ಮಧ್ಯಪ್ರದೇಶದ ಮೂರು ವಿಧಾನಸಭಾ ಕ್ಷೇತ್ರ, ಒಂದು ಲೋಕಸಭಾ ಕ್ಷೇತ್ರ ಉಪಚುನಾವಣೆ ಸಂಬಂಧ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದಿದೆ. ಶನಿವಾರ ಖಾಂಡ್ವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಞಾನೇಶ್ವರ್ ಪಾಟೀಲ್ ಪರ ಮತಯಾಚಿಸುತ್ತಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ʻಅಧ್ಯಕ್ಷರಿಲ್ಲದ ಪಕ್ಷʼ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
ಶನಿವಾರ ಖಾಂಡ್ವಾ ಲೋಕಸಭೆ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಚೌಹಾಣ್ ʻಅಧ್ಯಕ್ಷರ ಕೊರತೆಯಿಂದ ಈಗಾಗಲೇ ಬಳಲುತ್ತಿರುವ ಕಾಂಗ್ರೆಸ್ ಈಗ ಜಿ-23 ಎಂಬ ಹೊಸ ಗುಂಪನ್ನು ಹೊಂದಿದೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿಲ್ಲದಿರಬಹುದು ಆದರೆ, ಅವರು ಬೇರೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಿಸುವ ನಿರ್ಧಾರವನ್ನ ತೆಗೆದುಕೊಳ್ಳಬಹುದು. ಆದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಹುದ್ದೆಗು ಅವರು ಒಂದೇ ಮುಖವನ್ನ ಹೊಂದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಲ್ಲಿ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಲ್ಲಿ ಅದು ಒಂದೆ ಮುಖ ಅದು ಕಮಲನಾಥ್ʼ ಎಂದು ಹೇಳಿದ್ದಾರೆ.
ಭಾಷನದ ವೇಳೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಚೌಹಾಣ್ ದಿಗ್ವಿಜಯ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಿಲ್ಲಿಸಲಾಗಿತ್ತು. ರಾಜ್ಯವು ಗೂಂಡಾಗಳು ಮತ್ತು ಮಾಫಿಯದವರ ಕಪಿಮುಷ್ಠಿಯಲ್ಲಿತ್ತು ಎಂದು ಆರೋಪಿಸಿದ್ದಾರೆ.

ಮಾತನಾಡುವ ವೇಳೆ ಕಮಲನಾಥ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಚೌಹಾಣ್, ಕಮಲನಾಥ ತಮ್ಮ ಅಧಿಕಾರವಧಿಯ 15 ತಿಂಗಳಲ್ಲಿ ಬಿಜೆಪಿ ಘೋಷಿಸಿದ್ದ ಯೋಜನೆಗಳನ್ನು ತಡೆ ಹಿಡಿದು ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶವನ್ನ ನೀಡಿದರು ಮತ್ತು 15 ತಿಂಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಏನು ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಶಾಸಕರ ಕರೀದಿಯಲ್ಲಿ ತೊಡಗಿದೆ ಎಂದು ಕಾಂಗೆಸ್ ಆರೋಪಿಸಿದೆ. ಚೌಹಾಣ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಬಿಜೆಪಿ “ಬಿಜೆಪಿ ತನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತದೆ, ಆದರೆ ವಾಸ್ತವದಲ್ಲಿ ಚುನಾವಣೆಗೆ ಸ್ಪರ್ಧಿಸಲು ತನ್ನ ಬಳಿ ಅಭ್ಯರ್ಥಿಗಳನ್ನು ಹೊಂದಿಲ್ಲ. ಅದು, ಇತರೆ ಪಕ್ಷಗಳ ಅಭ್ಯರ್ಥಿಗಳನ್ನು ಖರೀದಿಸುತ್ತದೆ. ಬಿಜೆಪಿ ತನ್ನ ಪಕ್ಷದ ನಾಯಕರ ಮೇಲೆ ವಿಶ್ವಾಸವನ್ನ ಹೊಂದಿಲ್ಲ” ಎಂದು ಆರೋಪಿಸಿದ್ದಾರೆ.
ಬಿಜೆಪಿಯು ಪ್ರಸ್ತುತ ಸ್ಪರ್ಧಿಸುತ್ತಿರುವ ನಾಲ್ಕು ಉಪಚುನಾವಣೆಗಳಲ್ಲಿ ಬಿಜೆಪಿಯು ಪೃಥ್ವಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶಿಶುಪಾಲ್ ಸಿಂಗ್ ಯಾದವ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು. ಪೃಥ್ವಿಪುರದಲ್ಲಿ ಯಾದವ ಸಮುದಾಯದ ಶೇಕಡಾ 40%ರಷ್ಟು ಮತಗಳಿವೆ ಬಿಜೆಪಿ ತನ್ನದೇ, ಪಕ್ಷದ ಕಾರ್ಯಕರ್ತರನ್ನು ನಂಬದೆ ಬೇರೆ ಪಕ್ಷದಿಂದ ಅಭ್ಯರ್ಥಿಯನ್ನು ಚುನಾವಣೆಗೆ ಸ್ಪರ್ಧಿಸಲು ಕರೆತಂದಿದೆ ಎಂದು ಗುಪ್ತಾ ಟೀಕಿಸಿದ್ದಾರೆ.

ನಿಮಾರ್ ಜಿಲ್ಲೆಯ ಪೃಥ್ವಿಪುರ, ಸತ್ನಾ ಜಿಲ್ಲೆಯ ರಾಯ್ಗಾಂವ್, ಅಲಿರಾಜಪುರ ಜಿಲ್ಲೆಯ ಜೋಬತ್ ಮತ್ತು ಖಾಂಡ್ವಾ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ.