• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, November 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..

ಪ್ರತಿರೋಧದ ಜನದನಿಯನ್ನು ಅಡಗಿಸುವುದು ಪ್ರಜಾಪ್ರಭುತ್ವ ಅವಸಾನಕ್ಕೆ ದಾರಿ

ನಾ ದಿವಾಕರ by ನಾ ದಿವಾಕರ
October 15, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..
Share on WhatsAppShare on FacebookShare on Telegram

ಭಾಗವಾದ-1

ADVERTISEMENT

ನಾ ದಿವಾಕರ : ಹಿರಿಯ ಲೇಖಕರು..

ಸ್ವತಂತ್ರ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರಂಭದ ದಿನಗಳಿಂದಲೂ ಎರಡು ಸಮಾನ ಎಳೆಗಳನ್ನು ಗುರುತಿಸಬಹುದು. ಮೊದಲನೆಯದು ಚುನಾಯಿತ ಸರ್ಕಾರಗಳು ಸದಾ ಕಾಲವೂ ತನ್ನ ಸಾಂವಿಧಾನಿಕ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಬರುತ್ತಿವೆ. ಎರಡನೆಯದು ಪ್ರತಿಯೊಂದು ಸರ್ಕಾರವೂ ತಳಸಮಾಜದ ಜನಸಮುದಾಯಗಳ ಪ್ರತಿರೋಧ-ಹಕ್ಕೊತ್ತಾಯದ ದನಿಗಳನ್ನು ಅಡಗಿಸಲು ಕಾನೂನಾತ್ಮಕವಾಗಿ ಸಜ್ಜಾಗಿರುತ್ತವೆ. ಈ ಎರಡೂ ಲಕ್ಷಣಗಳನ್ನು ಸಂಧಿಸುವ ಆಡಳಿತಾತ್ಮಕ ಪ್ರಕ್ರಿಯೆ ಎಂದರೆ ʼ ಕಾನೂನು ಸುವ್ಯವಸ್ಥೆ ʼಯ ಹೆಸರಿನಲ್ಲಿ ಕೈಗೊಳ್ಳಲಾಗುವ ನಿಯಂತ್ರಣ-ನಿರ್ಬಂಧದ ಕ್ರಮಗಳು ಮತ್ತು ಬಾಧಿತ-ಅವಕಾಶವಂಚಿತ-ಸಂತ್ರಸ್ತ ಜನತೆಯ ನೋವು-ಆಕ್ರೋಶದ ದನಿಗಳನ್ನು ʼ ದೇಶವಿರೋಧಿ ʼ (Anti national) ಎಂದು ವ್ಯಾಖ್ಯಾನಿಸುವುದು. ಚುನಾಯಿತ ಪಕ್ಷ ಮತ್ತು ಅವುಗಳ ಸೈದ್ಧಾಂತಿಕ ನಿಲುವುಗಳನ್ನೂ ಮೀರಿ ಗುರುತಿಸಬಹುದಾದ ಸಮಾನ ಆಲೋಚನಾ ಕ್ರಮ ಇದು. (ತುರ್ತುಪರಿಸ್ಥಿತಿಯಲ್ಲಿ ಎಲ್ಲ ವಿರೋಧಿ ದನಿಗಳನ್ನೂ ದೇಶದ್ರೋಹಿ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು)

Diwali Prank Turned Into Nightmare  Veeramani : ಸ್ವೀಟ್ ಬಾಕ್ಸ್ ಕೇಳಿದ್ದ  ವೀರಮಣಿಗೆ ಮುಂದೇನಾಯ್ತು ನೋಡಿ..!

ಜೆನ್ ಝಿ ಎಂದು ಬಣ್ಣಿಸಲಾಗುವ ಯುವ ಜನಾಂಗ ಈ ವಾಸ್ತವಗಳಿಗೆ ಈಗ ತೆರೆದುಕೊಳ್ಳುತ್ತಿದೆ. ಭಾರತದ ಪ್ರಜಾಪ್ರಭುತ್ವ ಈ 80 ವರ್ಷಗಳಲ್ಲಿ ಪ್ರಬುದ್ಧತೆಯನ್ನು ಪಡೆಯಬೇಕಿತ್ತು. ಅಂದರೆ ತಳಸಮಾಜದ ಜನತೆಯ ದನಿಯನ್ನು ಸಂಯಮದಿಂದ ಆಲಿಸುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಚೌಕಟ್ಟಿನೊಳಗೆ ಜನರ ಸಂಕಟಗಳನ್ನು ಪರಿಹರಿಸುವ ವ್ಯವಧಾನವನ್ನು ಪಡೆಯಬೇಕಿತ್ತು. ಜನತೆಯ ಪ್ರತಿರೋಧದ ದನಿಗೆ ಗೌರವ-ಸಮ್ಮಾನ ಹೆಚ್ಚಾಗಬೇಕಿತ್ತು. ಚುನಾಯಿತ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಎಲ್ಲರೊಳಗೊಂದಾಗಿರುವ ಔದಾತ್ಯವನ್ನು ರೂಢಿಸಿಕೊಳ್ಳಬೇಕಿತ್ತು. ಶಾಸನ ಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ʼ ಮತದಾನದ ಹಕ್ಕು ʼ (Voting Right) ಪ್ರತಿಯೊಬ್ಬ ಪ್ರಜೆಯ ಜೀವಮಾನದ ಹಕ್ಕು ಆಗಬೇಕಿತ್ತು.

