• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೇವರು ರುಜು ಮಾಡಿದನು’ ಸಿನಿಮಾದ ಮುಹೂರ್ತ ಸಂಭ್ರಮ…ಯುವ ಪ್ರತಿಭೆಗಳ ಜೊತೆ ಸಿಂಪಲ್ ಸುನಿ ಹೊಸ ಪಯಣ

ಪ್ರತಿಧ್ವನಿ by ಪ್ರತಿಧ್ವನಿ
October 21, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ನಿರ್ದೇಶಕ ಸಿಂಪಲ್‌ ಸುನಿ ಹೊಸ ಸಿನಿಮಾ “ದೇವರು ರುಜು ಮಾಡಿದನು’’. ಇಂದು ಈ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ದೇವರು ರುಜು ಮಾಡಿದನು ಸಿನಿಮಾದ ಮುಹೂರ್ತ ನೆರವೇರಿದೆ. ಗ್ರೀನ್ ಹೌಸ್ ಮಾಲೀಕರಾದ ವಾಸು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಾಯಕ ವೀರಾಜ್ ಅಜ್ಜಿ ಕ್ಯಾಮೆರಾಗೆ ಚಾಲನೆ ನೀಡಿದರು.ಈ ಚಿತ್ರದ ಮೂಲಕ ಯುವ ನಟ ವೀರಾಜ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ADVERTISEMENT

ಟೀಸರ್ ರಿಲೀಸ್.

ದೇವರು ರುಜು ಮಾಡಿದನು ಎಂಬ ಕ್ಯಾಚಿ ಟೈಟಲ್ ಮೂಲಕ‌ ಕಿಕ್ ಕೊಟ್ಟಿದ್ದ ಸುನಿ ಟೈಟಲ್ ಟೀಸರ್ ಬಿಟ್ಟು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದಾರೆ. ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಸುನಿ ಹೇಳೋದಿಕ್ಕೆ ಹೊರಟಿದ್ದಾರೆ. ದೇವರು ರುಜು ಮಾಡಿದನು ಟೀಸರ್ ಬಹಳ ಇಂಪ್ರೆಸಿವ್ ಆಗಿದೆ. ಕ್ಯಾಮೆರಾ ವರ್ಕ್, ಅದ್ಭುತ ಸಂಗೀತ, ನಾಯಕ ವೀರಾಜ್, ನಾಯಕಿಯರಾದ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಅಭಿನಯಕ್ಕೆ ಟೀಸರ್ ತೂಕ ಹೆಚ್ಚಿಸಿದೆ.

ಮುಹೂರ್ತದ ಬಳಿಕ ಮಾತನಾಡಿದ ನಾಯಕ ವೀರಾಜ್, ತುಂಬಾ ಖುಷಿಯಾಗುತ್ತಿದೆ. ಈ ಮುಹೂರ್ತ ಸಮಾರಂಭ ನನ್ನ ಜೀವನದ ಒಂದಲ್ಲ, ಎರಡಲ್ಲ ಎಷ್ಟೋ ವರ್ಷದ ಕನಸು. ಚಿಕ್ಕವನಿದ್ದಾಗಿನಿಂದಲೂ ನಟನಾಗಬೇಕು ಎಂಬ ಆಸೆ ನನ್ನಲ್ಲಿತ್ತು. ಸ್ಕೂಲ್ ಟೀಚರ್ಸ್ ಡ್ಯಾನ್ಸ್, ಆಕ್ಟಿಂಗ್ ಮಾಡು ಎಂದು ಹೇಳುತ್ತಿದ್ದರು. ನಾನು ಆಗ ಮಾಡುತ್ತಿದ್ದೆ. ಆಗ ನನ್ನ ಫ್ರೆಂಡ್ಸ್ ಚಪ್ಪಾಳೆ ತಟ್ಟುತ್ತಿದ್ದರು. ಆಗ ಇದೇನೂ ಕಿಕ್ ಇದೆಯಲ್ಲಾ, ಸಖತ್ ಇದೆ ಎನಿಸುವುದು. ಕಲಾವಿದರಿಗೆ ಇದೆ ಬೇಕಿರುವುದು. ಜನ ಕೊಡುವ ರೆಸ್ಪಾನ್ಸ್ ಅದು ವಂಡರ್ ಫುಲ್. ಅಂದಿನಿಂದ ನನ್ನ ಪಯಣ ಶುರುವಾಯ್ತು. ಜನರಿಗೆ ಏನಾದರೂ ಮಾಡಬೇಕು. ನನಗೆ ಇಷ್ಟವಾಗಿದ್ದನ್ನು ಮಾಡಬೇಕು ಅಂತಾ ಅನಿಸಿತು. ಸ್ಕೂಲ್, ಕಾಲೇಜ್, ಡ್ಯಾನ್ಸ್, ಆಕ್ಟಿಂಗ್ ಮಾಡುತ್ತಾ ಬಂದೆ. ನಂತರ ನಟನೆ ತರಬೇತಿ ಪಡೆದೆ. ನಾಟಕ ಮಾಡಿಕೊಂಡು ಬಂದಿದ್ದೇನೆ. ನಾನು ಹೊಸಬ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಎಂದರು.

ವೀರಾಜ್ ರಂಗಭೂಮಿ ಕಲಾವಿದ. ರಂಗಭೂಮಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿರುವ ಈ ವೀರಾಜ್ ಈಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೊಸ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯ ಮಾಡುವಾಗ ಸಾಕಷ್ಟು ತಯಾರಿಯನ್ನು ಮಾಡಿಕೊಂಡೇ ಎಂಟ್ರಿ ಕೊಟ್ಟಿರುತ್ತಾರೆ. ಅದರಂತೆ ವೀರಾಜ್ ಇಂಟ್ರುಡ್ಯೂಸ್ ಮಾಡುವಾಗಲೂ ಅಷ್ಟೇ ಪೂರ್ವ ತಯಾರಿ ಮಾಡಿಕೊಂಡೇ ಬಂದಿದ್ದಾರೆ.

ಇನ್ನು ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಸಿನಿಮಾವನ್ನು ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಜೆಜೆ , ಜೇಡ್ ಸ್ಯಾಂಡಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮರಾ ಹಿಡಿದಿದ್ದಾರೆ.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'Celebrating the anniversarydirected by JJGovind Raj CityJade Sandi.movie 'Deva Ruju Riedanu'Suni's new journey with young talents
Previous Post

ಕುಮಾರಸ್ವಾಮಿ ಬಗ್ಗೆ‌ ನಾನು ಮಾತಾಡಲ್ಲ ಎಂದ ಡಿಕೆಶಿ..!

Next Post

ಏಕವಚನದಲ್ಲೇ ಯತ್ನಾಳ್ ಮೇಲೆ ಗುರ್ ಅಂದ DCM ಡಿ.ಕೆ.ಶಿವಕುಮಾರ್

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

May 17, 2026
ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

May 17, 2026
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
Next Post

ಏಕವಚನದಲ್ಲೇ ಯತ್ನಾಳ್ ಮೇಲೆ ಗುರ್ ಅಂದ DCM ಡಿ.ಕೆ.ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada