ಜೆಜೆ ನಗರ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂದೀಸಿದಂತೆ ಉರ್ದು ಮಾತಾಡಲು ಬರಲಿಲ್ಲವೆಂದು ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿ ಮತ್ತೆ ಯುಟರ್ನ್ ಹೊಡೆದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅರ್ಧ ಜ್ಞಾನೇಂದ್ರ ಎಂದು ಟೀಕಿಸಿದ್ದಾರೆ.
ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿರುವ ಚಂದ್ರು ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಅರಗ ಜ್ಞಾನೇಂದ್ರ ಅಲ್ಲ ಅರ್ಧ ಜ್ಞಾನಿ’ ಎಂದು ಟೀಕಿಸಿದ್ದಾರೆ. ಅರ್ಧ ಜ್ಞಾನ ಇರೋದು ತಪ್ಪು, ಅವರಿಗೆ ಪೂರ್ತಿ ಜ್ಞಾನ ಇದಿದ್ರೆ ಹೀಗೆ ಮಾತನಾಡ್ತಿರಲಿಲ್ಲ. ಪೂರ್ತಿ ಜ್ಞಾನ ಇರಲಿಲ್ಲ ಅಂದರೂ ಪರವಾಗಿರಲಿಲ್ಲ. ಆದರೆ, ಅವರಿಗೆ ಅರ್ಧ ಜ್ಞಾನ ಮಾತ್ರ ಇರೋದು ಎಂದು ನಲಪಾಡ್ ಕುಟುಕಿದ್ದಾರೆ.

ಅರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವ ಸ್ಥಾನದಲ್ಲಿ ಇರಲು ಯೋಗ್ಯತೆ ಇಲ್ಲ. ತಕ್ಷಣವೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸುತ್ತೇವೆಂದು ನಲಪಾಡ್ ಹೇಳಿದ್ದಾರೆ. ಮತ್ತು ಹೋಮ್ ಮಿನಿಸ್ಟರ್ ವಿರುದ್ಧ ದೂರು ನೀಡಿದರೂ ದಾಖಲಾಗಿಲ್ಲ, ನಾವು ಕೋರ್ಟ್ ಮೂಲಕ FIR ಮಾಡುತ್ತೇವೆ ಎಂದಿದ್ದಾರೆ.