ಮತ ಚಲಾವಣೆಯ ಹಕ್ಕು-ಜವಾಬ್ದಾರಿ

ʼ ಒಬ್ಬ ವ್ಯಕ್ತಿ ಒಂದು ಮತ ಒಂದು ಮೌಲ್ಯ ʼ ಎಂಬ ಉದಾತ್ತ ತತ್ವಶಾಸ್ತ್ರೀಯ ಕಲ್ಪನೆ ಕೇವಲ ಅಕ್ಷರ ಪಾಂಡಿತ್ಯದ ಗ್ರಾಂಥಿಕ ಪದಗಳಲ್ಲ. ಅದರ ಹಿಂದೆ ಒಂದು ಭೌಗೋಳಿಕ ರಾಷ್ಟ್ರವನ್ನು ನಿರಂತರವಾಗಿ ಪ್ರಗತಿಪಥದಲ್ಲಿ ಕರೆದೊಯ್ಯುವ ವಿಶಾಲ ಪರಿಕಲ್ಪನೆ ಇದೆ. ಮತ ಚಲಾವಣೆಯ ಸಾಂವಿಧಾನಿಕ ಪ್ರಕ್ರಿಯೆಯನ್ನು ನಾವು ʼಮತದಾನ ʼ ಎಂದು ಕರೆಯುವ ಮೂಲಕ ಅದರ ಅಂತಃಸತ್ವವನ್ನು ಹೀರಿಬಿಟ್ಟಿದ್ದೇವೆ. 18 ವರ್ಷಕ್ಕೂ ಮೇಲ್ಪಟ್ಟ ಭಾರತದ ಯಾವುದೇ ವ್ಯಕ್ತಿ ತನ್ನಿಚ್ಛೆಯ ಅನುಸಾರ, ಆಡಳಿತ ನಡೆಸುವ ಪ್ರತಿನಿಧಿಯನ್ನು ಆಯ್ಕೆ ಮಾಡಲು ಇರುವ ಸಾಂವಿಧಾನಿಕ ಸಾಧನ ʼ ಮತ ʼ (Vote). ಈ ಮತ ವ್ಯಕ್ತಿಯ ಜೋಳಿಗೆಯಲ್ಲಿರುವ ಸಾಧನವಲ್ಲ. ತನಗೆ ಬೇಕಾದವರಿಗೆ ದಾನ ಮಾಡುವುದಲ್ಲ. ಬದಲಾಗಿ ಸಂವಿಧಾನದ ನಿಯಮ-ಆಶಯಗಳ ಅನುಸಾರ ತಮ್ಮ ಬದುಕುವ ಹಾದಿಯನ್ನು ನಿರ್ವಹಿಸುವ ಮೇಲ್ವಿಚಾರಕರನ್ನು ಶಾಸನಸಭೆಗೆ ಕಳುಹಿಸಲು ಪ್ರತಿ ವ್ಯಕ್ತಿಯೂ ಬಳಸಬಹುದಾದ ಒಂದು ಸಾಂವಿಧಾನಿಕ ಅಸ್ತ್ರ (Constitutional Weapon) ̤

ಮೊದಲ ಹಂತದಲ್ಲಿ ಶೇ.60 ಮತದಾನ | ಪಶ್ಚಿಮ ಬಂಗಾಳ, ಮಣಿಪುರ ಹೊರತುಪಡಿಸಿ ಬಹುತೇಕ ಶಾಂತ

ಸಾರ್ವಭೌಮ ಪ್ರಜೆಗಳ ಬತ್ತಳಿಕೆಯಲ್ಲಿರುವ ಈ ಸಾಂವಿಧಾನಿಕ ಅಸ್ತ್ರವನ್ನು ಕಾಲಕಾಲಕ್ಕೆ ಬಳಸಲು ಅನುಕೂಲ ಮಾಡಿಕೊಡುವುದು ಆಳುವ ಸರ್ಕಾರಗಳ ಜವಾಬ್ದಾರಿ. ಭಾರತೀಯ ಚುನಾವಣಾ ಆಯೋಗ (ECI) ಈ ಹೊಣೆಗಾರಿಕೆಯನ್ನು ನಿಭಾಯಿಸಲು ನಿಯೋಜಿಸಿರುವ ಸಾಂವಿಧಾನಿಕ ಸಂಸ್ಥೆ. ಈ ಸಂಸ್ಥೆಯ ಮೂಲ ಧ್ಯೇಯ ʼಎಲ್ಲರನ್ನೊಳಗೊಳ್ಳುವ ʼ (All inclusive) ರಾಜಕೀಯ ವಾತಾವರಣವನ್ನು ಚುನಾವಣೆಗಳ ಮೂಲಕ ಸೃಷ್ಟಿಸುವುದು. ಮತದಾರರ ಪಟ್ಟಿ (Electoral roll) ಇದನ್ನು ಆಗುಮಾಡುವ ಕಡತ ಮಾತ್ರ. 1952ರ ಮೊದಲ ಚುನಾವಣೆಗಳಿಂದ ಈ ಹೊತ್ತಿನವರೆಗೂ ಸ್ವತಂತ್ರ ಭಾರತ ಈ ಕ್ರಿಯಾಶೀಲ ತತ್ವವನ್ನೇ ಆಧರಿಸಿ 80 ವರ್ಷಗಳನ್ನು ಪೂರೈಸಿದೆ. ಬಿಜೆಪಿಯ ಹಿಂದುತ್ವ ರಾಜಕಾರಣ ಮತ್ತು ಫ್ಯಾಸಿಸ್ಟ್ ಆಡಳಿತ ತಂತ್ರಗಳು ಈ ಸುದೀರ್ಘ ಪಯಣಕ್ಕೆ ಕಡಿವಾಣ ಹಾಕಲು ಮತದಾನ ವ್ಯವಸ್ಥೆಯನ್ನೇ ತನ್ನ ಗುರಿಸಾಧನೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.

ಇದನ್ನೂ ಓದಿ : ದೆಹಲಿ ಪ್ರತಿಭಟನೆಯಲ್ಲಿ ಏನಾಯಿತು? ರಾಹುಲ್ ಗಾಂಧಿ ಬಗ್ಗೆ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

ಚುನಾವಣಾ ಆಯೋಗದ ಜವಾಬ್ದಾರಿ

ಬಿಜೆಪಿಯ ಈ ರಾಜಕೀಯ ತಂತ್ರಗಾರಿಕೆಯ ಫಲ ಎಸ್ಐಆರ್ (SIR) ಎಂಬ ಸಾಂವಿಧಾನಿಕ ಪ್ರಕ್ರಿಯೆ. ಇದನ್ನು ನಿರ್ವಹಿಸುತ್ತಿರುವ ರೀತಿಯನ್ನು ಅಸಾಂವಿಧಾನಿಕ ಎಂದೇ ಹಲವು ತಜ್ಞರು ಪ್ರತಿಪಾದಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗಾಗಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಗಳು ಒಂದೆಡೆ ಭಾರತೀಯ ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಸೂಚಿಸುತ್ತಿರುವಂತೆಯೇ ಮತ್ತೊಂದೆಡೆ ಈ ಪ್ರಜಾಸತ್ತೆಯನ್ನು ನಿರ್ವಹಿಸಲು ಚುನಾಯಿಸಲಾಗಿರುವ ಸರ್ಕಾರದ ನಿರಂಕುಶಾಧಿಕಾರವನ್ನೂ ಎತ್ತಿ ತೋರಿಸುತ್ತಿದೆ. ಕಳೆದ ಹಲವು ದಿನಗಳ ಬೆಳವಣಿಗೆಗಳ ಮೂಲಕ , ದೆಹಲಿ ಗಣತಂತ್ರ ಭಾರತದ ಭೌಗೋಳಿಕ ರಾಜಧಾನಿಯ ರೂಪವನ್ನು ಕಳೆದುಕೊಂಡು, ಆಡಳಿತಾರೂಢ ಸರ್ಕಾರವನ್ನು ರಕ್ಷಿಸುವ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. 2020ರ ರೈತ ಮುಷ್ಕರದ ಸಂದರ್ಭದಲ್ಲಿ ಹುಟ್ಟಿಕೊಂಡ ʼ ಆಡಳಿತ ಕ್ರೌರ್ಯ ʼ (Administrative Cruelty) ಕೇವಲ ಆರೇ ವರ್ಷಗಳಲ್ಲಿ ಸಾಂಸ್ಥಿಕ ವ್ಯವಸ್ಥೆಯಾಗಿ (Institutional System) ಅನಾವರಣಗೊಂಡಿದೆ.

ಎಸ್ಐಆರ್ ಪ್ರಕ್ರಿಯೆಯ ಅಸಾಂವಿಧಾನಿಕ ಲಕ್ಷಣಗಳನ್ನು ಹಲವಾರು ಸಂವಿಧಾನ ತಜ್ಞರು, ವಿಶ್ಲೇಷಕರು ತಮ್ಮ ಲೇಖನಗಳಲ್ಲಿ ವ್ಯಾಖ್ಯಾನಿಸಿದ್ದಾರೆ. 13 ಕೋಟಿ ಮತದಾರರನ್ನು ಅಳಿಸಿಹಾಕಿರುವ ಈ ಪ್ರಕ್ರಿಯೆ ಭೌಗೋಳಿಕ ಭಾರತವನ್ನು ಭಂಗಗೊಳಿಸುವುದಿಲ್ಲ ಆದರೆ ಆಂತರಿಕವಾಗಿ ಭಾರತದ ಸಾಮಾಜಿಕ ಸಂರಚನೆಯನ್ನೇ ಬುಡಸಮೇತ ಅಲುಗಾಡಿಸುತ್ತದೆ. ಸ್ವತಂತ್ರ ಭಾರತದಲ್ಲಿ ಅವಕಾಶವಂಚಿತ, ಆದಾಯ ವಂಚಿತ, ಬದುಕು ವಂಚಿತ, ಸೌಲಭ್ಯವಂಚಿತ ಸಮುದಾಯಗಳು ಸೃಷ್ಟಿಯಾಗುತ್ತಲೇ ಇವೆ. ಈಗ ಎಸ್ಐಆರ್ ಪ್ರಕ್ರಿಯೆ ʼ ಮತವಂಚಿತ ʼ ಸಮಾಜವನ್ನೂ ಸೃಷ್ಟಿಸಿದೆ. ಸಂವಿಧಾನ ಕಲ್ಪಿಸಿದ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಕೋಟ್ಯಂತರ ಮಂದಿ ʼ ಇತರ ವಂಚಿತ ಸಮಾಜಗಳ ʼ ಒಂದು ಭಾಗವಾಗಿರುವುದು ಕಾಕತಾಳೀಯವೇನಲ್ಲ.

SIR phase 2 begins in 12 states, UTs; final roll on February 7 - The Economic Times

