ಇಂದು ಹೈಕೋರ್ಟ್ ನಲ್ಲಿ (Highcourt) ನಟ ದರ್ಶನ್ (Actir darshan) ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ.ಅತ್ತ ಸೆಷನ್ ಕೋರ್ಟ್ ನಲ್ಲಿ ಮೂವರ ಬೇಲ್ ಭವಿಷ್ಯ ಕೂಡ ಇಂದು ನಿರ್ಧಾರವಾಗಲಿದೆ.ಇವತ್ತು ಪವನ್ ಹಾಗೂ ನಂದೀಶ್, ಧನರಾಜ್ ಬೇಲ್ ಅರ್ಜಿ ವಿಚಾರಣೆಗೆ ಬರಲಿದೆ.

ಇನ್ನೂ ಹೈಕೋರ್ಟ್ ನಲ್ಲಿ ಪವಿತ್ರಾ ಗೌಡ (Pavitra gowda) ಬೇಲ್ ಅರ್ಜಿ ನವೆಂಬರ್ 7ಕ್ಕೆ ವಿಚಾರಣೆ ನಡೆಯಲಿದೆ. ಜೊತೆಗೆ ನಾಗರಾಜ್, ಲಕ್ಷ್ಮಣ್, ಅನುಕುಮಾರ್ ಬೇಲ್ ಅರ್ಜಿ ಕೂಡ 7ಕ್ಕೆ ವಿಚಾರಣೆಗೆ ಬರಲಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಈಗಾಗಲೇ (Renukaswamy murder case) 5 ಆರೋಪಿಗಳಿಗೆ ಜಾಮೀನು ಭಾಗ್ಯ ಸಿಕ್ಕಿದ್ದು ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ ದರ್ಶನ್, ಪವಿತ್ರ ಗೌಡ ಕಥೆ ಏನಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಪ್ರದೋಷ್ ಜಾಮೀನು ಅರ್ಜಿ ಸೆಷನ್ ಕೋರ್ಟ್ ನಲ್ಲಿ ರಿಜೆಕ್ಟ್ ಆಗಿದ್ದು ಹೈಕೋರ್ಟ್ ಗೆ ಇನ್ನು ಅರ್ಜಿ ಸಲ್ಲಿಸಿಲ್ಲ.