ಅತಿ ಹೆಚ್ಚು ಕೋವಿಡ್ ತನಗೇ ದಾಖಲಾಗುತ್ತಿದ್ದರೂ ‘ಸಮುದಾಯ ಪ್ರಸರಣ’ ಪದವನ್ನು ಒಪ್ಪದ ಭಾರತ

ಪ್ರತಿದಿನ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಭಾರತದಲ್ಲೇ ದಾಖಲಾಗುತ್ತಿದೆ. ಆದರೂ ಭಾರತವು ಯಾವುದೇ ಸಮುದಾಯ ಪ್ರಸರಣ (ಸಿಟಿ) ಇಲ್ಲದ ದೇಶವೆಂದು ಎನಗೆ ತಾನೇ ಹಣೆಪಟ್ಟಿ ಕಟ್ಟಿಕೊಳ್ಳುತ್ತಲೇ ಇದೆ. ತನ್ನ ಸ್ಥಿತಿಯನ್ನು ಕಡಿಮೆ ಗಂಭೀರ ವರ್ಗೀಕರಣವಾದ ‘ಕ್ಲಸ್ಟರ್ ಆಫ್ ಕೇಸ್’ ಎಂದು ಕರೆದುಕೊಳ್ಳುತ್ತಿದೆ.

ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್‌ ಮತ್ತು ಇತರ 190 ಕ್ಕೂ ಹೆಚ್ಚು ದೇಶಗಳು ತಮ್ಮನ್ನು ‘ಸಮುದಾಯ ಪ್ರಸರಣ’ ದಲ್ಲಿ ಗುರುತಿಸಿಕೊಂಡಿವೆ.  ಹೆಚ್ಚು ದೃಢೀಕರಿಸಲ್ಪಟ್ಟ ಪ್ರಕರಣಗಳಿರುವ  10 ದೇಶಗಳಲ್ಲಿ, ಇಟಲಿ ಮತ್ತು ರಷ್ಯಾ ಮಾತ್ರ ತಮ್ಮನ್ನು ‘ಸಮುದಾಯ ಪ್ರಸರಣ’ ದಲ್ಲಿ ಗುರುತಿಸಿಕೊಂಡಿಲ್ಲ. ಎರಡೂ ದೇಶಗಳು ಕನಿಷ್ಠ ಒಂದು ತಿಂಗಳಿನಿಂದ ಕ್ಷೀಣಿಸುತ್ತಿರುವ ಪಥದಲ್ಲಿವೆ ಮತ್ತು ಒಟ್ಟಾಗಿ ದಿನಕ್ಕೆ 20,000 ಕ್ಕಿಂತ ಕಡಿಮೆ ಪ್ರಕರಣಗಳನ್ನು ನೀಡುತ್ತವೆ ‌ಅಂದರೆ ಭಾರತದ ದೈನಂದಿನ ಪ್ರಕರಣಗಳ ಸುಮಾರು 5%ದಷ್ಟು ಕಡಿಮೆ.

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಭಾರತವು ಸಮುದಾಯ ಪ್ರಸರಣದಲ್ಲಿದೆ ಎಂದು ಎಂದಿಗೂ ಗುರುತಿಸಿಕೊಂಡಿಲ್ಲ.