ಈ ಮತವಂಚಿತ ಸಮಾಜಗಳನ್ನು ಮತ-ಧರ್ಮ-ಜಾತಿ-ಲಿಂಗತ್ವದ ಆಧಾರದಲ್ಲಿ ವರ್ಗೀಕರಿಸುವುದಕ್ಕೂ ಮುನ್ನ ಇದರಿಂದ ಉದ್ಭವಿಸಬಹುದಾದ ಸಾಮಾಜಿಕ ಕಂಪನಗಳನ್ನು ಗಮನಿಸಬೇಕಿದೆ. ಮತದಾನದ ಹಕ್ಕು ಕಳೆದುಕೊಳ್ಳುವ ಜನತೆಯ ಭವಿಷ್ಯ ಏನಾಗಲಿದೆ ? ಇದಕ್ಕೆ ಸ್ಪಷ್ಟ ಉತ್ತರ ನೀಡುವ ಏಜೆನ್ಸಿ ಯಾವುದೂ ಇಲ್ಲ. ಆದರೆ ಈ ಮತವಂಚಿತ ಸಮುದಾಯ ದೇಶದ ಮೂಲೆ ಮೂಲೆಯಲ್ಲೂ ತಮ್ಮದೇ ಆದ ಗೂಡುಗಳಲ್ಲಿ ನಿರ್ಬಂಧಿತರಾಗುತ್ತಾರೆ. ಮತದಾರರ ಪಟ್ಟಿ ಪೌರತ್ವದ ಪ್ರಮಾಣೀಕರಣ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಸಹ, ತಳಸಮಾಜದ ನಿತ್ಯ ಬದುಕಿನಲ್ಲಿ ಈ ಸಾಂವಿಧಾನಿಕ ಉಪವ್ಯಾಖ್ಯಾನಗಳು ಪ್ರಭಾವ ಬೀರುವುದಿಲ್ಲ. ದಶಕಗಳಿಂದ ತಾವು ಬಾಳಿ ಬದುಕಿದ ಸಮಾಜಗಳಲ್ಲೇ ಈ ʼಮತವಂಚಿತರುʼ ಪ್ರತ್ಯೇಕೀಕರಣದ (Seperatism) ಅಪಾಯಕ್ಕೊಳಗಾಗುತ್ತಾರೆ. ಒಳಗಿನವರಾಗಿದ್ದವರೆಲ್ಲ ಹೊರಗುಳಿದವರಾಗುತ್ತಾರೆ. ಕಳೆದ ಮೂರೂವರೆ ದಶಕಗಳ ಬಲಪಂಥೀಯ ರಾಜಕಾರಣ ಕಟ್ಟಿರುವ ಗೋಡೆಗಳು, ತೋಡಿರುವ ಕಂದಕಗಳು ಮತ್ತಷ್ಟು ವ್ಯಾಪಿಸಿ ಹೊಸತನ್ನು ಕಾಣುವ ಸಾಧ್ಯತೆಗಳೇ ಹೆಚ್ಚು.

ಅಂಕಿಸಂಖ್ಯೆಗಳಿಂದಾಚೆಗಿನ ಸಮಾಜ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) 2025ರ ಬಿಹಾರ ಚುನಾವಣೆಗಳಿಗೂ ಮುನ್ನ ಆರಂಭವಾದ ದಿನದಿಂದಲೂ ಸಂವಿಧಾನ ತಜ್ಞರು, ರಾಜಕೀಯ ವಿಶ್ಲೇಷಕರು, ನಿವೃತ್ತ ಚುನಾವಣಾ ಆಯುಕ್ತರನ್ನೂ ಸೇರಿದಂತೆ ಹಲವಾರು ಬೌದ್ಧಿಕ ಚಿಂತಕರು ಈ ಉಪಕ್ರಮದ ಸಾಂವಿಧಾನಿಕ ಔಚಿತ್ಯವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಎಸ್ಐಆರ್ ಪ್ರಶ್ನೆಗೊಳಗಾಗುವುದಕ್ಕಿಂತಲೂ ಇದನ್ನು ನಡೆಸಿರುವ ರೀತಿ ಮತ್ತು ಅನುಸರಿಸಿದ ಪ್ರಕ್ರಿಯೆಗಳು ಪ್ರಶ್ನಾತೀತವಾಗಿ ಉಳಿದಿಲ್ಲ. ಕೇಂದ್ರ ಎನ್ಡಿಎ ಸರ್ಕಾರದ ದೃಷ್ಟಿಯಲ್ಲಿ ಧಿಮಾಗಿ ನಕ್ಸಲರಾಗಿ ಅಥವಾ ಕಾಂಗ್ರೆಸ್ ಏಜೆಂಟರಾಗಿ ಕಾಣಬಹುದಾದ ಈ ನಿವೃತ್ತ-ಹಿರಿಯ ಅಧಿಕಾರಿಗಳು ಸಾಕ್ಷಿ ಪುರಾವೆ, ಅಂಕಿ ಅಂಶಗಳೊಂದಿಗೆ ತಮ್ಮ ವಾದ ಮಂಡಿಸಿದ್ದಾರೆ.

𝐁𝐈𝐇𝐀𝐑 𝐒𝐈𝐑 𝟐𝟎𝟐𝟓 "𝐀 𝐏𝐮𝐫𝐞 𝐄𝐥𝐞𝐜𝐭𝐨𝐫𝐚𝐥 𝐑𝐨𝐥𝐥 𝐢𝐬 𝐭𝐡𝐞 𝐅𝐨𝐮𝐧𝐝𝐚𝐭𝐢𝐨𝐧 𝐨𝐟 𝐚 𝐬𝐭𝐫𝐨𝐧𝐠 𝐃𝐞𝐦𝐨𝐜𝐫𝐚𝐜𝐲" #𝐁𝐢𝐡𝐚𝐫 #𝐒𝐈𝐑 #𝐄𝐂𝐈 Election Commission of India

