ಸ್ಯಾಂಡಲ್ವುಡ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ ಶ್ವಾನ (ನಾಯಿ) ಮೇಲೆ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಚಾರ್ಲಿಯಾಗಿ ಅಭಿನಯಿಸಿರುವ ನಾಯಿಗೆ ಕರ್ನಾಟಕದ ಜನರಷ್ಟೇ ಅಲ್ಲದೇ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಪ್ರೇಕ್ಷಕರು ಚಾರ್ಲಿ ಅಭಿನಯಕ್ಕೆ ಮನ ಸೋತಿದ್ದಾರೆ. ಇದೀಗ ಚಾರ್ಲಿ ನಾಯಿಗೆ ಫುಲ್ ಡಿಮ್ಯಾಂಡ್ ಎಂಬುದೆ ಸುದ್ದಿ. ಬರೀ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಿಂದಲೂ ಚಾರ್ಲಿಗೆ ಆಫರ್ ಬರ್ತಾ ಇದೆ ಎಂಬ ಬಗ್ಗೆ ಮಾಹಿತಿ ಕೇಳಿಬಂದಿದೆ.
ಚಾರ್ಲಿ ನಾಯಿ ಹಾಗೂ ಅದಕ್ಕೆ ಟ್ರೈನಿಂಗ್ ಕೊಟ್ಟವರು ಮೈಸೂರಿನವರು. ಚಾರ್ಲಿಗೆ ತರಬೇತಿ ನೀಡಿದ್ದ ಮೈಸೂರಿಗ ಪ್ರಮೋದ್ ಪ್ರಮೋದ್ ಅವರ ಕೇಂದ್ರದ ಶ್ವಾನಗಳಿಗೆ ಅವಕಾಶ ಬಂದಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಿಂದ ಇಲ್ಲಿನ ನಾಯಿಗಳಿಗೆ ಆಫರ್ ಬರ್ತಿದೆಯಂತೆ. ಪ್ರಮೋದ್ ಅವರು ಮೈಸೂರಿನ ಡಿ ಸಾಲುಂಡಿಯಲ್ಲಿ ಡಿಕೆ9 ವರ್ಕಿಂಗ್ ಡಾಗ್ ಟ್ರೇನಿಂಗ್ ಸ್ಕೂಲ್ ಎನ್ನುವ ಹೆಸರಿನಲ್ಲಿ ನಾಯಿಗಳ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಅಲ್ಲಿಯೇ ಚಾರ್ಲಿಗೆ ಟ್ರೈನಿಂಗ್ ಕೊಟ್ಟಿದ್ದಾರೆ.
ಬೇರೆ ಭಾಷೆಯ ಸಿನಿಮಾಗಳಿಂದಲೂ ಚಾರ್ಲಿಗೆ ಆಫರ್ ಬರ್ತಾ ಇದೆ ಎಂಬ ಬಗ್ಗೆ ಮಾಹಿತಿ ಕೇಳಿಬಂದಿದ್ದು ಅಧಿಕೃತವಾಗಿ ಇನ್ನು ಮಾಹಿತಿಯನ್ನು ಹೊರಗೆ ಬಿಟ್ಟಿಲ್ಲ. ಆದರೆ ಶೀಘ್ರದಲ್ಲೇ ಈ ಕುರಿತು ಸುದ್ದಿ ಬರುತ್ತದೆ ಎಂಬ ಮಾಹಿತಿ ಇದೆ.