ಬೆಳಗಾವಿ ; ಹಿಂಡಲಗಾ ಗ್ರಾಮದ ಹಿಂದೂ ರಾಷ್ಟ್ರ ಸೇನಾ ಹಾಗೂ ಶ್ರೀರಾಮಸೇನಾ ಮುಖಂಡ ಕೋಕಿತಕರ ಹಾಗೂ ಇವರ ಕಾರು ಚಾಲಕನ ಮೇಲೆ ಶನಿವಾರ ರಾತ್ರಿ ಫೈರಿಂಗ್ ಮಾಡಲಾಗಿದೆ .
ಹಿಂಡಲಗಾ ಗ್ರಾಮದ ಪ್ರಾಥಮಿಕ ಮರಾಠ ಶಾಲೆ ಬಳಿಯಿಂದ ಸ್ಕಾರ್ಪಿಯೋ ಕಾರಿನಲ್ಲಿ ತೆರಳುತ್ತಿದ್ದರು . ಆಗ ಅಪರಿಚಿತರು ಬಂದು ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಬಂದೂಕಿನ ಗುಂಡು ರವಿ ಕೋಕಿತಕರ ಅವರ ಮುಖ ಭಾಗದ ಗಡ್ಡಕ್ಕೆ ತಗುಲಿದೆ. ಕಾರು ಚಾಲಕನ ಕೈಗೆ ಗುಂಡು ತಗುಲಿದೆ . ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭಾಟಿ ನೀಡಿ ಪರಿಶೀಲನೆ ನಡೆಸಿದ್ದಾರೆ