ಆದರೆ ಈ ಆಕ್ಷೇಪಣೆ, ವಿಮರ್ಶೆಗಳೆಲ್ಲವೂ ಕೇವಲ ಬೌದ್ಧಿಕ ಕಸರತ್ತುಗಳಾಗಿ ಉಳಿದಿವೆ. ಬಿಜೆಪಿ ಕಳೆದ 12 ವರ್ಷಗಳಲ್ಲಿ ಬೆಳೆಸಿರುವ ಒಂದು ಆಡಳಿತ ಮಾದರಿಯಲ್ಲಿ, ಸರ್ಕಾರದ ನೀತಿಯನ್ನು ಒಪ್ಪದ ಯಾವುದೇ ಅಭಿಪ್ರಾಯಕ್ಕೆ, ಎಷ್ಟೇ ವಿದ್ವತ್ ಪೂರ್ಣವಾಗಿದ್ದರೂ ಸಹ, ಮನ್ನಣೆ ಇರುವುದಿಲ್ಲ. ಎಸ್ಐಆರ್ ವಿರೋಧಿ ದನಿಯೂ ಸಹ ಇದೇ ದುರ್ಗತಿಯನ್ನು ಎದುರಿಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿ ಮತ್ತು ಏಕಪಕ್ಷೀಯ ನಿರ್ಧಾರಗಳು ಇಡೀ ದೇಶವನ್ನು ಜಂತರ್-ಮಂತರ್ 2.0 ಬಳಿ ತಂದು ನಿಲ್ಲಿಸಿದೆ. ಹಾಗಾಗಿ ಆಯುಕ್ತರ ರಾಜೀನಾಮೆಯ ಬೇಡಿಕೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಆದರೆ “ ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜೀನಾಮೆ ನೀಡುವ ಪರಂಪರೆಗೆ ಎಂದೋ ತಿಲಾಂಜಲಿ ನೀಡಿರುವ ” ಕೇಂದ್ರ ಸರ್ಕಾರಕ್ಕೆ ಈ ಬೇಡಿಕೆಯೂ ʼ ಸರ್ಕಾರವನ್ನು ಅಸ್ತಿರಗೊಳಿಸುವ ದೇಶ ವಿರೋಧಿ ʼ ನಡೆಯಾಗಿ ಕಾಣುತ್ತಿದೆ.

ಮತವಂಚಿತ ಸಮಾಜದ ಆಂತರಿಕ ವೇದನೆ

ವಿಕಸಿತ ಭಾರತ ಸೃಷ್ಟಿಸಿರುವ ಹೊಸ ʼ ಮತವಂಚಿತ ಸಮಾಜʼವನ್ನು ಪ್ರತಿನಿಧಿಸುವ ಬಾಧಿತರು, ಸಂತ್ರಸ್ತರು ಮತ್ತು ಹಕ್ಕು ವಂಚಿತರು ಅಕ್ಷರಶಃ ವಲಸೆ ಕಾರ್ಮಿಕರ ಸ್ಥಿತಿಯಲ್ಲಿರುವುದು ವಾಸ್ತವ. 75 ವರ್ಷಗಳಿಗೂ ಹೆಚ್ಚು ಕಾಲ ʼ ಒಳಗೊಳ್ಳುವ ʼ (Inclusion) ಸಾಂವಿಧಾನಿಕ ಪ್ರಕ್ರಿಯೆಯ ಉಸ್ತುವಾರಿ ವಹಿಸಿರುವ ಚುನಾವಣಾ ಆಯೋಗ, ಮೊಟ್ಟಮೊದಲ ಬಾರಿಗೆ ಮತದಾರರನ್ನು ʼ ಹೊರಗುಳಿಸುವ ʼ (Exclusion) ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 1951-52ರ ಪ್ರಥಮ ಮಹಾಚುನಾವಣೆಗಳತ್ತ ಒಮ್ಮೆ ತಿರುಗಿ ನೋಡಿದರೂ ಚುನಾವಣಾ ಆಯೋಗ ಎಂಬ ಸಂಸ್ಥೆಯ ಬಗ್ಗೆ ಹೆಮ್ಮೆ ಗೌರವ ಇಮ್ಮಡಿಯಾಗುತ್ತದೆ. ಆ ಚುನಾವಣೆಗಳಲ್ಲಿ 17 ಕೋಟಿ ಮತದಾರರನ್ನು ಒಳಗೊಳ್ಳಲು ಅನುಸರಿಸಿದ ಸಾಂವಿಧಾನಿಕ ಉಪಕ್ರಮಗಳು ʼಒಳಗೊಳ್ಳುವʼ ಪ್ರಕ್ರಿಯೆಗೆ ಅತ್ಯುತ್ತಮ ನಿದರ್ಶನ. ಶೇಕಡಾ 80ಕ್ಕಿಂತಲೂ ಹೆಚ್ಚು ಅನಕ್ಷರಸ್ಥರನ್ನೊಳಗೊಂಡ ಮತದಾರ ಸಮೂಹದಲ್ಲಿ ಯಾರೂ ʼಮತವಂಚಿತರುʼ ಎನಿಸಿಕೊಳ್ಳಕೂಡದು ಎಂಬ ಔದಾತ್ಯವನ್ನು ಅಲ್ಲಿ ಗುರುತಿಸಬಹುದು.

Sugarcane Farmers Protest : ಹಲವು ಮಾರ್ಗಗಳಲ್ಲಿ ವಾಹನಗಳ ಸಂಚಾರ ಬದಲಾವಣೆ..! #farmer #protest

