ಹಾಸನ : ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆದರೆ ಕೆಲಸ ಮಾಡಲು ನಾವು ಸಿದ್ಧ ಎಂಬ ತಮ್ಮ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಸಮರ್ಥನೆ ನೀಡಿದ್ದಾರೆ.ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಇಂದು ಮಾತನಾಡಿದ ಅವರು, ನಮಗೆ ಅಧಿಕಾರ ಮುಖ್ಯವಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗಬೇಕು ಅದು ಮುಖ್ಯ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ಅಲ್ಲದೇ ಎಐಸಿಸಿ ಅಧ್ಯಕ್ಷರೂ ಕೂಡ. ಅವರ ನಾಯಕತ್ವಕ್ಕೆ ನಾಬು ಬೆಂಬಲ ನೀಡಲಿಲ್ಲ ಅಂದರೆ ನಾವು ಮನುಷ್ಯರಾಗಿ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಇದೇ ವೇಳೆ ಕಡೂರು ಕ್ಷೇತ್ರದಿಂದ ವೈಎಸ್ವಿ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ನಾವು ದತ್ತಾರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಅವರಿಗೆ ಟಿಕೆಟ್ ಕೊಟ್ಟೇ ಕೊಡುತ್ತೇವೆ ಎಂದು ಮಾತು ನೀಡಿರಲಿಲ್ಲ. ಖಂಡಿತವಾಗಿಯೂ ಅವರಿಗೆ ನಾವು ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡುತ್ತೇವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸಫಾರಿ ವಿಚಾರವಾಗಿ ಕುಹಕವಾಡಿದ ಡಿಕೆಶಿ, ಅವರ ಪಾರ್ಟಿ ರಾಜ್ಯದಲ್ಲಿ ಬಿದ್ದು ಹೋಗಿದೆ ಎಂಬ ಸತ್ಯ ಅವರಿಗೂ ತಿಳಿದಿದೆ. ಹೀಗಾಗಿಯೇ ಹುಲಿ ನೋಡಿಕೊಂಡು ಪಕ್ಷವನ್ನು ಮೇಲೆತ್ತಲು ಬಂದಿದ್ದಾರೆ. 10ನೇ ತಾರೀಖು ಈ ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.