ರಾಜ್ಯದಲ್ಲಿ ಪಂಚಮಸಾಲಿ ಹೋರಾಟದ (Panchamasali protests) ಕಿಚ್ಚು ಹೆಚ್ಚಾಗಿದ್ದು ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಸಿಎಂ ಸಿದ್ದರಾಮಯ್ಯ (Cm siddaramaiah) ಪ್ರತಿಕ್ರಿಯಿಸಿದ್ದಾರೆ.
ನಮ್ಮದು ಪ್ರಜಾಪ್ರಭುತ್ವದ ರಾಷ್ಟ್ರ. ಇಲ್ಲಿ ಹೋರಾಟಕ್ಕೆ ಸಂಪೂರ್ಣ ಹಕ್ಕುಗಳಿದೆ, ಅದರ ಬಗ್ಗೆ ಯಾವುದೇ ತಕರಾರಿಲ್ಲ. ಆದ್ರೆ ಸಂವಿಧಾನ ಪರವಾಗಿ ಹೋರಾಟ ಇರಬೇಕು.ಈ ಹಿಂದೆ ಬಿಜೆಪಿ ಸರ್ಕಾರ (Bjp government) ಪಂಚಮಸಾಲಿಗಳಿಗೆ ಟೋಪಿ ಹಾಕಿದೆ. ಪಂಚಮಸಾಲಿ ಸಮಾಜಕ್ಕೆ ಬಿಜೆಪಿ ಸರ್ಕಾರ 2ಡಿ ಕೊಟ್ಟಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಹೈಕೋರ್ಟ್ ಗೆ ಅಫಿಡವಿಟ್ ಡೇಟ್ ಹಾಕಿದ್ದು ಬಿಜೆಪಿ. ಹಾಗಿದ್ರೆ ಆಗ ಯಾಕೆ ಹೋರಾಟ ಈ ರೀತಿ ಮಾಡ್ಲಿಲ್ಲ. ಈ ಪ್ರತಿಭಟನಾಕಾರರು ಸಿಎಂ ಅಲ್ಲೆ ಬರಬೇಕು ಅಂತಾರೆ, ಸಿಎಂ ಎಲ್ಲ ಕಡೆಗೂ ಹೋಗೊಕೆ ಆಗತ್ತಾ? ಎಂದು ಸಿಡಿಮಿಡಿಗೊಂಡಿದ್ದಾರೆ.
ಈ ಬಗ್ಗೆ ಸುವರ್ಣಸೌಧಕ್ಕೆ ನಾನು ಮಾತಾಡೋಣ ಬನ್ನಿ ಅಂತ ಕರೆದೆ. ಅದಕ್ಕೂ ಕೂಡ ಬರಲಿಲ್ಲ.ಆ ನಂತರ ಸುವರ್ಣ ಸೌಧಕ್ಕೆ ನುಗ್ಗೋಕೆ ಪ್ರಯತ್ನ ಮಾಡಿದ್ರು. ಇದಕ್ಕೆ ನಮ್ಮ ಬಳಿ ಪ್ರೂಫ್ ಇವೆ, ಫೋಟೋ ಬೇಕಾದ್ರೂ ತೋರಿಸ್ತೀನಿ. ಪ್ರತಿಭಟನಾಕಾರರು ಶಾಂತಿಯುತವಾಗಿ ಹೋರಾಟ ಮಾಡಬೇಕು.ಅದನ್ನು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡ್ರೆ ಸರ್ಕಾರ ಸುಮ್ಮನಿರಲ್ಲ ಎಂದು ಸಿಎಂ ಎಚ್ಚರಿಕೆ ಕೊಟ್ಟಿದ್ದಾರೆ.