ಕೇವಲ ಎಂಟು ದಶಕಗಳಲ್ಲಿ ಭಾರತದ ಪ್ರಜಾಸತ್ತೆ ತನ್ನ ಈ ಔದಾತ್ಯವನ್ನು ಮರೆತಿರುವುದು ದುರದೃಷ್ಟಕರ ಬೆಳವಣಿಗೆ. ತದನಂತರದ ಪ್ರತಿ ಚುನಾವಣೆಗಳಲ್ಲೂ ಚುನಾವಣಾ ಆಯೋಗಗಳಿಗೆ ಸಾರ್ವತ್ರಿಕ ವಯಸ್ಕ ಮತದಾನದ (Universal Adult Franchise) ನೀತಿ ಕೇವಲ ಗ್ರಾಂಥಿಕ ಕಾನೂನು ಆಗಿ ಕಂಡಿರಲಿಲ್ಲ. ಭಾರತದ ಜನರಾದ ನಾವು (We the People of India) ಎಂದು ಎದೆಯುಬ್ಬಿಸಿ ಹೇಳುವ ಪ್ರತಿಯೊಬ್ಬ ನಾಗರಿಕರಿಗೂ ಈ ನೀತಿಯನ್ನು ಅನ್ವಯಿಸುವುದು ಚುನಾವಣಾ ಆಯೋಗ ಈಡೇರಿಸಬೇಕಾದ ಭರವಸೆಯಂತೆ ಕಾಣುತ್ತಿತ್ತು. ವಿಶ್ವದ ಯಾವುದೇ ಪ್ರಜಾಪ್ರಭುತ್ವದಲ್ಲಿ ಕಾಣಲಾಗದ ಒಂದು ಸೌಂದರ್ಯ ಭಾರತದಲ್ಲಿ ಕಾಣುವುದಾದರೆ ಅದು ಚುನಾವಣೆಗಳಲ್ಲಿ ಮತ ಚಲಾಯಿಸುವವರ ಪೈಕಿ ಬಡಜನರೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ತಾವು ಕನಸಿದ ಸುಂದರ ಬದುಕು ಬಹುದೂರ ಇದೆ ಎಂದು ಅರಿತಿದ್ದರೂ, ಈ ಬಡಜನತೆ ಕಾಲಕಾಲಕ್ಕೆ ನಡೆಯುವ ಚುನಾವಣೆಗಳಲ್ಲಿ ತಮ್ಮ ಆಯ್ಕೆಯನ್ನು ವ್ಯಕ್ತಪಡಿಸುತ್ತಲೇ ಬಂದಿರುವುದು ಅಪೂರ್ವ ಸಂಗತಿ.

ವಿಪರ್ಯಾಸವೆಂದರೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಮತವಂಚಿತರಾಗಿರುವವರೂ ಇದೇ ಸಮಾಜಗಳನ್ನು ಪ್ರತಿನಿಧಿಸುತ್ತಾರೆ. 30 ರಾಜ್ಯಗಳ ಎಸ್ಐಆರ್ ಕರಡು ಮತದಾರರ ಪಟ್ಟಿಯಲ್ಲಿ 13.67 ಕೋಟಿ ಜನರ ಹೆಸರು ಅಳಿಸಿಹೋಗಿದೆ. ಈಗ ಚುನಾವಣಾ ಆಯೋಗವು ಮತದಾನದ ಹಕ್ಕಿನಿಂದ ವಂಚಿತರಾದವರನ್ನು ಮರಳಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಹಾಗಾದರೆ ಎಸ್ಐಆರ್ ಕಾರ್ಯಾಚರಣೆಯ ಉದ್ದೇಶವೇನಿತ್ತು ? ಈ ಮತವಂಚಿತರಿಗಾಗಿ ಮತ್ತೊಂದು ವಿಶೇಷ ಕಾರ್ಯಾಚರಣೆಯನ್ನು ನಡೆಸುವುದಾಗಿ ಘೋಷಿಸಿ ಮುಖ್ಯ ಚುನಾವಣಾ ಆಯೋಗ ಇಡೀ ಪ್ರಕ್ರಿಯೆಯ ಔಚಿತ್ಯವನ್ನೇ ಪ್ರಶ್ನಾರ್ಹವಾಗಿಸಿದೆ. ಈ ನಡುವೆಯೇ ಇಂಡಿಯನ್ ಎಕ್ಸ್ಪ್ರೆಸ್ ಪತ್ರಕರ್ತೆ ರಿತಿಕಾ ಚೋಪ್ರಾ ಬಹಿರಂಗಪಡಿಸಿದ ವರದಿಯೊಂದು ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಆಂತರಿಕ ವೈರುಧ್ಯಗಳನ್ನು ಸ್ಪಷ್ಟವಾಗಿ ತೆರೆದಿಟ್ಟಿದೆ.

ಸಂವಿಧಾನದ ಚೌಕಟ್ಟಿನಲ್ಲಿ

ಭಾರತೀಯ ಚುನಾವಣಾ ಆಯೋಗದ ಇಬ್ಬರು ಆಯುಕ್ತರು ವ್ಯಕ್ತಪಡಿಸಿರುವ ಆಕ್ಷೇಪಗಳು ಮತ್ತು ಸಲ್ಲಿಸಿರುವ ದೂರುಗಳು ಇಡೀ ವ್ಯವಸ್ಥೆಯನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿದೆ. ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಹತ್ತು ತಿಂಗಳ ಅವಧಿಯಲ್ಲಿ ಆಯೋಗದ ಕಾರ್ಯನಿರ್ವಹಣೆಯ ವಿರುದ್ಧ 14 ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವುದು, ಈ ಎಲ್ಲ ದೂರುಗಳನ್ನೂ ಮುಖ್ಯ ಆಯುಕ್ತರು ನಿರ್ಲಕ್ಸಿಸಿರುವುದು , ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಏಕಪಕ್ಷೀಯ ನಡೆಯನ್ನು ಖಚಿತಪಡಿಸುತ್ತದೆ. ಆಯೋಗದ ಕಾರ್ಯಾಚರಣೆಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿಯೇ ರೂಪಿಸಿದ ECINet , ರಾಜ್ಯಗಳ ಚುನಾವಣಾ ಆಯುಕ್ತರಿಗೇ ಅಲಭ್ಯವಾಗತೊಡಗಿದ್ದು, ಈ ವಿದ್ಯುನ್ಮಾನ ವೇದಿಕೆಯನ್ನು ಕೇಂದ್ರೀಕರಿಸುವ ಮೂಲಕ ನಿಯಂತ್ರಣಾಧಿಕಾರವನ್ನು ದೆಹಲಿಗೆ ರವಾನಿಸಿರುವುದು, ಆಯೋಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಾಗಿತ್ತು.

