• Home
  • About Us
  • ಕರ್ನಾಟಕ
Friday, November 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಳ್ಳಾರಿ ಬಾಣಂತಿಯರ ಸಾವು | ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಲೋಕಾಯುಕ್ತ

ಪ್ರತಿಧ್ವನಿ by ಪ್ರತಿಧ್ವನಿ
December 7, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬಳ್ಳಾರಿ:ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಶನಿವಾರ ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಔಷಧ ನಿಯಂತ್ರಕರು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಯಮಿತ ವ್ಯವಸ್ಥಾಪಕ ನಿರ್ದೇಶಕರು, ಬಳ್ಳಾರಿ ಸರ್ಕಾರಿ ಆಸ್ಪತ್ರೆ ಹಿರಿಯ ಅಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಆದೇಶಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ಹಾಗೂ ಆರ್​ಎಲ್ ದ್ರಾವಣದಿಂದ ಐದು ಮಂದಿ ಬಾಣಂತಿಯರು ಮೃತಪಟ್ಟಿದ್ದರು.ಈ ಪ್ರಕರಣ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.ಐವಿ ದ್ರಾವಣ ಪೂರೈಸಿದ ಪಶ್ಚಿಮ ಬಂಗಾ ಫಾರ್ಮಾಸುಟಿಕಲ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಸರ್ಕಾರ ಆದೇಶಿಸಿತ್ತು.ಔಷಧ ನಿಯಂತ್ರಕರನ್ನು ಅಮಾನತು ಮಾಡಿತ್ತು.

ರಾಜ್ಯದ ಆಸ್ಪತ್ರೆಗಳಲ್ಲಿ ಪ್ರಸಕ್ತ ವರ್ಷ ಒಟ್ಟು 327 ತಾಯಂದಿರು ಮರಣವಾಗಿದೆ ಎಂದು ಸ್ವತಃ ಆರೋಗ್ಯ ಸಚಿವರೇ ಮಾಹಿತಿ ನೀಡಿದ್ದರು. ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವಾಗಿದೆ.ಕೂಡಲೇ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ಪ್ರಕರಣದ ಕುರಿತು ಲೋಕಾಯುಕ್ತರು ತನಿಖೆ ನಡೆಸಬೇಕು.ಸಂತ್ರಸ್ಥರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಿಯೋಗ ಶುಕ್ರವಾರ ಲೋಕಾಯುಕ್ತರಿಗೆ ದೂರು ಸಲ್ಲಿಸಿತ್ತು.

ಅಂತೆಯೇ ಶನಿವಾರ ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ 25 ಅಧಿಕಾರಿಗಳ ನಾಲ್ಕು ತಂಡಗಳು ಹೆರಿಗೆ ವಾರ್ಡ್, ಐಸಿಯು, ಔಷಧ ದಾಸ್ತಾನು ಹಾಗೂ ಆಸ್ಪತ್ರೆ ಆವರಣದ ವೆರ್ ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದರು.ಗೋದಾಮಿನಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ಹಾಗೂ ಆರ್‌ಎಲ್ ದ್ರಾವಣದ ಪೂರೈಕೆಯಾದ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದ್ದರು.

ಇನ್ನು ಔಷಧ ಉಗ್ರಾಣದಲ್ಲಿ ಜಪ್ತಿ ಮಾಡಲಾದ 280 ಐವಿ ಹಾಗೂ ಆರ್‌ಎಲ್‌ ದ್ರಾವಣದ ಬಾಟಲಿಗಳು ಪತ್ತೆಯಾಗಿದ್ದವು.ಈ ಪೈಕಿ 150 ಐವಿ ದ್ರಾವಣದ ಬಾಟಲಿಗಳು ಪಶ್ಚಿಮ ಬಂಗಾ ಫಾರ್ಮಾಸೂಟಿಕಲ್ ಕಂಪನಿಯಿಂದ ಪೂರೈಕೆಯಾಗಿದ್ದ ಸಂಗತಿ ಕಂಡು ಬಂದಿತ್ತು.

Tags: B.S.Patil saheb.Bellary Government HospitalDeath of Bellary Baranti |Deputy Superintendent .District Health OfficersDrug ControllerIV suppliedlokayuktaLokayukta filed a voluntary case against the officialsSuperintendent of Police
Previous Post

ಐವಿ ದ್ರಾವಣಕ್ಕಾಗಿ ಹೊಸ ಟೆಂಡರ್ – ಆಸ್ಪತ್ರೆಗಳಲ್ಲಿ ಗ್ಲುಕೋಸ್ ಕೋರತೆಯಿಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Next Post

ಹೇಮಾವತಿ ಲಿಂಕ್‌ ನಾಲಾ.. ಬಿಜೆಪಿ – ಜೆಡಿಎಸ್‌ ಸಮರ.. ಯಾರಿಗೆ ಲಾಭ..?

Related Posts

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!
Top Story

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

by ಪ್ರತಿಧ್ವನಿ
November 14, 2025
0

ಬಿ.ಎಸ್.ವಿಶ್ವನಾಥ್ ಅವರ ಆದರ್ಶಗಳನ್ನು ಪಾಲಿಸುವಂತೆ ಹಾಗೂ ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಯುವಜನತೆಗೆ ಕರೆ ನೀಡಿದರು. ಅವರು ಇಂದು...

Read moreDetails
ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

November 14, 2025
ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

November 14, 2025
Next Post
ಹೇಮಾವತಿ ಲಿಂಕ್‌ ನಾಲಾ.. ಬಿಜೆಪಿ – ಜೆಡಿಎಸ್‌ ಸಮರ.. ಯಾರಿಗೆ ಲಾಭ..?

ಹೇಮಾವತಿ ಲಿಂಕ್‌ ನಾಲಾ.. ಬಿಜೆಪಿ - ಜೆಡಿಎಸ್‌ ಸಮರ.. ಯಾರಿಗೆ ಲಾಭ..?

Recent News

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!
Top Story

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

by ಪ್ರತಿಧ್ವನಿ
November 14, 2025
ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ
Top Story

ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

by ಪ್ರತಿಧ್ವನಿ
November 14, 2025
ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ
Top Story

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ: 100 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

by ಪ್ರತಿಧ್ವನಿ
November 14, 2025
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ
Top Story

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸಾ*ನ ಸಂಖ್ಯೆ 7ಕ್ಕೆ ಏರಿಕೆ

by ಪ್ರತಿಧ್ವನಿ
November 14, 2025
ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌
Top Story

ಬಿಹಾರ ಚುನಾವಣಾ ಫಲಿತಾಂಶ: ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್‌

by ಪ್ರತಿಧ್ವನಿ
November 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿಎಂ ಕರೆ..!!

November 14, 2025
ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

ʼಬಾಯಿ ಮುಚ್ಚಿಕೊಂಡು ವಿಡಿಯೋ ಮಾಡಿʼ-ಜಯಾ ಬಚ್ಚನ್ ಫುಲ್‌ ಗರಂ

November 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!