ಗದಗ: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಕಾರು ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕರ ಮೇಲೆ ಅನುಮಾನ ಇಲ್ಲ.. ಆದದೆ ಸಾವಿನ ಬಗ್ಗೆ ಅನುಮಾನ ಇದೆ ಎಂದು ಆತ್ಮಹತ್ಯೆ ಮಾಡಿಕೊಂಡ ಸುನಿಲ್ ಚವ್ಹಾಣ್ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದ ಶಾಸಕರಿಗೆ ಸಂಬಂಧಿಸಿದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರು ಸ್ಥಳಕ್ಕೆ ಬರುವ ಮುನ್ನವೇ ಮೃತದೇಹ ಕೆಳಗಿಳಿಸಲಾಗಿತ್ತು. ಪೊಲೀಸರ ತನಿಖಾ ವಿಧಾನದ ಮೇಲೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಂಡರಗಿ ತಾಲೂಕಿನ ದಿಂಡೂರಿಂದ ಲಕ್ಷ್ಮೇಶ್ವರಕ್ಕೆ ಬರುವ ಮುನ್ನವೇ ಮೃತದೇಹ ಕೆಳಗಿಳಿಸಲಾಗಿತ್ತು.. ಶಾಸಕರು ಸುನಿಲ್‌ನನ್ನು ಮಗನಂತೆ ನೋಡಿಕೊಂಡಿದ್ದರು. ಎರಡು ವರ್ಷದಿಂದ ಶಾಸಕರ ಜೊತೆಗೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದನು ಎಂದಿದ್ದಾರೆ.
ಹಣದ ವ್ಯವಹಾರ ಇರಲಿಲ್ಲ. ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ..? ಅನ್ನೋದು ಗೊತ್ತಿಲ್ಲ. ಪೊಲೀಸರು ತನಿಖೆ ನಡೆಸಿ ನಡೆಸಿ, ಸಾವಿಗೆ ಕಾರಣ ಪತ್ತೆ ಹಚ್ಚಲಿ ಎಂದು ಸಂಬಂಧಿ ಕುಬೇರ್ ನಾಯಕ್, ಟಾಕ್ರಪ್ಪ ಚಾವ್ಹಾಣ್ ಹೇಳಿದ್ದಾರೆ.
ನಿನ್ನೆಯಷ್ಟೇ ಮನೆ ನಿರ್ಮಾಣದ ವಿಷಯಕ್ಕೆ ತಮ್ಮನೊಂದಿಗೆ ಮಾತನಾಡಿದ್ದೆ, ನಿನ್ನೆ ರಾತ್ರಿ 8.30 ವರೆಗೆ ಜೊತೆಗೆ ಇದ್ದು ನಂತರ ಮನೆಗೆ ಹೋಗಿದ್ದೆ.. ಆ ಬಳಿಕ ರಾತ್ರಿ ಫೋನ್‌ನಲ್ಲೂ ಮಾತನಾಡಿದ್ದ ಸುನಿಲ್ ಎಂದು ಸಹೋದರ ಆನಂದ್ ಹೇಳಿದ್ದಾರೆ. ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.