Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಆರ್​ಎಸ್​ಎಸ್​ ಕಚೇರಿಯಲ್ಲಿ ಸಿಎಂ ನಡೆಸಿದ ಸೀಕ್ರೆಟ್​ ಸಭೆಯ ಗುಟ್ಟು ಏನು ?

ಪ್ರತಿಧ್ವನಿ

ಪ್ರತಿಧ್ವನಿ

November 26, 2022
Share on FacebookShare on Twitter

ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಜನತಾದಳದಿಂದ ಬಿಜೆಪಿಗೆ ಸೇರ್ಪಡೆ ಆದವರು. ಜಾತ್ಯಾತಿತ ಹಿನ್ನಳೆ ಉಳ್ಳ ನಾಯಕ ಅನ್ನೋ ಕಾರಣಕ್ಕೆ ಆರಂಭದಲ್ಲಿ ಬಿಜೆಪಿ ನಾಯಕರೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವಿರೋಧ ಮಾಡಿದ್ದರು. ಆರ್​ಎಸ್​ಎಸ್​ ಸಂಸ್ಕೃತಿಗೆ ಬಸವರಾಜ ಬೊಮ್ಮಾಯಿ ಒಗ್ಗಿಕೊಳ್ಳುವುದು ಕಷ್ಟ ಎನ್ನಲಾಗ್ತಿತ್ತು. ಆದರೆ ಇದೀಗ ನಿಧಾನವಾಗಿ ಆರ್​ಎಸ್​ಎಸ್​ ಸಂಸ್ಕೃತಿಗೆ ಸಿಎಂ ಒಗ್ಗಿಕೊಳ್ತಿದ್ದಾರೆ. ನಿನ್ನೆ ಬರೋಬ್ಬರಿ 2 ಗಂಟೆಗಳ ಕಾಲ ಸಿಎಂ ಕೇಶವಾ ಕೃಪಾದಲ್ಲಿ ಆರ್​ಎಸ್​ಎಸ್​ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವರಾದ ಡಾ ಸುಧಾಕರ್​, ಆರ್​ ಅಶೋಕ್​, ಅಶ್ವತ್ಥ ನಾರಾಯಣ ಮುಂತಾದವರು ಸಾಥ್​ ನೀಡಿದ್ದರು. ಆದರೆ ಸಭೆಯಲ್ಲಿ ಯಾರೆಲ್ಲಾ ಆರ್​ಎಸ್​ಎಸ್​ ನಾಯಕರು ಇದ್ದರು..? ಏನೇಲ್ಲಾ ಚರ್ಚೆ ಆಯ್ತು ಅನ್ನೋ ಬಗ್ಗೆ ಎಲ್ಲಿಯೂ ಸೋರಿಕೆ ಆಗದಂತೆ ನೋಡಿಕೊಳ್ಳಲಾಗಿದೆ. 

ಹೆಚ್ಚು ಓದಿದ ಸ್ಟೋರಿಗಳು

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

Mimicry comedy Gopi | ಒಂದೇ ವೇದಿಕೆಯಲ್ಲಿ ರಾಜಕೀಯಾ ಮುಖಂಡರು!

ಕುಮಟಾ ಶಾಸಕರಿಗೆ ಕಂಟಕವಾದ ಪರೇಶ್‌ ಮೇಸ್ತಾ ಪ್ರಕರಣ: ಹಿಂದೂ ಕಾರ್ಯಕರ್ತರಿಂದಲೇ ಛೀಮಾರಿ

ರಾಜ್ಯ ಅಥವಾ ದೇಶದ ರಾಜಕಾರಣದಲ್ಲಿ ಆರ್​ಎಸ್​ಎಸ್​ ನೇರ ಪಾಲ್ಗೊಳ್ಳುವಿಕೆ ಇದೆ ಎನ್ನುವುದು ಕಾಂಗ್ರೆಸ್​ ಸದಾ ಮಾಡಿಕೊಂಡು ಬರುತ್ತಿರೋ ಆರೋಪ. ಆದರೆ ಸಂಘ ಪರಿವಾರ ಕೇವಲ ಸಲಹೆ ಸೂಚನೆಗಳನ್ನು ನೀಡುತ್ತದೆ. ಅಧಿಕಾರದಲ್ಲಿ ಆರ್​ಎಸ್​ಎಸ್​ ಸ್ವಯಂ ಸೇವಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ ಎನ್ನುವುದು ಬಿಜೆಪಿ ನಾಯಕರ ಸಮರ್ಥನೆ. ಆದರೆ ಆಡಳಿತವನ್ನು ಹೇಗೆ ನಡೆಸಬೇಕು, ಯಾವ ಕಾನೂನು ಜಾರಿ ಮಾಡಬೇಕು. ಯಾರನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋ ಇಂಚಿಂಚು ಮಾಹಿತಿಯು ಚಾಮರಾಜಪೇಟೆಯ ಕೇಶವಾ ಕೃಪಾ ಕಚೇರಿಯಿಂದಲೇ ಬರುತ್ತದೆ ಎನ್ನುವುದನ್ನು ಯಾರು ಅಲ್ಲಗಳೆಯುವಂತಿಲ್ಲ. ಇದೀಗ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಾಲ್ಕಾರು ವಿಚಾರಗಳ ಬಗ್ಗೆ ಚರ್ಚೆ ಆಗಿರಬಹುದು ಅಂತಾ ಊಹೆ ಮಾಡಲಾಗ್ತಿದೆ. ಆದರೆ ಬಿಜೆಪಿ ನಾಯಕರು ಹೇಳ್ತಿರೋ ಮಾತುಗಳು ಮಾತ್ರ ಬೇರೆಯದೇ ಇದೆ. 

