• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಪವಾಸ ಮಾಡಿದ್ರೆ ಮೋದಿ ಸರ್ಕಾರ ಕೇಳುತ್ತಾ..? ನವಭಾರತದಲ್ಲಿ ಇಂತಹ ಇತಿಹಾಸ ಇದೆ ನೋಡಿ..!

ಪ್ರತಿಧ್ವನಿ by ಪ್ರತಿಧ್ವನಿ
July 16, 2026
in Top Story, ಕರ್ನಾಟಕ, ದೇಶ
0
ಉಪವಾಸ ಮಾಡಿದ್ರೆ ಮೋದಿ ಸರ್ಕಾರ ಕೇಳುತ್ತಾ..? ನವಭಾರತದಲ್ಲಿ ಇಂತಹ ಇತಿಹಾಸ ಇದೆ ನೋಡಿ..!
Share on WhatsAppShare on FacebookShare on Telegram

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎತ್ತಿ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ವರದಿಗಳು ಬರುತ್ತಿವೆ. ವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಕೇಂದ್ರ ಬಿಜೆಪಿ ಸರ್ಕಾರದಿಂದ ಅವರೊಂದಿಗೆ ನೇರ ಮಾತುಕತೆ ನಡೆದಿರುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಇದು ಭಾರತದಲ್ಲಿ ಮೊದಲ ಘಟನೆ ಅಲ್ಲ. ಇತಿಹಾಸವನ್ನು ಸ್ವಲ್ಪ ಹಿಂದಕ್ಕೆ ತಿರುಗಿಸಿ ನೋಡಿ.

ADVERTISEMENT
Dk Shivakiumar on HDK: ಜೈಲಿಗೆ ಹೋಗಿ ಬಂದೇ ರಾಜ್ಯದ ಸಿಎಂ ಆಗಿ ಇಲ್ಲಿ ಕೂತಿದ್ದೀನಿ ಕುಮಾರಣ್ಣ ಎಂದ ಡಿಕೆ

ಜಿ.ಡಿ. ಅಗರ್ವಾಲ್ ಎಂಬ ಹೆಸರನ್ನು ಕೇಳಿದ್ದೀರಾ? ಅವರು ಸಾಮಾನ್ಯ ವ್ಯಕ್ತಿಯಲ್ಲ. ಐಐಟಿ ಕಾನ್ಪುರದ ಪ್ರಾಧ್ಯಾಪಕರು. ಭಾರತದ ಪ್ರಮುಖ ಪರಿಸರ ತಜ್ಞರಲ್ಲಿ ಒಬ್ಬರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೊದಲ ಸದಸ್ಯ-ಕಾರ್ಯದರ್ಶಿ. ಜೀವನದ ಕೊನೆಯ ಹಂತದಲ್ಲಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮಿ ಜ್ಞಾನ ಸ್ವರೂಪ್ ಸಾನಂದ ಎಂಬ ಹೆಸರಿನಲ್ಲಿ ಗಂಗೆಯನ್ನು ಉಳಿಸುವ ಹೋರಾಟಕ್ಕೆ ಇಳಿದರು.

ಅವರ ಬೇಡಿಕೆ ಏನು? “ಗಂಗೆಯನ್ನು ಉಳಿಸಿ.” ಅಷ್ಟೇ. ಗಂಗೆಯ ಸಹಜ ಹರಿವು ಉಳಿಯಬೇಕು. ನದಿಯ ಮೇಲೆ ನಿಯಂತ್ರಣವಿಲ್ಲದ ಯೋಜನೆಗಳನ್ನು ಮರುಪರಿಶೀಲಿಸಬೇಕು. ಗಂಗೆಗೆ ಕಾನೂನಿನ ಮೂಲಕ ಶಾಶ್ವತ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಒಂದೆರಡು ದಿನ ಉಪವಾಸ ಮಾಡಲಿಲ್ಲ. ಒಂದೇ ಬಾರಿ ಕೂಡ ಮಾಡಲಿಲ್ಲ. 2008ರಲ್ಲಿ ಮಾಡಿದರು. 2009ರಲ್ಲಿ ಮತ್ತೆ ಮಾಡಿದರು. 2010ರಲ್ಲಿ ಮತ್ತೆ. 2013ರಲ್ಲಿ ಮತ್ತೆ. ಆದರೆ ಕೇಂದ್ರ ಸರ್ಕಾರಗಳು ಭರವಸೆ ಕೊಟ್ಟವು. ಕೆಲವು ನಿರ್ಧಾರಗಳನ್ನೂ ತೆಗೆದುಕೊಂಡವು. ಆದರೆ ತಮ್ಮ ಮೂಲ ಬೇಡಿಕೆಗಳು ಈಡೇರಲಿಲ್ಲ ಎಂದು ಅವರಿಗೆ ಅನಿಸಿತು. ಹೀಗಾಗಿ ಮತ್ತೆ ಮತ್ತೆ ಉಪವಾಸಕ್ಕೆ ಕೂತರು. ಕೊನೆಗೆ 2018ರಲ್ಲಿ 86 ವರ್ಷದ ವಯಸ್ಸಿನಲ್ಲಿ ಮತ್ತೆ ಅಮರಣಾಂತ ಉಪವಾಸ ಆರಂಭಿಸಿದರು.

