ಕೊಡಗಿನಲ್ಲಿ ಜೀವನದಿ ಕಾವೇರಿ ಒತ್ತುವರಿಯಾಗ್ತಿರೋದು ನಿನ್ನೆ ಮೊನ್ನೆಯ ವಿಷಯವಲ್ಲ. ಈ ಹಿಂದಿನಿಂದಲೂ ಕಾವೇರಿ ನದಿಯ ಒತ್ತುವರಿ ತೆರವುಗೊಳಿಸಬೇಕು ಅಂತಾ ಪರಿಸರವಾದಿಗಳು ಹೋರಾಡುತ್ತಾ ಬಂದಿದ್ದಾರೆ. ಸಂತಸದ ವಿಷಯ ಅಂದ್ರೆ ಕೊನೆಗೂ ರಾಜ್ಯ ಸರ್ಕಾರಕ್ಕೆ ಕಾವೇರಿಯ ಕೂಗು ಕೇಳಿಸಿಬಿಟ್ಟಿದೆ ನೋಡಿ.
ಕನ್ನಡ ನಾಡಿನ ಜೀವ ನದಿ ಕಾವೇರಿ.. ಮಂಜಿನ ನಗರಿ ಕೊಡಗಿನ ಬ್ರಹ್ಮಗಿರಿಯಲ್ಲಿ ಜನ್ಮ ತಾಳಿ ಕರ್ನಾಟಕದಿಂದ ತಮಿಳುನಾಡಿನತ್ತ ಶಾಂತಸ್ವರೂಪಿಯಾಗಿ ಹರೀತಾಳೆ. 765 ಕಿಲೋಮೀಟರ್ ದೂರ ಹರಿದು ಪಂಪೂಹಾರ್ ಬಳಿ ಕಾವೇರಿ ನೀಲಿ ಸಮುದ್ರವನ್ನ ಸೇರ್ತಾಳೆ. ಹರಿಯೋ ಪ್ರದೇಶದಲ್ಲೆಲ್ಲಾ ನಗುವನ್ನೇ ತರೋ ಕಾವೇರಿ ವಿಚಾರದಲ್ಲಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಅದೇನಂದ್ರೆ ಕಾವೇರಿ ನದಿಯ ಗಡಿ ಗುರುತಿಸುವ ಕಾರ್ಯ.
ಜೀವನದಿ ಕಾವೇರಿ ತನ್ನದೇ ಆದ ವಿಸ್ತಾರವಾದ ಗಡಿ ಹೊಂದಿದೆ. ನಿಯಮಗಳ ಪ್ರಕಾರ ನದಿಯ ಎರಡೂ ಬದಿಯ 100 ಮೀಟರ್ ಜಾಗ ಅದು ನದಿಗೆ ಸೇರುತ್ತೆ. ಕಾರಣ ಮಳೆಗಾಲದಲ್ಲಿ ಮೈ ದುಂಬಿ ಹರಿಯುವ ವೇಳೆ ಇಷ್ಟೂ ಜಾಗವನ್ನ ನದಿ ಆಕ್ರಮಿಸಿಕೊಳ್ಳುತ್ತೆ. ಇದೇ ಕಾರಣಕ್ಕೆ ನದಿಯ ಎರಡೂ ಬದಿಯ 100 ಮೀಟರ್ ದೂರದಲ್ಲಿ ಯಾವುದೇ ಕಟ್ಟಡಗಳನ್ನ ಕಟ್ಟುವಂತಿಲ್ಲ. ಯಾವುದೇ ವಾಣಿಜ್ಯ ಅಥವಾ ಇತರೆ ಚಟುವಟಿಕೆಗಳನ್ನೂ ನಡೆಸುವಂತಿಲ್ಲ. ದುರಂತ ಅಂದ್ರೆ ಕಾವೇರಿ ನದಿಯ ಎರಡೂ ಬದಿಯಲ್ಲಿ ಈಗಾಗಲೇ ಬಹಳಷ್ಟು ಅತಿಕ್ರಮಣವಾಗಿವೆ. ಹೀಗಾಗಿ ಈ ಅತಿಕ್ರಮಣವನ್ನ ತೆರವುಗೊಳಿಸುವಂತೆ ಈ ಹಿಂದಿನಿಂದಲೂ ಪರಿಸರವಾದಿಗಳು ಹೋರಾಡುತ್ತಾ ಬಂದಿದ್ದಾರೆ. ಇದರ ಪ್ರತಿಫಲವಾಗಿ ಇದೀಗ ಸರ್ಕಾರ ಕಾವೇರಿ ನದಿಯ ಒತ್ತುವರಿ ನಿಯಂತ್ರಿಸಲು, ಅದರ ಗಡಿ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ.
ಬ್ರಮರ್ ಟೆಕ್ನಾಜಿಸ್ ಸಂಸ್ಥೆ ಕುಶಾಲನಗರದಲ್ಲಿ ಕಾವೇರಿ ನದಿಯ ವೈಜ್ಞಾನಿಕ ಸಂಶೋಧನೆ ಕೈಗೊಂಡಿದೆ. ಮಳೆಗಾದಲ್ಲಿ ಕಾವೇರಿ ನದಿಯ ವರ್ತನೆ ಹೇಗಿರುತ್ತದೆ, ಎಲ್ಲೆಲ್ಲಿ ಪ್ರವಾಹ ಸಂಭವಿಸುತ್ತೆ? ಹಾಗೂ ಪ್ರವಾಹಕ್ಕೆ ಕಾರಣಗಳೇನೂ? ಎಂಬುದನ್ನ ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ನೀಡುತ್ತೆ. ಇವರು ನೀಡುವ ವರದಿ ಆಧರಿಸಿ ಸರ್ಕಾರ ಪರಿಹಾರ ಕ್ರಮಗಳನ್ನ ಕೈಗೊಳ್ಳುತ್ತೆ.
ಕೊನೆಗೂ ಸರ್ಕಾರಕ್ಕೆ ಕಾವೇರಿಯ ಕೂಗು ಕೇಳಿಸಿದೆ. ಪರಿಸರವಾದಿಗಳ ಹೋರಾಟಕ್ಕೆ ಪ್ರತಿಫಲವೂ ಸಿಕ್ಕಂತಾಗಿದೆ. ಸದ್ಯ ಜನವರಿ ಅಂತ್ಯದ ವೇಳೆಗೆ ಅಧ್ಯಯನ ಸಂಪೂರ್ಣವಾಗುವ ನಿರೀಕ್ಷೆಯೂ ಇದೆ.
M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!
ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು 28 ಜಿ.ಐ. ಉತ್ಪನ್ನಗಳ ಪ್ರದರ್ಶನ & ಮಾರಾಟ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ (Kempegowda International Airport) ಕರ್ನಾಟಕದ...
Read moreDetails