ಚೀನಾ ದೇಶದಲ್ಲಿ ಸೋಮವಾರ ಒಂದೇ ದಿನ 141 COVID-19 ಪ್ರಕರಣಗಳು ವರದಿಯಾಗಿದ್ದು, ಶಾಂಘೈ ಒಂದರಲ್ಲೇ 58 ಪ್ರಕರಣ ದಾಖಲಗಿದೆ ಇನ್ನು ಬೀಜಿಂಗ್‌ನಲ್ಲಿ 41 ಕೋವಿಡ್ ಕೇಸ್ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.
ಬೀಜಿಂಗ್ ಮುನ್ಸಿಪಲ್ ಆರೋಗ್ಯ ಆಯೋಗವು ಸೋಮವಾರ ನಗರವು ಏಳು ಸ್ಥಳೀಯ ಲಕ್ಷಣರಹಿತ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಹೇಳಿದೆ. ಏತನ್ಮಧ್ಯೆ, ಚೇತರಿಸಿಕೊಂಡ 39 ರೋಗಿಗಳನ್ನು ನಗರದ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಲ್ಲದೆ, ಚೀನಾದ ಶಾಂಘೈ ಪ್ರದೇಶದಲ್ಲಿ ಸೋಮವಾರ 58 COVID-19 ಪ್ರಕರಣಗಳು ದಾಖಲಾಗಿದ್ದು, 422 ಲಕ್ಷಣರಹಿತ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನೋಡಿದರೆ ಮತ್ತೆ ಕೋವಿಡ್ ಎರಡನೇ ಅಲೆಯಂತೆ ಲಾಕ್ಡೌನ್ ಮಾಡಬೇಕಾಗಿ ಸಂದರ್ಭ ಬರಬಹುದು ಎಂದು ಚೀನಾ ಸರ್ಕಾರ ‘ಶೂನ್ಯ-ಕೋವಿಡ್’ ತಂತ್ರವನ್ನು ಅನುಸರಿಸಲು ಮುಂದಾಗಿದೆ.