Dk Shivakiumar on HDK: ಜೈಲಿಗೆ ಹೋಗಿ ಬಂದೇ ರಾಜ್ಯದ ಸಿಎಂ ಆಗಿ ಇಲ್ಲಿ ಕೂತಿದ್ದೀನಿ ಕುಮಾರಣ್ಣ ಎಂದ ಡಿಕೆ

ಒಂದು ವಾರ, ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು, 111 ದಿನಗಳು. 111 ದಿನಗಳ ಕಾಲ ತಮ್ಮ ದೇಹವನ್ನೇ ಪಣಕ್ಕಿಟ್ಟು ಹೋರಾಡಿದರು. ಆ ಹೋರಾಟ ಆಸ್ಪತ್ರೆಯಲ್ಲಿ ಅಂತ್ಯವಾಯಿತು. ಜಿ.ಡಿ. ಅಗರ್ವಾಲ್ ಬದುಕಲಿಲ್ಲ. ಒಬ್ಬ ವಿಜ್ಞಾನಿ ಸತ್ತರು. ಒಬ್ಬ ಪರಿಸರ ಹೋರಾಟಗಾರ ಸತ್ತರು. ಆದರೆ ಅದರಿಂದ ದೇಶದ ಆಡಳಿತ ವ್ಯವಸ್ಥೆ ನಡುಗಿತ್ತಾ? ದೇಶವೇ ನಿಂತು ಚರ್ಚೆ ಮಾಡಿತ್ತಾ? ಖಂಡಿತಾ ಇಲ್ಲ.

ಇಂದು ಸೋನಂ ವಾಂಗ್ಚುಕ್ ಅವರ ಉಪವಾಸವನ್ನು ನೋಡಿದಾಗ ಜಿ.ಡಿ. ಅಗರ್ವಾಲ್ ಅವರ ನೆನಪು ಬರುವುದು ಅದಕ್ಕೆ. ಇದು ವ್ಯಕ್ತಿಗಳ ಬಗ್ಗೆ ಅಲ್ಲ.. ಉಪವಾಸ ಸತ್ಯಾಗ್ರಹದ ಬಗ್ಗೆ. ಒಂದು ಕಾಲದಲ್ಲಿ ಗಾಂಧೀಜಿ ಉಪವಾಸ ಮಾಡಿದರೆ ಸಾಮ್ರಾಜ್ಯವೇ ಆತಂಕಕ್ಕೊಳಗಾಗುತ್ತಿತ್ತು. ಇಂದು ಯಾರಾದರೂ ಉಪವಾಸ ಮಾಡಿದರೆ, ಸುದ್ದಿ ಎರಡು ದಿನ.

Dk Shivakiumar on HDK: ಜೈಲಿಗೆ ಹೋಗಿ ಬಂದೇ ರಾಜ್ಯದ ಸಿಎಂ ಆಗಿ ಇಲ್ಲಿ ಕೂತಿದ್ದೀನಿ ಕುಮಾರಣ್ಣ ಎಂದ ಡಿಕೆ

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್‌ಗಳು. ಆಮೇಲೆ ಮೌನ. ಬಹುಶಃ ಇದೇ ಹೊಸ ಭಾರತದ ವಾಸ್ತವ. ಇದು ಗಾಂಧಿಯ ಭಾರತ ಅಲ್ಲ. ಇದು ನವಭಾರತ. ಇಲ್ಲಿ ಉಪವಾಸ ಮಾಡಿದರೆ ಸರ್ಕಾರ ಕೇಳಲೇಬೇಕು ಎಂಬ ಖಾತರಿ ಇಲ್ಲ. ನಿಮ್ಮ ಧ್ವನಿ ಎಷ್ಟು ದೊಡ್ಡದೋ ಅದಕ್ಕಿಂತ, ಅದನ್ನು ಕೇಳಲು ವ್ಯವಸ್ಥೆ ಸಿದ್ಧವಾಗಿದೆಯೇ ಎಂಬುದೇ ಇಂದು ದೊಡ್ಡ ಪ್ರಶ್ನೆ. ಹೋರಾಟಗಾರರು ಉಪವಾಸ ಮಾಡಿದಾಗ ಕೇಳೋಕೆ ಇದು ಗಾಂಧಿ ಕಾಲದ ಭಾರತವಲ್ಲ..ನವಭಾರತ

Previous Post

ಮಣಿಪುರದಲ್ಲಿ ಎಸ್ಐಆರ್-ಹೊರಗಿಡುವಿಕೆಯ ದಾರಿ

Next Post

Chikkamagaluru: 7ಲಕ್ಷ ಹಣಕ್ಕಾಗಿ‌ ಮಗಳನ್ನೇ ಮಾರಾಟ ಮಾಡಿದ ಪೋಷಕರು?

Related Posts

‘ಹೊರಟ್ಟಿಗೆ ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ’: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ
Top Story

‘ಹೊರಟ್ಟಿಗೆ ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ’: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

by ಪ್ರತಿಧ್ವನಿ
August 7, 2026
0

ಬೆಂಗಳೂರು, ಆಗಸ್ಟ್ 7: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಹೊಸ ತಿರುವು ಸಿಕ್ಕಿದ್ದು, ಅವರನ್ನು ಒತ್ತಡ ಹೇರಿ ಹಾಗೂ ದಬಾಯಿಸಿ ರಾಜೀನಾಮೆ ಕೊಡಿಸಲಾಗಿದೆ...

Read moreDetails
ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ

ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ

August 7, 2026
NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

August 7, 2026
ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

August 7, 2026
ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

August 7, 2026
Next Post
Chikkamagaluru: 7ಲಕ್ಷ ಹಣಕ್ಕಾಗಿ‌ ಮಗಳನ್ನೇ ಮಾರಾಟ ಮಾಡಿದ ಪೋಷಕರು?

Chikkamagaluru: 7ಲಕ್ಷ ಹಣಕ್ಕಾಗಿ‌ ಮಗಳನ್ನೇ ಮಾರಾಟ ಮಾಡಿದ ಪೋಷಕರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!