WHO ಮಾರ್ಗಸೂಚಿಗಳ ಪ್ರಕಾರ ಇತ್ತೀಚಿನ ಹದಿನಾಲ್ಕು ದಿನಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳಿಗೆ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸ ಇಲ್ಲದಿದ್ದಾಗ ಮತ್ತು ನಿರ್ದಿಷ್ಟ ಕ್ಲಸ್ಟರ್‌‌ಗೆ ಪ್ರಕರಣಗಳನ್ನು ಲಿಂಕ್ ಮಾಡಲು ಆಗದೇ ಇದ್ದಾಗ ಅದನ್ನು ಸಮುದಾಯ ಪ್ರಸರಣ ಅಥಾವಾ CT ಎಂದು ಕರೆಯಲಾಗುತ್ತದೆ. ಕಳೆದ 14 ದಿನಗಳಲ್ಲಿ ಪತ್ತೆಯಾದ ಪ್ರಕರಣಗಳು ಪ್ರಧಾನವಾಗಿ  ವಿದೇಶೀ ಲಿಂಕ್ ಪ್ರಕರಣಗಳಿಗೆ ನೇರವಾಗಿ ಸಂಬಂಧವಿಲ್ಲದ ಆದರೆ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲಾದ ಕ್ಲಸ್ಟರ್‌ಗಳಿಗೆ ಸೀಮಿತವಾಗಿದ್ದು ಇದು  ಈ ಪ್ರದೇಶದಲ್ಲಿ ಹಲವಾರು ಗುರುತಿಸಲಾಗದ ಪ್ರಕರಣಗಳಿವೆ ಎಂದು ಊಹಿಸಬಹುದಾಗಿದ್ದು, ಇಂತಹ ಕ್ಲಸ್ಟರ್‌ಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿದರೆ ವ್ಯಾಪಕ ಸಮುದಾಯದ ಇತರರಿಗೆ ಸೋಂಕು ಹರಡುವ ಕಡಿಮೆ ಅಪಾಯ‌ ಇದ್ದರೆ ಅದನ್ನು ಕ್ಲಸ್ಟರ್ ಕೇಸ್ ಎಂದು ಕರೆಯಲಾಗುತ್ತದೆ. ಭಾರತವು ತನ್ನ ಕೋವಿಡ್ ಸ್ಥಿತಿಯನ್ನು ವಿವರಿಸಲು ಆಯ್ಕೆ ಮಾಡಿಕೊಂಡಿರುವುದು ಇದೇ ‘ಕ್ಲಸ್ಟರ್ ಆಫ್ ಕೇಸ್’.

ಪರೀಕ್ಷಿಸಲಾದ ಪ್ರಕರಣಗಳಲ್ಲಿ ಭಾರತದಲ್ಲಿ  21% ದಷ್ಟು ಪ್ರಕರಣಗಳು ಪಾಸಿಟಿವ್ ಆಗಿ ದಾಖಲಾಗುತ್ತಿವೆ. 24 ರಾಜ್ಯಗಳಲ್ಲಿ 15% ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ ಮತ್ತು  10 ರಾಜ್ಯಗಳಲ್ಲಿ 25% ಕ್ಕಿಂತ ಹೆಚ್ಚು.  ಕನಿಷ್ಠ 18 ರಾಜ್ಯಗಳಲ್ಲಿ ಲಾಕ್‌ಡೌನ್‌ಗಳು ಅಥವಾ ಸಾರ್ವಜನಿಕ ಚಲನೆಗೆ ಕೆಲವು ರೀತಿಯ ಪ್ರಮುಖ ನಿರ್ಬಂಧಗಳಿವೆ. ಮತ್ತು ದೇಶದ ಯಾವುದೇ ಪ್ರದೇಶವು ಕರೋನವೈರಸ್‌ನಿಂದ ಸುರಕ್ಷಿತವಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಒತ್ತಿ ಹೇಳುತ್ತವೆ.

“ನಾವು ಕಳೆದ ಏಪ್ರಿಲ್‌ನಿಂದ ಸಮುದಾಯ ಪ್ರಸರಣದಲ್ಲಿರಬಹುದು.  ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಮತ್ತು ಅದಕ್ಕೆ ಸಿದ್ಧತೆ ನಡೆಸಲು ಪರೀಕ್ಷೆಯು ಉಪಯುಕ್ತವಾಗಿದೆ ”ಎಂದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕರಾದ ಡಾ. ಜಾಕೋಬ್ ಜಾನ್ ಹೇಳುತ್ತಾರೆ.  “ಅಥವಾ ಒಂದು ನಿರ್ದಿಷ್ಟವಾದ ಚಿಕಿತ್ಸೆಯ ಕೋರ್ಸ್ ಇದ್ದರೆ ಅಥವಾ ಔಷಧಿಯನ್ನು ಹೊಂದಿದ್ದರೆ ಅದು ಉಪಯುಕ್ತವಾಗಿರುತ್ತದೆ ಯಾಕೆಂದರೆ ಕೋವಿಡ್ ಪಾಸಿಟಿವ್ ದೃಢವಾದ ನಂತರ ಆ ಔಷಧವನ್ನು  ಸೂಚಿಸಬಹುದು. ಆದರೆ ಸರ್ಕಾರವು‌ಇದೇ ಕಾರಣಕ್ಕೆ ಪದವನ್ನು ಬಳಸಲು ಬಯಸುತ್ತಿಲ್ಲ ಎಂಬುವುದು ನಿಜವಲ್ಲ.  ಅದು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ” ಎಂದು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...