ಬೆಂಗಳೂರು : 24 ಹಿಂದೂ ಕಾರ್ಯಕರ್ತರ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಕಾರಣ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಬಿಗ್ ರಿಲೀಫ್ ದೊರಕಿದೆ. ಹೈಕೋರ್ಟ್ನಲ್ಲಿ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪೊಲೀಸ್ ತನಿಖೆಗೆ ತಡೆ ನೀಡಿದೆ.

ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಹರೀಶ್ ಪೂಂಜಾ ಹೇಳಿಕೆಯ ಬಳಿಕ ಜಿಲ್ಲೆಯಲ್ಲಿ ಯಾವುದೇ ಹಿಂಸಾಚಾರಗಳು ನಡೆದಿಲ್ಲ ಎಂಬ ಪೂಂಜಾ ಪರ ವಕೀಲ ಪ್ರಭುಲಿಂಗ ರೆಡ್ಡಿ ವಾದ ಆಲಿಸಿದ ನ್ಯಾಯಪೀಠ ಪೂಂಜಾಗೆ ರಿಲೀಫ್ ನೀಡಿದೆ.
ಹಿಂದೂ ಕಾರ್ಯಕರ್ತ ಸತ್ಯಜಿತ್ ಸುರತ್ಕಲ್ ಎಂಬವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದನ್ನು ಖಂಡಿಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ 24 ಹಿಂದೂ ಕಾರ್ಯಕರ್ತರನ್ನು ಕೊಂದವರ ಪರ ಪ್ರಚಾರ ಮಾಡುತ್ತೀರಾ ಎಂದು ಗುಡುಗಿದ್ದರು . ಈ ಹೇಳಿಕೆ ವ್ಯಾಪಕ ವೈರಲ್ ಆಗಿತ್ತು.