ಕರ್ನಾಟಕ ಸೇರಿದಂತೆ ತಮಿಳುನಾಡು ಮತ್ತು ಕೇರಳ ರಾಜ್ಯದ ಒಟ್ಟು ಆರು ನಕ್ಸಲರು ಇಂದು ಶರಣಾಗತಿಗೆ ಒಪ್ಪಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಟ್ವೀಟ್ ಮಾಡಿದ್ದಾರೆ.

ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳುತ್ತಿರುವ ಆರು ಜನ ನಕ್ಸಲೀಯರ ನಿರ್ಧಾರವನ್ನು ಸ್ವಾಗತ್ತಿಸುತ್ತೇನೆ. ನಕ್ಸಲರ ಶರಣಾಗತಿಯಿಂದ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಲಿದೆ. ಹಿಂಸೆ ಮತ್ತು ಕ್ರೌರ್ಯದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಸತ್ಯ ನಕ್ಸಲ್ ಚಳವಳಿಯಲ್ಲಿ ತೊಡಗಿದ್ದವರಿಗೆ ಅರಿವಾಗಿದೆ. ಹಿಂಸಾಮಾರ್ಗವನ್ನು ತ್ಯಜಿಸುವ ಮೂಲಕ ಎಲ್ಲರೊಂದಿಗೆ ಘನತೆಯಿಂದ ಬದುಕುವ ಆಯ್ಕೆ ಮಾಡಿಕೊಂಡ ನಕ್ಸಲ್ ಚಳವಳಿಗಾರರಿಗೆ ಶುಭವಾಗಲಿ.
ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಮಧ್ಯಸ್ಥಿಕೆ ವಹಿಸಿದ ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಶರಣಾದ ನಕ್ಸಲರ ಬದುಕು ರೂಪಿಸುವಲ್ಲಿ ನಮ್ಮ ಸರ್ಕಾರ ಕೂಡ ರಚನಾತ್ಮವಾಗಿ ಕ್ರಮ ವಹಿಸುವ ಜೊತೆಗೆ ನಕ್ಸಲರ ಕೆಲ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಸಚಿವ ದಿನೇ ಗುಂಡೂ ರಾವ್ ಟ್ವೀಟ್ ಮಾಡಿದ್ದಾರೆ.