ಜೆಎನ್ಯು ವಿದ್ಯಾರ್ಥಿ ಸಂಘಟನೆಯ ನಾಯಕನಾಗಿದ್ದ ಕನ್ಹಯ್ಯಾ ಕುಮಾರ್ ಮತ್ತು ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಇಂದು ಕಾಂಗ್ರೆಸ್ ಸೇರ್ಪಡೆ. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಇಬ್ಬರು ಕಾಂಗ್ರೆಸ್ ಪ್ರವೇಶಿಸಿದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್ಯುಎಸ್ಯು) ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಗುಜರಾತ್ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮಂಗಳವಾರ ಶಹೀದ್-ಇ-ಅಜಮ್ ಭಗತ್ ಸಿಂಗ್ ಪಾರ್ಕ್ಗೆ ನಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಭೇಟಿ ಮಾಡಿ ಸಂಜೆ ಕೆಸಿ ವೇಣುಕೋಪಾಲ್ , ರಂದೀಪ್ ಸುರ್ಜೆವಾಲ ಮತ್ತು ಭಗತ್ ಚವಣ್ ದಾಸ್ KC Venugopal, Randeep Surjewala and Bhakta Charan Das ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಕುರಿತು ದೆಹಲಿಯ ಎಐಸಿಸಿ ಹೆಡ್ ಕ್ವಟರ್ನಲ್ಲಿ ಪ್ರೆಸ್ ಮೀಟ್ ಮಾಡಿರುವ ಕೆಸಿ ವೇಣುಕೋಪಾಲ್ , ರಂದೀಪ್ ಸುರ್ಜೆವಾಲ ಮತ್ತು ಭಗತ್ ಚವಣ್ ದಾಸ್ ಅಧಿಕೃತವಾಗಿ ಕನ್ನಯ್ಯ ಮತ್ತು ಜಿಗ್ನೇಶ್ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಯ ಬಗ್ಗೆ ಮಾತಾಡಿದ್ದಾರೆ.
ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಕೆಸಿ ವೇಣುಕೋಪಾಲ್, ಕನ್ಹಯ್ಯ ಕುಮಾರ್ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟದ ಸಂಕೇತ. ಅವರು ವಿದ್ಯಾರ್ಥಿ ನಾಯಕನಾಗಿ ಮೂಲಭೂತವಾದದ ವಿರುದ್ಧ ಹೋರಾಡಿದ್ದಾರೆ. ಒಂದು ರೀತಿಯ ಕ್ರಿಯಾತ್ಮಕ ವ್ಯಕ್ತಿತ್ವವು ಸೇರಿಕೊಳ್ಳುವುದರಿಂದ ಕಾಂಗ್ರೆಸ್ನ ಸಂಪೂರ್ಣ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನ ಈ ನಿರ್ಧಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ ಮೇವಾನಿ ಚರಣ್ಜಿತ್ ಸಿಂಗ್ ಅವರನ್ನು ಪಂಜಾಬ್ ಸಿಎಂ ಆಗಿ ನೇಮಿಸುವ ನಿರ್ಧಾರವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನೀಡಿದ ಸಂದೇಶವಾಗಿದೆ. ಇದು ಕೇವಲ ದಲಿತರು ಮಾತ್ರವಲ್ಲದೆ ಎಲ್ಲಾ ಉಪಜಾತಿಗಳ ನಡುವೆ ತೀವ್ರ ಪರಿಣಾಮವನ್ನು ಬೀರುತ್ತದೆ. ದಲಿತರಿಗೆ ಸಂಬಂಧಪಟ್ಟಂತೆ ಈ ನಡೆಯು ಕೇವಲ ಅದ್ಭುತವಲ್ಲ ಹಿತವಾದದ್ದು ಕೂಡ ಎಂದಿದ್ದರು.
ಭಗತ್ ಸಿಂಗ್ ಅವರ ಜನ್ಮ ದಿನಾಚರಣೆಯ ದಿನದಂದು ಇಬ್ಬರು ಯುವ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯ ವಿಷಯ ಬಹುದಿನಗಳಿಂದ ಚರ್ಚೆಯಲ್ಲಿತ್ತು. ಕಳೆದ ವಾರ ದೆಹಲಿಯಲ್ಲಿ ಮಾತನಾಡಿದ್ದ ಸಿಪಿಐ (CPI) ಮುಖಂಡ ಡಿ.ರಾಜಾ, ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಸುದ್ದಿಗಳನ್ನು ತಳ್ಳಿ ಹಾಕಿದ್ದರು. ಆದ್ರೆ ಸಿಪಿಐ ಮುಖಂಡರ ಸಭೆಗೆ ಕನ್ಹಯ್ಯ ಕುಮಾರ್ ಗೈರಾಗಿದ್ದರು. ಅಂದು ಕನ್ಹಯ್ಯ ಕುಮಾರ್ ಯಾರ ಸಂಪರ್ಕಕ್ಕೂ ಲಭ್ಯವಾಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ನಿರಂತರವಾಗಿ ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತಿದ್ದಾರೆ.

ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್ 2016ರಲ್ಲಿ ಜೆಎನ್ಯು (JNU) ದೇಶವಿರೋಧಿ ಹೇಳಿಕೆಯಿಂದಾಗಿ ಮುನ್ನಲೆಗೆ ಬಂದಿದ್ದರು. ಅಂದು ವೈರಲ್ ಆಗಿದ್ದ ವಿಡಿಯೋದಲ್ಲಿ ಆಜಾದಿ-ಆಜಾದಿ ಎಂದು ಕನ್ಹಯ್ಯಾ ಘೋಷಣೆ ಕೂಗಿದ್ದರು. ಈ ವಿವಾದದ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಸಿಪಿಐ ಸೇರ್ಪಡೆಯಾಗಿದ್ದರು. ಬೇಗೂಸರೈ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು.
ಜಿಗ್ನೇಶ್ ಮೇವಾನಿ
ಜಿಗ್ನೇಶ್ ಮೇವಾನಿ ಗುಜರಾತಿನ ದಲಿತ ಸಮುದಾದಯದ ಯುವ ಮುಖ. 2017ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಜಿಗ್ನೇಶ್ ಮೇವಾನಿ ವಿರುದ್ಧ ಅಭ್ಯರ್ಥಿ ಹಾಕದೇ ಬೆಂಬಲ ನೀಡಿತ್ತು. ಮುಂದಿನ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಜಿಗ್ನೇಶ್ ಮೇವಾನಿ ಮತ್ತು ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಎದುರಿಸಲು ಕಾಂಗ್ರೆಸ್ ಡ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ತುಕಡೇ ಗ್ಯಾಂಗ್ ಜೊತೆ ಕಾಂಗ್ರೆಸ್ – ಅಮಿತ್ ಮಾಳ್ವೀಯಾ
ಬಿಜೆಪಿ (BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವೀಯಾ (Amit Malviya), ಸರ್ಜಿಕಲ್ ಸ್ಟ್ರಕ್ ಎರಡನೇ ವಾರ್ಷಿಕೋತ್ಸವದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಭಾರತ್ ತೇರೆ ತುಕಡೇ ಹೋಂಗೇ’ ಖ್ಯಾತಿಯ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿಯನ್ನು ಕಾಂಗ್ರೆಸ್ ತನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. ಇದೇನೂ ಕಾಕತಾಳೀಯ ಘಟನೆ ಅಲ್ಲ. ಭಾರತ ವಿಭಜಿಸಿ ತಂಡಗಳ ಜೊತೆ ಕೈ ಜೋಡಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.