ಚಿತ್ರದುರ್ಗದ ರೇಣುಕಾಸ್ವಾಮಿ (Renuka swamy) ಕೊಲೆ ಕೇಸ್ನಲ್ಲಿ ನಟ ದರ್ಶನ್ (Actor darshan) ಅರೆಸ್ಟ್ ಆಗಿ ಪೋಲಿಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವಾಗ್ಲೆ, ಇದೀಗ ಮತ್ತೊಂದು ಪ್ರಕರಣ ಸದ್ದು ಮಾಡುತ್ತಿದೆ. ನಟ ದರ್ಶನ್ ಫಾರ್ಮ್ಹೌಸ್ನಲ್ಲಿ (Darshan farm house) ಮ್ಯಾನೇಜರ್ ಸೂಸೈಡ್ ಮಾಡಿಕೊಂಡಿದ್ದ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
![](https://pratidhvani.com/wp-content/uploads/2024/06/IMG_8280-1024x572.jpeg)
ಆನೇಕಲ್ (Anekal) ಸಮೀಪದ ಬಗ್ಗನದೊಡ್ಡಿಯ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡ್ತಿದ್ದ ಶ್ರೀಧರ್ (Sridhar) ಎಂಬ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ (Death note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮ್ಯಾನೇಜರ್, ಡೆತ್ನೋಟ್ ಮತ್ತು ವಿಡೀಯೋ ಮಾಡಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ಈ ವ್ಯಕ್ತಿ ಆತ್ಮಹತ್ಯೆಗೂ ಮುನ್ನ ಮಾಡಿದ್ದ ಎರಡು ಸೆಕ್ಸಿ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral) ಆಗ್ತಿದೆ. ಈ ಪ್ರಕರಣದಲ್ಲಿ ಇನ್ನೇನಾಗಿತ್ತೋ ಏನೋ ಎಂಬ ಅನುಮಾನಗಳನ್ನ ಒಂದಿಷ್ಟು ಜನ ವ್ಯಕ್ತಪಡಿಸುತ್ತಿದ್ದು, ಏಪ್ರಿಲ್ನಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣ ಈಗ ಮತ್ತೆ ಸದ್ದು ಮಾಡ್ತಿದೆ.