ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಲಿಟ್ಟರ್-ತುರ್ಕವಾಂಗವ್ ರಸ್ತೆಯಲ್ಲಿ ಭಾರತೀಯ ಸೇನೆ ಹಾಗು ಉಗ್ರರ ನಡುವಿನ ಭೀಕರ ಕ್ರಾಸ್ ಫೈರಿಂಗ್ನಲ್ಲಿ ಓರ್ವ ನಾಗರೀಕ ಸಾವನಪ್ಪಿದ್ದಾನೆ.
CRPFನ ಜಂಟಿ ಗಸ್ತು ವಾಹನದ ಮೇಲೆ ಭಯೋತ್ಪಾದಕರು ಏಕಾಏಕಿ ಗುಂದಿನ ದಾಳಿ ನಡೆಸಿದ್ದಾರೆ. ಆ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಾಗರೀಕನಿಗೆ ಗುಂಡು ತಗುಲಿ ಗಾಯವಾಗಿದೆ ಕೂಡಲ್ಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವಪ್ಪಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
