೆಯು ಮೃತದೇಹದ ವಾಸನೆಯಂತಿರುತ್ತದೆ.






