ಬಾಗಲಕೋಟೆ: ದೇವಸ್ಥಾನ (Hindu Temple) ಪ್ರವೇಶಿದ್ದಕ್ಕೆ ದಲಿತ ಯುವಕನ್ನ (Dalit Youth) ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ನಡೆದಿದೆ. ದ್ಯಾಮವ್ವನ ಗುಡಿ ಪ್ರವೇಶಿದ್ದಕ್ಕೆ ಸವರ್ಣೀಯರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕ ಅರ್ಜುನ್ ಮೇಲೆ ಕುಡುಗೋಲಿನಿಂದ ಹಲ್ಲೆ (Assault) ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ದೇವಸ್ಥಾನದ ಮುಂದಿನ ವಿದ್ಯುತ್ ಕಂಬಕ್ಕೆ (Electricity Pole ) ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಸಿಎಂ ಸಿದ್ದು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಅಮಾನವೀಯ ಕೃತ್ಯ
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಕ್ಷೇತ್ರದಲ್ಲೇ ಅಮಾನವೀಯ ಕೃತ್ಯ ನಡೆದಿದ್ದು, ಘಟನೆ ಸಂಬಂಧ ಕೆರೂರ ಪೊಲೀಸ್ ಠಾಣೆಯಲ್ಲಿ 18 ಜನರ ವಿರುದ್ಧ ಕೇಸ್ ದಾಖಲಾಗಿದೆ. ಸೆಪ್ಟೆಂಬರ್ 10 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಲಿತ ಯುವಕನನ್ನು ಥಳಿಸಿದ್ದು ಮಾತ್ರವಲ್ಲದೇ ಘಟನೆ ಬಳಿಕ ದಲಿತರನ್ನು ಸವರ್ಣೀಯರು ಬಹಿಷ್ಕಾರ ಕೂಡ ಮಾಡಿದ್ದಾರೆ. ಸವರ್ಣೀಯರ ಕೇರಿ ಒಳಗೆ ದಲಿತರು ಕಾಲಿಡದಂತೆ ಡಂಗೂರ ಹಾಕಲಾಗಿದೆ. ಹಲ್ಲೆಗೆ ಒಳಗಾದ ಯುವಕನನ್ನು ಅರ್ಜುನ್ ಮಾದರ್ ಎಂದು ಗುರುತಿಸಲಾಗಿದ್ದು, ದ್ಯಾಮವ್ವನ ಗುಡಿ ಪ್ರವೇಶಿದ್ದಕ್ಕೆ ಜಾತಿ ನಿಂದನೆ ಮಾಡಿ ಕಟ್ಟಿಗೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ.