
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗಾಗಲೇ ತನಿಖೆ ನಡೆಯುತ್ತಿದೆ. ಈ ನಡುವೆ ಸಂಪುಟದ ಮತ್ತೊರ್ವ ಸಚಿವರಿಗೆ ಭೂ ಸಂಕಷ್ಟ ಎದುರಾಗಿದೆ. ಸಚಿವ ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಲಾಗಿದೆ.
ರಾಜ್ಯಪಾಲರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಸಚಿವ ಎನ್.ಎಸ್ ಬೋಸರಾಜು ಕುಟುಂಬದ ಮೇಲೆ ಅರಣ್ಯ ಒತ್ತುವರಿ ಆರೋಪ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಅರಣ್ಯ ಒತ್ತುವರಿ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಯಚೂರು ಜಿಲ್ಲೆ ಅರಣ್ಯ ಪ್ರದೇಶದ 1252 , 1253 , ಮತ್ತು 1245 ಸರ್ವೆ ನಂಬರ್‌ಗಳಲ್ಲಿ 5 ಎಕರೆ ಮೀಸಲು ಅರಣ್ಯ ಪ್ರದೇಶ ಒತ್ತವರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೋಸರಾಜು ಪತ್ನಿ ಎನ್ ಕೃಷ್ಣವೇಣಿ ಅರಣ್ಯ ಒತ್ತವರಿ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಮಾಡಿಕೊಂಡು ಅರಣ್ಯ ಭೂಮಿ ಕಬಳಿಕೆ ಮಾಡಿದ್ದಾರೆ. ಅರಣ್ಯ ಒತ್ತುವರಿ ಆರೋಪ ಹೊಂದಿರುವ ಬೋಸರಾಜು ಅವರನ್ನ ಸಚಿವ ಸ್ಥಾನದಿಂದ ಕೂಡಲೇ ಕೈ ಬಿಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯಪಾಲರಿಗೆ ಒತ್ತಾಯ ಮಾಡಲಾಗಿದೆ.