ಸಾಂವಿಧಾನಿಕ ಸಂಸ್ಥೆಗಳು ಮಾಧ್ಯಮಗಳನ್ನು ದೂರುವುದನ್ನು ನಿಲ್ಲಿಸಬೇಕು: ಸುಪ್ರೀಂ ಕೋರ್ಟ್

ಮಾಧ್ಯಮಗಳನ್ನು ನಿಯಂತ್ರಿಸಲು ಮತ್ತು ಅವುಗಳ ವಿರುದ್ಧ ದೂರು ನೀಡುವುದಕ್ಕಿಂತ ಉತ್ತಮ ಕಾರ್ಯಗಳನ್ನು ಸಾಂವಿಧಾನಿಕ ಸಂಸ್ಥೆಗಳು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಮದ್ರಾಸ್ ಹೈಕೋರ್ಟ್ ರಾಜಕೀಯ ರ್ಯಾಲಿ ನಡೆಸಲು ಅನುಮತಿ ನೀಡಿರುವುದಕ್ಕೆ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದು ತೀರ್ಪು ನೀಡಿರುವುದನ್ನು ಮಾಧ್ಯಮಗಳು ಪ್ರಕಟಿಸದಂತೆ ನಿರ್ಬಂಧ ಹೇರಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

“ಆರ್ಟಿಕಲ್ 19 ಜನರಿಗೆ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡುವುದಲ್ಲ, ಮಾಧ್ಯಮಗಳಿಗೂ ಆ ಹಕ್ಕನ್ನು ನೀಡುತ್ತದೆ” ಎಂದು ಹೇಳಿದೆ. “ಆಯೋಗದ ವಿಚಾರಣೆಯನ್ನು ವರದಿ ಮಾಡುವುದನ್ನು ತಡೆಯುವಂತೆ ಕೋರಿ‌ ಇಸಿಯು ಸಲ್ಲಿಸಿರುವ ಅರ್ಜಿಯಲ್ಲಿ ನಮಗೆ ಯಾವುದೇ ಸತ್ಯಾಂಶ ಗೋಚರಿಸಿಲ್ಲ” ಎಂದೂ ಅದು ಹೇಳಿದೆ.

“ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿರುವ ಹೇಳಿಕೆಗಳು‌ ಕಠಿಣವಾಗಿವೆ ಮತ್ತು ಅಸಮರ್ಪಕ ರೂಪಕಗಳನ್ನು ಹೊಂದಿದೆ. ನ್ಯಾಯಾಂಗಕ್ಕೆ ಸಂಯಮದ ಅಗತ್ಯವಿದೆ. ಸಾಂವಿಧಾನಿಕ ನೀತಿಗಳಿಗೆ ನ್ಯಾಯಾಂಗ ಭಾಷೆ ಮುಖ್ಯವಾಗಿದೆ. ನ್ಯಾಯಾಂಗದ ಪರಿಶೀಲನೆಯು ತುಂಬಾ ಶಕ್ತಿಯುತವಾಗಿದ್ದು  ಮೂಲಭೂತ ರಚನೆಯನ್ನು ರೂಪಿಸುತ್ತದೆ” ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಅಲ್ಲದೆ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಸುತ್ತಿದೆ ಎಂದೂ ಅದು ಹೇಳಿದೆ.

ಆದರೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಜನರ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಕಾರ್ಯವನ್ನೂ ಹೈಕೋರ್ಟ್ ಎದುರಿಸುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.

 “ನ್ಯಾಯಾಲಯಗಳಿಗೆ ಮುಕ್ತ ಪ್ರವೇಶವು ಸಾಂವಿಧಾನಿಕ ಸ್ವಾತಂತ್ರ್ಯಕ್ಕೆ ಒಂದು ಅಮೂಲ್ಯವಾದ ರಕ್ಷಣೆಯಾಗಿದೆ. ಪತ್ರಿಕಾ ಸ್ವಾತಂತ್ರ್ಯವು ಸಾಂವಿಧಾನಿಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಅಂಶವಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೋವಿಡ್ ಉಲ್ಬಣದ ಮಧ್ಯೆಯೂ ನಡೆದ‌‌ ಚುನಾವಣಾ ಪ್ರಚಾರವನ್ನು‌‌ ಉಲ್ಲೇಖಿಸಿ ಮದ್ರಾಸ್ ಹೈಕೋರ್ಟ್ ಆಯೋಗವನ್ನು ಖಂಡಿಸಿತ್ತು. ಇದನ್ನು ವಿರೋಧಿಸಿದ ಇಸಿ “ಯಾವುದೇ ಪುರಾವೆಗಳಿಲ್ಲದೆ ಆರೋಪ‌ ಹೊರಿಸಿದೆ” ಎಂದು ದೂರಿದೆ.

ಮದ್ರಾಸ್ ಹೈಕೋರ್ಟ್ ಎಪ್ರಿಲ್ 26 ರಂದು ಚುನಾವಣಾ ಆಯೋಗವು ಕಿಕ್ಕಿರಿದ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಿದ್ದಕ್ಕಾಗಿ  ‘ಕೊಲೆ ಪ್ರಕರಣವನ್ನು ದಾಖಲಿಸಬೇಕು’ ಮತ್ತು ಪ್ರಸ್ತುತ ಕೋವಿಡ್ ಹೆಚ್ಚಳಕ್ಕೆ ‘ಏಕೈಕ ಜವಾಬ್ದಾರಿಯಾಗಿದೆ’ ಎಂದು ಹೇಳಿತ್ತು.

ಚುನಾವಣಾ ಆಯೋಗವು ಕಳೆದ ವಾರ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿ  ಹೈಕೋರ್ಟಿನ ತೀರ್ಪು ನಾಚಿಕೆಗೇಡಿನದ್ದು  ಎಂದು ಕರೆದಿದೆ ಮತ್ತು ಮಾಧ್ಯಮಗಳು  ವರದಿ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.  ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ (ಇ ಪಳನಿಸ್ವಾಮಿ) ಅವರ ರ್ಯಾಲಿ ಯನ್ನು ನಿರ್ವಹಿಸಬೇಕಾಗಿತ್ತು ಮತ್ತು “ಅವರು ಉಲ್ಲಂಘನೆಯನ್ನು ಮಾಡಿದ್ದಾರೆ” ಎಂದು ಅದು ಹೇಳಿದೆ.

” ಸಾರ್ವಜನಿಕ ಹಿತದೃಷ್ಟಿಯಿಂದ ಏನನ್ನಾದರೂ ಆಚರಿಸಲಾಗುತ್ತದೆ. ಚುನಾವಣಾ ಆಯೋಗವು ಅದನ್ನು  ಕಹಿ ಮಾತ್ರೆ ಎಂದು ಪರಿಗಣಿಸಿ ಧನಾತ್ಮಕವಾಗಿ ಸ್ವೀಕರಿಸಬೇಕು”‌ಎಂದು ಹೇಳಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...