ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renulaswamy murder case) ಆರು ವಾರಗಳ ಮಧ್ಯಂತರ ಜಾಮೀನಿನ ಮೇಲೆ ದರ್ಶನ್ (Darshan) ರಿಲೀಸ್ ಆಗಿದ್ದು,ಇಂದು ಆರೋಪಿ ದರ್ಶನ್ ವೈದ್ಯಕೀಯ ವಕೀಲರು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ದರ್ಶನ್ ಇನ್ನು ಕೂಡ ಶಸ್ತ್ರ ಚಿಕಿತ್ಸೆಗೆ ಒಪ್ಪಿಲ್ಲ. ಅವರು ಇನ್ನು ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಆ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎಂದು ಕೋರ್ಟ್ ಗೆ ವರದಿಯಲ್ಲಿ ತಿಳಿಸಲಾಗಿದೆ.
ಈ ಕೇಸ್ ನಲ್ಲಿ ಜಾಮೀನು ನೀಡುವ ವೇಳೆ ದರ್ಶನ್ ಆಸ್ಪತ್ರೆಗೆ ದಾಖಲಾದ ಒಂದು ವಾರದಲ್ಲಿ ಅವರ ಹೆಲ್ತ್ ರಿಪೋರ್ಟ್ (Health report) ಅನ್ನು ಕೋರ್ಟ್ ಗೆ ಸಲ್ಲಿಸಬೇಕು. ಯಾವ ಚಿಕಿತ್ಸೆ ಅವಶ್ಯಕತೆಯಿದೆ, ಯಾವ ಚಿಕಿತ್ಸೆ ನೀಡಲಾಗಿದೆ ಎಂಬ ರಿಪೋರ್ಟ್ ನೀಡಬೇಕು ಎಂದು ಕೋರ್ಟ್ ಸೂಚಿಸಿತ್ತು.