ಮಂಗಳೂರು ಬಾಂಬ್​ ಬ್ಲಾಸ್ಟ್​ನಲ್ಲಿ ಕಾಂಗ್ರೆಸ್​ ಬೆಂಬಲ ನೀಡುತ್ತಿದೆ ಎನ್ನುವ ಹಾಗೆ ಪ್ರಕರಣವನ್ನು ಕಾಂಗ್ರೆಸ್​ ಕಡೆಗೆ ತಿರುಗಿಸಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಮುಜುಗರ ಮಾಡುವುದು. ಮತ್ತೊಂದು ಸ್ವತಃ ಬಿಜೆಪಿ ಸರ್ಕಾರವೇ ಮತದಾರರ ಪಟ್ಟಿಯಲ್ಲಿ ಕೆಲವು ಸಮುದಾಯದ ಜನರ ಹೆಸರನ್ನು ಡಿಲೀಟ್​ ಮಾಡಿಸಿದ್ದಾರೆ ಅನ್ನೋ ಆರೋಪದಿಂದ ಹೇಗೆ ಜಾರಿಕೊಳ್ಳಬೇಕು ಹಾಗು ಆ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಯಾವ ರೀತಿಯ ಮಾಹಿತಿ ಕೊಡಬೇಕು ಅನ್ನೋ ಬಗ್ಗೆ ಸಲಹೆ ಸಿಕ್ಕಿರಬಹುದು ಎನ್ನಲಾಗ್ತಿದೆ. ಅದರ ಜೊತೆಗೆ ತೆಲಂಗಾಣದಲ್ಲಿ ಆಪರೇಷನ್​ ಕಮಲ ಮಾಡುವುದಕ್ಕೆ ಹೋಗಿದ್ದ ಆರ್​ಎಸ್​ಎಸ್​​ ನಾಯಕ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ಗೆ 2ನೇ ಬಾರಿ ಕೋರ್ಟ್​ ಸಮನ್ಸ್​ ನೀಡಿದೆ. ಈ ಪ್ರಕರಣದಲ್ಲಿ ಸಂತೋಷ್​ ಅವರನ್ನು ಬಚಾವ್​ ಮಾಡಲು ಇರುವ ಆಯ್ಕೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಬಿಜೆಪಿ ನಾಯಕರು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಆಗಿದೆ ಎನ್ನುತ್ತಿದ್ದಾರೆ. 

ಹಳೇ ಮೈಸೂರು ಪ್ರಾಂತ್ಯದಲ್ಲಿ ಗೆಲ್ಲಲು ಚಾಮರಾಜಪೇಟೆಯ RSS ಕಚೇರಿಯಲ್ಲಿ ನೀಲನಕ್ಷೆ ಜೊತೆಗೆ ಮಹತ್ವದ ಚರ್ಚೆ ನಡೆಸಲಾಗಿದೆ, ಸರ್ಕಾರದ ಆಡಳಿತ ಕಾರ್ಯಗಳ ಹೇಗಿರಬೇಕು..? ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಹೇಗೆ..? ಸರ್ಕಾರದ ಪರವಾದ ಜ‌ನರ ಒಲವು ಮೂಡುವಂತೆ ಮಾಡುವುದಕ್ಕೆ ಏನೇನು ಮಾಡಬೇಕು..? ಹಳೇ ಮೈಸೂರು ಭಾಗದಲ್ಲೇ ಪಕ್ಷ ಬಲವರ್ಧನೆ ಮಾಡುವುದರಿಂದ 25 ರಿಂದ 30 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಅವಕಾಶವಿದೆ. ವಿಪಕ್ಷಗಳ ಆರೋಪಗಳಿಗೆ ಪರಿಣಾಮಕಾರಿಯಾಗಿ ತಿರುಗೇಟು ನೀಡಿ. ಕಾಂಗ್ರೆಸ್‌ನ ಟಿಪ್ಪು ಪ್ರತಿಮೆ ವಿಚಾರವನ್ನೇ ಹಿಡಿದುಕೊಂಡು ಹೋರಾಟ ರೂಪಿಸುವುದು ಹೇಗೆ..? ಹಳೇ ಮೈಸೂರು ಭಾಗದಲ್ಲಿ ಹಿಂದೂ ಅಜೆಂಡಾವನ್ನು ಪ್ರಬಲವಾಗಿ ಬಳಸುವುದಕ್ಕೆ ಏನೆಲ್ಲಾ ಮಾಡಬೇಕು. ಸಂಘ ಏನು ಮಾಡುತ್ತೆ..? ಬಿಜೆಪಿ ಏನು ಮಾಡಬೇಕು ಅನ್ನೋ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎನ್ನೋ ಮಾಹಿತಿ ಬಿಜೆಪಿ ಮೂಲಗಳಿಂದಲೇ ಸಿಕ್ಕಿದೆ. ಒಂದಂತೂ ಸತ್ಯ. ರಾಜ್ಯ ಹಾಗು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅನ್ನೋದಕ್ಕಿಂತ ಬಿಜೆಪಿ ಮಾತೃ ಸಂಸ್ಥೆ ಆರ್​ಎಸ್​ಎಸ್​ ಸರ್ಕಾರ ಎನ್ನಬಹುದು.

