ಬೆಂಗಳೂರು:ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ (Bangalore)ಮಾದಕ ದ್ರವ್ಯ (Narcotics)ಹಾವಳಿ ಹೆಚ್ಚಳವಾಗುತ್ತಿದೆ. (Increasing)ಇದನ್ನು ನಿಯಂತ್ರಿಸಲು ಟಾಸ್ಕ್ (Task to control)ಫೋರ್ಸ್ ಮಾಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah)ಹೇಳಿದ್ದಾರೆ.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದೆ.ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಹೆಚ್ಚಳವಾಗುತ್ತಿದೆ. ಸುಮಾರು 50% ಕೇಸ್ಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿದೆ. ಮಂಗಳೂರಿನಲ್ಲಿ 22% ದಾಖಲಾಗುತ್ತಿದೆ. ಇನ್ನು 11% ರಾಜ್ಯದ ಇತರ ಭಾಗಗಳಲ್ಲಿ ವರದಿಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೀಗ ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಮಟ್ಟದಲ್ಲಿ ಕಮಿಟಿ ಇದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಮಿತಿ ಇದೆ. ಇದೀಗ ಡ್ರಗ್ಸ್ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಲು ಹಾಗೂ ಜಾರಿಗೊಳಿಸಲು ಒಂದು ಟಾಸ್ಕ್ ಫೋರ್ಸ್ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ರಾಜ್ಯದಲ್ಲಿ ಡ್ರಗ್ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಈ ಟಾಸ್ಕ್ಫೋರ್ಸ್ನಲ್ಲಿ ಪೊಲೀಸರು, ಆರೋಗ್ಯ ಇಲಾಖೆಯವರು, ಶಿಕ್ಷಣ ಇಲಾಖೆಯವರು, ಸಾಮಾಜಿಕ ಇಲಾಖೆಯವರು ಇರುತ್ತಾರೆ. ಅದರಲ್ಲಿ ರಾಜ್ಯಮಟ್ಟದ ಕಮಿಟಿಯಲ್ಲಿ ವಿಶಾಲ್ ರಾವ್ ಸದಸ್ಯರಾಗಿ ಇರುತ್ತಾರೆ. ಇವರು ಪ್ರತಿ ತಿಂಗಳು ಸಭೆಗಳನ್ನು ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ ಎಂದರು.
ಡ್ರಗ್ಸ್ ಪ್ರಕರಣಗಳಿಗಾಗಿ ಬೇಕಿದ್ದರೆ ಹೊಸ ಕಾನೂನು ತರುತ್ತೇವೆ. ಆರೋಪಿಗಳಿಗೆ ಬೇಲ್ ಸಿಗದಂತೆ ನೋಡಿಕೊಳ್ಳುತ್ತೇವೆ. ಕಡಿಮೆ ಎಂದರೆ 10 ವರ್ಷ ಹಾಗೂ ಹೆಚ್ಚು ಎಂದರೆ ಜೀವಾವಧಿ ಶಿಕ್ಷೆ ಕೊಡುವ ಸಾಧ್ಯತೆ ಇರುತ್ತದೆ. ಸ್ಪೆಷಲ್ ಕೋರ್ಟ್ಗಳು, ರಿಹ್ಯಾಬಿಟೇಷನ್ ಸೆಂಟರ್ಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಸಭೆ ನಡೆಸಲು ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.