ಪ್ರತಿ ದಿನ ನಾವು ವಿವಿಧ ರೀತಿಯ ಆಹಾರವನ್ನು ಸೇವಿಸುತ್ತ ಇರ್ತಿವಿ.ಅದರಲ್ಲೂ ಊಟ ತಿಂಡಿಯ ಸಮಯದಲ್ಲಿ ಬಗೆಬಗೆಯ ಪದಾರ್ಥಗಳನ್ನು ತಿನ್ನುತ್ತೀವಿ..ಹಾಗೂ ಕೊಬ್ಬಿನಾಂಶ,ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ತಿಂಡಿಗಳು ಅಬ್ಬಬ್ಬ..ಇವೆಲ್ಲವು ನಮ್ಮ ಆರೋಗ್ಯದ ಮೇಲೆ ನೆಗೆಟಿವ್ ಆಗಿ ಪರಿಣಾಮವನ್ನು ಬೀರುತ್ತದೆ..ಕಲವು ಬಾರಿ ನಮ್ಮ ರಕ್ತನಾಳದೊಳಗೆ ಸೇರಿಕೊಂಡು ದೇಹದ ಪ್ರತಿ ಭಾಗಕ್ಕು ತೊಂದರೆ ನೀಡುತ್ತದೆ..ಹಾಗಾಗಿ ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳಲು ಒಳ್ಳೆಯ ಆಹಾರವನ್ನು ಸೇವಿಸುವುದು ಉತ್ತಮ. ಇದೆಲ್ಲದರ ಜೊತೆಗೆ ಸ್ವಚ್ಛ ಮಾಡಬೇಕು.ಮುಖ್ಯವಾಗಿ ನಮ್ಮ ಕರುಳಿನ ಭಾಗವನ್ನು, ಈ ತರಕಾರಿಗಳನ್ನು ಸೇವಿಸುವುದರಿಂದ ಕರುಳನ್ನು ಸುಲಭವಾಗಿ ಶುದ್ದಿಕರಿಸಬಹುದು,ಹೇಗೇ ಅನ್ನೊದರ ಮಾಹಿತಿ ಹೀಗಿದೆ.

ಕ್ಯಾರೆಟ್
ಕ್ಯಾರೆಟ್ನಲ್ಲಿ ಆಂಟಿ ಆಕ್ಸಿಡೆಂಟ್ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ ಹಾಗೂ ಫೈಬರ್ ಅಂಶ ಹೆಚ್ಚಿದೆ..ಇದು ಜೀರ್ಣಾಂಗದ ಆರೋಗ್ಯವನ್ನು ಕಾಪಡುತ್ತದೆ..ಆಕ್ಸಿಡೇಟಿವ್ ಒತ್ತಡದಿಂದ ಕೊಲೊನ್ ಅನ್ನು ರಕ್ಷಿಸುತ್ತದೆ. ಇದರಿಂದ ನಾವೂ ವಾರಕ್ಕೆ 2-3 ಭಾರಿ ಕ್ಯಾರೆಟ್ ಸೇವಿಸುವುದು ಉತ್ತಮ.

ಬೀಟ್ರೂಟ್
ಇದರಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಫೈಬರ ಅಂಶ ಹೆಚ್ಚಿದೆ..ಮತ್ತು ಕರುಳಿನಲ್ಲಿರುವ ವಿಷವನ್ನು ಹೊರ ಹಾಕಲು ಬೀಟ್ರೂಟ್ ತುಂಬಾನೆ ಒಳ್ಳೆಯದು.ಬೀಟ್ರೂಟ್ನಲ್ಲಿರುವ ಫೈಬರ್ ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಬ್ರೊಕೊಲಿ
ಬ್ರೊಕೊಲಿ ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ಫೈಟೊನ್ಯೂಟ್ರಿಯೆಂಟ್ಗಳಲ್ಲಿ ಸಮೃದ್ಧವಾಗಿದೆ, ಸಲ್ಫೊರಾಫೇನ್ ಅನ್ನು ಹೊಂದಿರುತ್ತದೆ, ಹಾಗೂ ಕರುಳಿನ ಒಳಪದರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

- ಇದೆಲ್ಲದೆ ಜೊತೆಗೆ ಹೆಚ್ಚು ನೀರನ್ನು ಕುಡಿಯಬೇಕು
- ದಿನಕ್ಕೆ 5-6 ರೀತಿಯ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು.
- ಫೈಬರ್ ಹೆಚ್ಚಿರುವ ಆಹಾರ ಸೇವಿಸುವುದು ಉತ್ತಮ.
- ರೆಡ್ ಮೀಟ್ ಹೆಚ್ಚು ಸೇವಸುವುದರಿಂದ ದೇಹದ ಆರೋಗ್ಯಕ್ಕೆ ಹಾಗೂ ಕರುಳಿಗು ತೊಂದರೆ.
- ತಪ್ಪದೆ ಪ್ರತಿ ದಿನ ವ್ಯಾಯಮ ಮಾಡುದುವು ಒಳ್ಳೆಯದು.