ಭಾರತೀಯ ಚುನಾವಣಾ ಆಯೋಗದ ಆಂತರಿಕ ವೈರುಧ್ಯ ಮತ್ತು ತಗಾದೆಗಳನ್ನು ಗಮನಿಸಿದರೆ, ಒಂದು ಜವಾಬ್ದಾರಿಯುತ ಸಾಂವಿಧಾನಿಕ ಸಂಸ್ಥೆ ಹೇಗೆ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಸುಪ್ರೀಂಕೋರ್ಟ್ ನ್ಯಾಯಾಧೀಶ ಉಜ್ವಲ್ ಭುಯಾನ್ ತಮ್ಮ ಉಪನ್ಯಾಸವೊಂದರಲ್ಲಿ “ ಭಾರತದ ಪ್ರಜೆಗಳನ್ನು ಸಾಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವ ಯಾವುದೇ ಪ್ರಕ್ರಿಯೆ ಸಂವಿಧಾನದ ಅನುಚ್ಛೇದ 326 ಮತ್ತು 14ರ ನೇರ ಉಲ್ಲಂಘನೆಯಾಗುತ್ತದೆ. ಇಂತಹ ಯಾವುದೇ ಪ್ರಕ್ರಿಯೆಯ ಮೂಲಕ ಕೋಟ್ಯಂತರ ಪ್ರಜೆಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕುವುದು ಅಥವಾ ಈ ಹಕ್ಕುಗಳನ್ನು ಕಳೆದುಕೊಂಡ ಕಾರಣಕ್ಕಾಗಿ ಅವರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ಪರಿಗಣಿಸುವುದು ನಿರಂಕುಶ (Arbitrary) ಕ್ರಮವಾಗುತ್ತದೆ. ಇದು ಸಂವಿಧಾನದ ಬುಡಕ್ಕೇ ಪೆಟ್ಟು ನೀಡುತ್ತದೆ ,,,,” ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರನ್ನು ಅಳಿಸಿಹಾಕಲು ಚುನಾವಣಾ ಆಯೋಗಕ್ಕೆ ಸಾಂವಿಧಾನಿಕ ಹಕ್ಕು ಇರುವುದಿಲ್ಲ. ಆದರೆ ನಮೂನೆ 7ರ (Form 7) ಮೂಲಕ , ನಾಗರಿಕರೇ ಆಯೋಗಕ್ಕೆ ಅರ್ಜಿ ಸಲ್ಲಿಸಿ ಕೆಲವು ಮತದಾರರ ಹೆಸರನ್ನು ತೆಗೆದುಹಾಕಲು ಸೂಚಿಸುವ ಒಂದು ಪ್ರಕ್ರಿಯೆ ಇಡೀ ಎಸ್ಐಆರ್ ಪ್ರಕ್ರಿಯೆಯನ್ನು ಕಲುಷಿತಗೊಳಿಸಿದೆ. ಈ ನಾಗರಿಕ ಅರ್ಜಿಗಳನ್ನು ಆಧರಿಸಿ ಆಯೋಗ ಮತದಾರರ ಹೆಸರುಗಳನ್ನು ತೆಗೆದುಹಾಕಿದೆಯೋ ಇಲ್ಲವೋ ಎನ್ನುವುದು ತನಿಖೆಗೊಳಗಾಗಬೇಕಾದ ವಿಚಾರ. ಆದರೆ ಈ ನಮೂನೆ 7ರ ಅಸ್ತ್ರವನ್ನು ಸಮರ್ಪಕವಾಗಿ ಬಳಸಿಕೊಂಡಿರುವುದು ಬಿಜೆಪಿ ಕಾರ್ಯಕರ್ತರು-ಸ್ಥಳೀಯ ನಾಯಕರು ಮತ್ತು ಅಳಿಸಿಹಾಕಲೆತ್ನಿಸಿರುವುದು ಮುಸ್ಲಿಂ ಹೆಸರುಗಳನ್ನು ಎನ್ನುವುದು ನಿರೂಪಿತ ಸತ್ಯ. ಮತದ್ವೇಷದ ಮೂಲಕ ಅನ್ಯೀಕರಣ (Othering) ಪ್ರಕ್ರಿಯೆ ಒಂದು ಹಂತ ತಲುಪಿದ ನಂತರ ಈಗ ಬಿಜೆಪಿ ಮುಸ್ಲಿಂ ಸಮುದಾಯದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಪ್ರತ್ಯೇಕಿಸುವ ರಾಜಕೀಯಕ್ಕೆ ಮುಂದಾಗಿರುವುದು ಈ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗುತ್ತದೆ.

Mysore Dasara Flower Show :  ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ ಭವ್ಯ ಹೂವಿನ ಅಲಂಕಾರದ ತೋಟ.#pratidhvani

