ಧರಣಿ ಮಂಡಲ ಮಧ್ಯದೊಳಗೆ ಎಂದರೆ ಮೊದಲಿಗೆ ನೆನಪಾಗುವುದು ಪುಣ್ಯಕೋಟಿ ಪದ್ಯ. ಇದೀಗ ಇದೇ ಹೆಸರಿನ ಚಿತ್ರವೊಂದು ನಮ್ಮ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿ ಚಿತ್ರೀಕರಣ ಮುಗಿಸಿ ತೆರಗೆ ಬರಲು ಸಜ್ಜಾಗಿದೆ.
ಈಗಾಗಲೇ ಮೋಷನ್ ಪೋಸ್ಟರ್ ಹಾಗೂ ಹಾಡುಗಳ ಮೂಲಕ ಸಿನಿರಸಿಕರ ಗಮನ ಸೆಳೆದಿರುವ ಚಿತ್ರತಂಡ ಈಗ ಚಿತ್ರಮಂದಿರಗಳ ಕದ ತಟ್ಟಲು ಸಜ್ಜಾಗಿದೆ. ಇದೇ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನ ಮುಂದೂಡಿದೆ. ಚಿತ್ರವನ್ನ ಡಿಸೆಂಬರ್ 2ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಇನ್ನು ಚಿತ್ರ ತಂಡದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಗುಳ್ಟು ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸಿದ್ದಾರೆ, ನಾಯಕಿಯಾಗಿ ಸ್ಯಾಂಡಲ್ವುಡ್ ಶಾಕುಂತಲೆ ಐಶಾನಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಕರಿ ಸುಬ್ಬು, ದಿ || ಮೋಹನ್ ಜುನೇಜಾ, ಕನ್ನಡಿಗ ಚಿತ್ರ ಖ್ಯಾತಿಯ ಜಯಶ್ರೀ ಆರಾಧ್ಯ, ಶಾಂಭವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಶ್ರೀಧರ್ ಶಿಕಾರಿಪುರ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು ಈ ಹಿಂದೆ ಖ್ಯಾತ ನಿರ್ದೇಶಕರಾದ ಪುರಿ ಜಗನ್ನಾಥ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಈ ಚಿತ್ರವನ್ನು ಓಂಕಾರ್ ನಿರ್ಮಾಣ ಮಾಡಿದ್ದು ಸಹ ನಿರ್ಮಾಪಕರಾಗಿ ಕಾಂಚನ್ ಹಾಗು ಗೌತಮಿ ರೆಡ್ಡಿ ಸಾಥ್ ನೀಡಿದ್ದಾರೆ. ಕ್ಯಾಮರಾಮ್ಯಾನ್ ಆಗಿ ಕೀರ್ತನ್ ಪೂಜಾರಿ ಕೆಲಸ ಮಾಡಿದ್ದು ಬಕ್ಕೇಶ್ ಹಾಗು ಕಾರ್ತಿಕ್ ಸಂಗೀತ ಸೋಯೋಜಿಸಿದ್ದಾರೆ. ಸಂಕಲನಕಾರರಾಗಿ ಉಜ್ವಲ್ ಚಂದ್ರ ತಮ್ಮ ಕೈಚಳಕ ತೋರಲಿದ್ದಾರೆ.
