ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ (Renuka swamy murder case) ಸಂಬಂಧಪಟ್ಟಂತೆ ಆರೋಪಿ ನಟ ದರ್ಶನ್ (Actor darshan) ಜೈಲು ಪಾಲಾಗಿರುವ ಹಿನ್ನೆಲೆ ಇದೀಗ ಕನ್ನಡ ಚಲನಚಿತ್ರ ರಂಗದ ಒಬ್ಬೊಬ್ಬರೇ ಕಲಾವಿದರು,ನಿರ್ಮಾಪಕರ,ನಿರ್ದೇಶಕರು,ನಿಧಾನವಾಗಿ ದರ್ಶನ್ ಪರ ಮಾತನಾಡಲು ಆರಂಭಿಸಿದ್ದಾರೆ. ಆ ಸಾಲಿಗೆ ಈಗ ನಿರ್ಮಾಪಕ ಕೆ ಮಂಜು (K manju) ಸೇರ್ಪಡೆಯಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ (Parappana agrahara)ದರ್ಶನ್ ಬಗ್ಗೆ ಕೇಳಿದಾಗ ನಿರ್ಮಾಪಕ ಕೆ ಮಂಜು ನಟ ದರ್ಶನ್ ವರ್ತನೆಯನ್ನ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ನಾವು ನೋಡಿದ ಹಾಗೆ ದರ್ಶನ್ ಸ್ನೇಹಜೀವಿ. ಈ ಪ್ರಕರಣದಲ್ಲಿ ಅವರ ಅವರ ಸರಿ ತಪ್ಪು ಏನಿದೆ ಎಂಬುದನ್ನ ನ್ಯಾಯಾಲಯ (court) ನಿರ್ಧರಿಸಲಿದೆ. ಎಲ್ಲದಕ್ಕೂ ಕಾನೂನು ಇದೆ ಎಂದು ಹೇಳಿದರು.
ಕೆಲ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಿರ್ಮಾಪಕ ಕೆ ಮಂಜು, ದರ್ಶನ್ ಗೆ ಆ ಶಿಕ್ಷೆ ಆಗುತ್ತೆ, ಈ ಶಿಕ್ಷೆಯಾಗುತ್ತೆ ಎಂದೆಲ್ಲ ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ ,ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತೀರ್ಪು ಬರುವವರೆಗೂ ಮನಸ್ಸಿಗೆ ತೋಚಿದ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ, ಆರೋಪಿ ನಟ ದರ್ಶನ್ ಪರ ಬ್ಯಾಟಿಂಗ್ ಮಾಡಿದ್ದಾರೆ.