ReplyForward
RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
play
| Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ
«
Prev
1
/
3858
Next
»
loading

don't miss it !

PSI ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ !!
Uncategorized

PSI ಅಕ್ರಮಕ್ಕೆ ಸಿಕ್ಕಿದೆ ಮಗದೊಂದು ಸಾಕ್ಷ್ಯ..!? ಸರ್ಕಾರದಿಂದ ಜಾಣನಡೆ !!

by ಕೃಷ್ಣ ಮಣಿ
January 26, 2023
D. K. Shivakumar : ಅವನಿಗ ಪ್ಯಾಂಟ್‌ ಬಿಚ್ಚು ಅಂತ ನಾವು ಹೇಳಿದ್ವ | Pratidhvani
ರಾಜಕೀಯ

D. K. Shivakumar : ಅವನಿಗ ಪ್ಯಾಂಟ್‌ ಬಿಚ್ಚು ಅಂತ ನಾವು ಹೇಳಿದ್ವ | Pratidhvani

by ಪ್ರತಿಧ್ವನಿ
January 25, 2023
Kumar Bangarappa: ಕಂದಾಯ ಇಲಾಖೆ, ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕುಮಾರ್ ಗರಂ
ರಾಜಕೀಯ

Kumar Bangarappa: ಕಂದಾಯ ಇಲಾಖೆ, ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ವಿರುದ್ಧ ಕುಮಾರ್ ಗರಂ

by ಪ್ರತಿಧ್ವನಿ
January 25, 2023
Madhu Bangarappa: : ದಮ್ಮು ತಾಕತ್ತು ಅನ್ನೋದು ಬಿಜೆಪಿ ಅವರ ಭಾಷಣದಲ್ಲಿ ಮಾತ್ರ | Pratidhvani
ರಾಜಕೀಯ

Madhu Bangarappa: : ದಮ್ಮು ತಾಕತ್ತು ಅನ್ನೋದು ಬಿಜೆಪಿ ಅವರ ಭಾಷಣದಲ್ಲಿ ಮಾತ್ರ | Pratidhvani

by ಪ್ರತಿಧ್ವನಿ
January 24, 2023
HDK ಕೆಣಕುವುದು, ಬಿಜೆಪಿಗೆ ಮುಜುಗರ ಮಾಡುವುದು.. ಬಿಜೆಪಿಯದ್ದೇ ಲೆಕ್ಕಾಚಾರ..
ರಾಜಕೀಯ

HDK ಕೆಣಕುವುದು, ಬಿಜೆಪಿಗೆ ಮುಜುಗರ ಮಾಡುವುದು.. ಬಿಜೆಪಿಯದ್ದೇ ಲೆಕ್ಕಾಚಾರ..

by ಕೃಷ್ಣ ಮಣಿ
January 21, 2023
Next Post
ಡಿಸೆಂಬರ್‌ 30ಕ್ಕೆ ತೆರೆಮೇಲೆ ಪದವಿಪೂರ್ವ

ಡಿಸೆಂಬರ್‌ 30ಕ್ಕೆ ತೆರೆಮೇಲೆ ಪದವಿಪೂರ್ವ

ಬ್ಯೂಟಿ ಇದೆ ಟ್ಯಾಲೆಂಟ್‌ ಇದೆ ಆದರೆ ನಿಯತ್ತಿಲ್ಲ | Rashmika Mandanna | Rishab Shetty |

ಬ್ಯೂಟಿ ಇದೆ ಟ್ಯಾಲೆಂಟ್‌ ಇದೆ ಆದರೆ ನಿಯತ್ತಿಲ್ಲ | Rashmika Mandanna | Rishab Shetty |

ಒಬ್ಬ ಸಾಮಾನ್ಯ ಕಾರ್ಯಕರ್ತ ಪಕ್ಷದಿಂದ ಬಯಸುವ ಎಲ್ಲ ಹುದ್ದೆ ಮತ್ತು ಅವಕಾಶಗಳನ್ನು ಆಜಾದ್ ಪಡೆದಿದ್ದಾರೆ : ಸಿದ್ದರಾಮಯ್ಯ

ರೈತರ-ಗ್ರಾಹಕರ ಹಿತಾಸಕ್ತಿ ಕಾಪಾಡುವಂತೆ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist