ಕಾಫಿ ನಾಡು ಚಂದು ಈಗ ಸೋಷಿಯಲ್ ಮೀಡಿಯಾ ಸ್ಟಾರ್. ಇನ್ಸ್ಟಾಗ್ರಾಮ್ ಒಪನ್ ಮಾಡಿದರೆ ಸಾಕು ನಾನು ನಿಮಗಮ ಶಿವಣ್ಣ, ಪುನೀತಣ್ಣನ ಅಭಿಮಾನಿ ಎನ್ನುತ್ತಲೇ ಕನ್ನಡಿಗರ ಮೈಮನ ಗೆದ್ದಿದ್ದಾರೆ.
ಕಾಫಿ ನಾಡು ಚಂದು ತಮ್ಮ ಆಸೆಯಂತೆ ಶಿವ ರಾಜ್ಕುಮಾರ್ ಅವರನ್ನು ಜೀವಾಹಿನಿಯ ಡಿಕೆಡಿ ವೇದಿಕೆ ಮೇಲೆ ಭೇಟಿ ಕೂಡಾ ಮಾಡಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟುತ್ತಿರುವ ವಿಡಿಯೋ ಈಗ ಭಾರೀ ಸುದ್ದಿಯಲ್ಲಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಪೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದ್ದು ಜನರು ಈಗಲೂ ಕಮೆಂಟ್ ಮಾಡುತ್ತಿದ್ದಾರೆ.