ಮತದಾರರ ಪಟ್ಟಿ ಪೌರತ್ವವನ್ನು (Citizenship) ನಿರ್ಧರಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ್ದರೂ, ತಳಮಟ್ಟದ ಸಾಮಾಜಿಕ ಸಂಕಥನಗಳಲ್ಲಿ ಈ ತಿಳುವಳಿಕೆ ಕಂಡುಬರುತ್ತಿಲ್ಲ. ಒಬ್ಬರ ಪೌರತ್ವವನ್ನು SIR ಸ್ಪಷ್ಟಪಡಿಸಿದ ನಂತರ ನಾಗರಿಕನು ಬೇರೆ ಯಾವುದೇ ಸಮರ್ಥನೀಯ ದಾಖಲೆಯನ್ನು ಒದಗಿಸಬೇಕಾಗಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ತನ್ಮೂಲಕ ʼಅಕ್ರಮ ವಲಸಿಗರನ್ನುʼ ಗುರುತಿಸುವುದು ಸುಲಭವಾಗುತ್ತದೆ ಎಂದೂ ಸಹ ಚರ್ಚಿಸಲಾಗುತ್ತಿದೆ. ಈ ಅಭಿಪ್ರಾಯಗಳು ವೈಯುಕ್ತಿಕವಾಗಿ ಕೇಳಿಬಂದರೂ, ಇದರ ಉತ್ಪಾದನೆಯಾಗುವುದು ರಾಜಕೀಯ ಚಿಂತನಾ ಕಾರ್ಖಾನೆಗಳಲ್ಲಿ ಎನ್ನುವುದು ನಿರ್ವಿವಾದ. ಮೇಲ್ ಹಂತದ ಕಾನೂನು, ಸಾಂವಿಧಾನಿಕ ನಿಬಂಧನೆಗಳನ್ನೂ ದಾಟಿ, ಈ ರೀತಿಯ ಉತ್ಪಾದಿತ ಅಭಿಪ್ರಾಯಗಳು ಸಮಾಜದ ಮೇಲ್ವರ್ಗ-ಸುಶಿಕ್ಷಿತ ವಲಯವನ್ನೂ ಆವರಿಸಿರುವುದು ಮುಂಬರುವ ಅಪಾಯಗಳ ಸೂಚನೆಯಾಗಿ ಕಾಣುತ್ತದೆ. ಈವರೆಗಿನ ಒಂದು ವರ್ಷದ ಎಸ್ಐಆರ್ ಪ್ರಕ್ರಿಯೆಯಲ್ಲಿ ಗುರುತಿಸಲಾಗಿರುವ ʼ ಅಕ್ರಮ ಬಾಂಗ್ಲಾ ವಲಸಿಗರ ʼ ಸಂಖ್ಯೆ ಎಷ್ಟು ? ಇದು ನಿಗೂಢವಾಗಿಯೇ ಉಳಿದಿದೆ.

ಮುಂದುವರೆಯುತ್ತದೆ……

Tags: Amit ShahBihar SIRBJPcongressDemocracyGovernment of IndiaHindumuslimNa DivakarNarendra ModiPratidhvaniSIRVoters DeleteVoting PowerWest Bengal SIR
Previous Post

ರಾಹುಲ್ ಗಾಂಧಿ ಎಚ್ಚರಿಕೆ: ‘ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡ್ತೀವಿ’!

Next Post

ಚಿನ್ನ ಕಳ್ಳಸಾಗಣೆಗೆ ವಿಚಿತ್ರ ಪ್ಲಾನ್;ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ನಾಲ್ವರು ಅರೆಸ್ಟ್

Related Posts

Energy Conservation Awareness: KREDL Observes ‘BRICS Sustainable Lifestyle Week–2026
Top Story

ಇಂಧನ ಸಂರಕ್ಷಣೆ ಜಾಗೃತಿ: ಕ್ರೆಡಲ್‌ನಿಂದ ‘ಬ್ರಿಕ್ಸ್ ಸುಸ್ಥಿರ ಜೀವನಶೈಲಿ ಸಪ್ತಾಹ–2026’ ಆಚರಣೆ

by Shivakumar
November 8, 2026
0

ಬೆಂಗಳೂರು: ಬ್ರಿಕ್ಸ್ ಸುಸ್ಥಿರ ಜೀವನಶೈಲಿ ಸಪ್ತಾಹ–2026 (BRICS Sustainable Lifestyle Week-2026) ಅಂಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL - KREDL) ಕಚೇರಿಯಲ್ಲಿ ಆಯೋಜಿಸಲಾಗಿದ್ದ...

Read moreDetails
Centre responsible for ethanol confusion: Minister M.B. Patil demands high-level probe

ಎಥೆನಾಲ್ ಗೊಂದಲಕ್ಕೆ ಕೇಂದ್ರವೇ ಹೊಣೆ: ಉನ್ನತ ಮಟ್ಟದ ತನಿಖೆಗೆ ಸಚಿವ ಎಂ.ಬಿ. ಪಾಟೀಲ ಆಗ್ರಹ

November 8, 2026
First PUC Annual Examination: Question papers to be prepared at the state level starting from 2027!

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ : 2027 ರಿಂದ ರಾಜ್ಯಮಟ್ಟದಲ್ಲೇ ಪ್ರಶ್ನೆಪತ್ರಿಕೆ ಸಿದ್ಧ!

November 8, 2026
Hassan DC Lata Kumari hits back at Kumaraswamy’s allegations

ಕುಮಾರಸ್ವಾಮಿ ಆರೋಪಕ್ಕೆ ಹಾಸನ ಡಿಸಿ ಲತಾಕುಮಾರಿ ತಿರುಗೇಟು : ಸುಳ್ಳು ಹಬ್ಬಿಸಿದರೆ ಕಠಿಣ ಕ್ರಮದ ಎಚ್ಚರಿಕೆ

November 8, 2026
SHOCKING: Thieves snatch gold earring from elderly woman sitting outside her home and flee; shocking video goes viral.

SHOCKING : ಮನೆಯ ಹೊರಗೆ ಕುಳಿತಿದ್ದ ವೃದ್ಧೆಯ ಚಿನ್ನದ ಓಲೆ ಕಿತ್ತು ಕಳ್ಳರು ಎಸ್ಕೇಪ್ : ಆಘಾತಕಾರಿ ವಿಡಿಯೋ ವೈರಲ್

November 8, 2026
Next Post
ಚಿನ್ನ ಕಳ್ಳಸಾಗಣೆಗೆ ವಿಚಿತ್ರ ಪ್ಲಾನ್;ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ನಾಲ್ವರು ಅರೆಸ್ಟ್

ಚಿನ್ನ ಕಳ್ಳಸಾಗಣೆಗೆ ವಿಚಿತ್ರ ಪ್ಲಾನ್;ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ನಾಲ್ವರು ಅರೆಸ್ಟ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada