ಚಾಲಕನ ನಿಯಂತಯ್ರಣ ತಪ್ಪಿ ಖಾಸಗಿ ಬಸ್ಸೊಂದು ಶರಾವತಿ ಹಿನ್ನೀರಿನಿಗೆ ಇಳಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಳೆ ಬಾಗಿಲಿನಲ್ಲಿ ನಡೆದಿದೆ.
ಹೊಳೆ ಬಾಗಿಲು ಕಡೆಯಿಂದ ಸಿಗಂದೂರು ಕಡೆ ಬಸ್ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಹಿನ್ನೀರು ಬಳಿ ಲಾಂಚ್ ಗಾಗಿ ಬಸ್ ನಿಲ್ಲಿಸಿಕೊಂಡು ಕಾಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಸ್ ಇಳಿದಿದೆ.
ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಎಚ್ಚೆತ್ತ ಪ್ರಯಾಣಿಕರು ಬಸ್‌ನಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಇಲಾಖೆ ಸಿಬ್ಬಂದಿ ಸಿಗಂದೂರು ಸೇತುವೆ ನಿರ್ಮಾಣದ ಹಿಟಾಚಿ ಬಳಸಿ ಬಸ್ ಮೇಲಕ್ಕೆತ್ತಿದ್ದರು.
