
ಬೆಂಗಳೂರು: ಕನ್ನಡದ ಕಿರುತೆರೆಯ ವೀಕ್ಷಕರು ಕಾಯುತ್ತಿದ್ದ ಮಹತ್ವದ ಅಪ್ಡೇಟ್ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡದ 10ನೇ ಆವೃತ್ತಿಯ ಡೇಟ್ ಫಿಕ್ಸ್ ಆಗಿದೆ.
ಬಿಗ್ ಬಾಸ್ ಕುರಿತಾದ ಪ್ರೋಮೋ ಹೊರಬಂದಾಗೆಲ್ಲಾ, 10ನೇ ಸೀಸನ್ ಯಾವಾಗ ಶುರುವಾಗಲಿದೆ ಎಂದು ವೀಕ್ಷಕರು ಕೇಳುತ್ತಲೇ ಇದ್ದರು. ಅದಕ್ಕೆ ಉತ್ತರ ಎನ್ನುವಂತೆ ಕಲರ್ಸ್ ಕನ್ನಡ ತನ್ನ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಬಿಗ್ ಅಪ್ಡೇಟ್ ನೀಡಿದೆ.
ಇಂದಿನಿಂದ ಸರಿಯಾಗಿ 16 ದಿನಗಳಲ್ಲಿ 10ನೇ ಆವೃತ್ತಿಯ ಬಿಗ್ ಬಾಸ್ ಕನ್ನಡ ಶೋ ಆರಂಭವಾಗಲಿದೆ. ಈಗಾಗಲೇ ತಿಳಿಸಿರುವಂತೆ ಈ ಬಾರಿಯದ್ದು ಹ್ಯಾಪಿ ಬಿಗ್ಬಾಸ್ ಥೀಮ್ನಲ್ಲಿ ನಡೆಯಲಿದೆ. ಅಕ್ಟೋಬರ್ 8 ರಿಂದ ದೊಡ್ಮನೆ ಕಾರ್ಯಕ್ರಮ ಬಿಗ್ ಬಾಸ್ ಆರಂಭವಾಗಲಿದೆ.
ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ ಹ್ಯಾಪಿ ‘ಬಿಗ್ಬಾಸ್ ಕನ್ನಡ’ ಹತ್ತನೇ ಸೀಸನ್ ಅಕ್ಟೋಬರ್ 8 ರಿಂದ ಎಂದು ಮಾಹಿತಿಯನ್ನು ಪ್ರೋಮೊ ಜತೆಗೆ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಕಟವಾಗುವ ಮೋಸ್ಟ್ ಪಾಪ್ಯುಲರ್ ಕಾರ್ಯಕ್ರಮ ಈ ಬಾರಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕೌತುಕ ಮೂಡಿಸಿದೆ.
ಅದರೊಂದಿಗೆ ಬಿಗ್ ಬಾಸ್ 10 ಕನ್ನಡ ಕುರಿತಾಗಿ ಕೆಲವೊಂದು ಎಕ್ಸ್ಕ್ಲೂಸಿವ್ ಮಾಹಿತಿ ಕೂಡ ಲಭ್ಯವಾಗಿದೆ. ಅಕ್ಟೋಬರ್ 8 ರಂದು ಕಾರ್ಯಕ್ರಮ ಪ್ರಸಾರವಾಗಲಿದ್ದರೆ, ಅಕ್ಟೋಬರ್ 7 ರಂದು ಇದರ ಲಾಂಚ್ ಶೂಟಿಂಗ್ ನಡೆಯಲಿದೆ ಎಂದು ವರದಿಯಾಗಿದೆ. ಈವರೆಗೂ ಬಿಗ್ ಬಾಸ್ ಮನೆಗೆ ಕೆಲವರು ತೆರಳಲಿದ್ದಾರೆ ಎನ್ನುವ ಊಹಾಪೋಹಗಳಿದ್ದರೂ, ಯಾರೊಬ್ಬರ ಬಗ್ಗೆಯೂ ಖಚಿತವಾಗಿಲ್ಲ