ಹಾಸನ ಮಾಜಿ ಸಂಸದ ಪ್ರಜ್ವಲ್ (Prajwal Revanna) ವಿರುದ್ದ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ 42 ನೇ ACMM ನ್ಯಾಯಾಲಯಕ್ಕೆ 3 ನೇ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಲಾಗಿದೆ. ಪ್ರಜ್ವಲ್ ವಿರುದ್ದ 376(2),(N) ,506,354,(a),(1)(11),354(b) 354(c), ಐಟಿ ಕಾಯ್ದೆ 66(E) ಅಡಿಯಲ್ಲಿ ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಈ ಚಾರ್ಜ್ ಶೀಟ್ ನಲ್ಲಿ 120 ಸಾಕ್ಷ್ಯಗಳ ಉಲ್ಲೇಖಿಸಲಾಗಿದ್ದು, 1691 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಮಾಡಲಾಗಿದೆ.ಹಾಸನದ ಸಂಸದರಿಗೆ ಎಂದು ಹಂಚಿಕೆಯಾಗಿದ್ದ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ಈ ಅತ್ಯಾಚಾರ ನಡೆದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
2020 ಜನವರಿ ಫೆಬ್ರುವರಿ ಮಧ್ಯದಲ್ಲಿ ಸಂಸದರನ್ನ ಭೇಟಿಯಾಗಿದ್ದ ಸಂತ್ರಸ್ಥೆ ಮಹಿಳೆಯನ್ನ ಕೊಠಡಿ ಗೆ ಕರೆದುಕೊಂಡು ಹೋಗಿ ಬಲವಂತವಾಗಿ ಆತ್ಯಚಾರರ ಎಸಗಿದ್ದಾರೆ ಎಂದು ಸಂತ್ರಸ್ಥೆ ಮಹಿಳೆ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ಮಹಿಳೆ ನಿರಾಕರಿಸಿದಾಗ ಗನ್ (Gun) ನಿಂದ ನಿನ್ನ ಗಂಡನನ್ನು ಮುಗಿಸಿಬೀಡುತ್ತೇನೆ ಎಂದು ಬೆದರಿಕೆ ಹಾಕಿ ವಿಡಿಯೋ ರೆರ್ಕಾಡ್ ಮಾಡಿಕೊಂಡು ಅತ್ಯಾಚಾರ ಎಸಗಲಾಗಿದೆ.
2023 ಡಿಸೆಂಬರ್ ವರೆಗೆ ಪ್ರಜ್ವಲ್ ಈ ರೀತಿ ಹಲವು ಬಾರಿ ಆತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಕೆಲಸವೊಂದಕ್ಕೆ ಶಿಫಾರಸು ಪಡೆಯಲು ಹೋದಾಗ ಬೆದರಿಸಿ ನನ್ನ ಇಚ್ಚೇಗೆ ವಿರುದ್ದವಾಗಿ ನಡೆದುಕೊಂಡಿರುವ ಪ್ರಜ್ವಲ್ ಬಲಾತ್ಕಾರ ಮಾಡಿದ್ದಾರೆ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.