ಬ್ರಾಹ್ಮಣ ವಿಚಾರ ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ನಡುವೆ, ಬ್ರಾಹ್ಮಣ ಸಮುದಾಯದ ಸ್ವಾಮೀಜಿ ಒಬ್ಬರಿಗೆ ಜೀವ ಬೆದರಿಕೆ ಬಂದಿದ್ದು, ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿದ ಕೇಂದ್ರ ಗೃಹ ಇಲಾಖೆ Y ಕೆಟಗರಿ ಭದ್ರತೆ ನೀಡುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಈ ಬಗ್ಗೆ ಮಠಕ್ಕೆ ರಾಜ್ಯ ಪೊಲೀಸ್ರು ಭದ್ರತೆ ಕೈಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಆದೇಶ ಪತ್ರ ಮಠಕ್ಕೆ ಬರಲಿದೆ ಎನ್ನಲಾಗಿದೆ. ಯದುಗಿರಿ ಯತಿರಾಜ ಶ್ರೀಗಳಿಗೆ ಪ್ರಾಣ ಬೆದರಿಕೆ ಬಂದಿರುವ ಮಾಹಿತಿ ಹಿನ್ನೆಲೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯ ಮಠದಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಹೆಚ್ಚು ಓದಿದ ಸ್ಟೋರಿಗಳು
ರಾಮಾನುಜ ಜೀಯರ್ ಸ್ವಾಮೀಜಿಗೆ ಕಿಡಿಗೇಡಿಗಳು ನಿರಂತರವಾಗಿ ಪ್ರಾಣಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮೂಲಭೂತವಾದಿ ಸಂಘಟನೆಗಳಿಂದ ಪ್ರಾಣ ಬೆದರಿಕೆ ಬರುತ್ತಿದ್ದ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಠದ ಟ್ರಸ್ಟಿಗಳು ಪತ್ರ ಬರೆದು ಮಾಹಿತಿ ನೀಡಲಾಗಿತ್ತು. ಕೇಂದ್ರ ಗೃಹ ಮಂತ್ರಿಗಳಿಗೆ ಮಾಹಿತಿ ಹೋಗುತ್ತಿದ್ದಂತೆ, ಬೆಂಗಳೂರಿನ ಮಲ್ಲೇಶ್ವರಂ, ತೆಲಂಗಾಣ, ಆಂಧ್ರದಲ್ಲಿರುವ ಮಠಕ್ಕೆ ಭದ್ರತೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿ ಅವರಿಗೆ ಜೀವಭಯ ಇರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಕೂಡ ಮಾಹಿತಿ ಸಂಗ್ರಹಿಸಿತ್ತು.
ಕೆಲವು ಸಂಘಟನೆಗಳ ಬ್ಯಾನ್ ನಿರ್ಧಾರದ ಎಫೆಕ್ಟ್..!
ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಕೆಲವು ಸಮುದಾಯಕ್ಕೆ ಸೇರಿದ ಸಂಘಟನೆಗಳನ್ನು ನಿಷೇಧ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಆ ನಿರ್ಧಾರದ ಬಳಿಕ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು ಎನ್ನಲಾಗಿದೆ. ರಾಮಾನುಜ ಜೀಯರ್ ಸ್ವಾಮೀಜಿ ಸೇರಿದಂತೆ ಕೆಲವು ಬಲಪಂಥೀಯರು ಹಿಟ್ಲಿಸ್ಟ್ನಲ್ಲಿ ಇದ್ದಾರೆ ಎನ್ನಲಾಗಿತ್ತು. ಅದರಲ್ಲಿ ರಾಮಾನುಜ ಜೀಯರ್ ಸ್ವಾಮೀಜಿ ಕೂಡ ಒಬ್ಬರು. ಇದೇ ಕಾರಣದಿಂದ ಬೆದರಿಕೆ ಬರುತ್ತಿದ್ದ ಹಾಗೆ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಮಠದ ಟ್ರಸ್ಟಿಗಳು ಸ್ವಾಮೀಜಿಗಳ ಜೀವಕ್ಕೆ ಯಾವುದೇ ಸಂಕಷ್ಟ ಬಾರದಂತೆ ವೈ ಕೆಟಗರಿ ಭದ್ರತೆ ಸಿಗುವಂತೆ ನೋಡಿಕೊಂಡಿದ್ದಾರೆ.
Y ಕೆಟಗರಿ ಸೆಕ್ಯೂರಿಟಿ ಅಂದ್ರೆ ಹೇಗಿರುತ್ತೆ?

ಕೇಂದ್ರ ಗೃಹ ಇಲಾಖೆಯಡಿ ದೇಶದ ಗಣ್ಯರ ಭದ್ರತೆಗೆ Z ಕೆಟಗರಿ, Y ಕೆಟಗರಿ ಸೇರಿದಂತೆ ಸಾಕಷ್ಟು ಹಂತಗಳಲ್ಲಿ ಭದ್ರತೆ ನೀಡಲಾಗುತ್ತದೆ. ಗಣ್ಯರ ಸ್ಥಾನಮಾನ ಹಾಗು ಗಣ್ಯರಿಗೆ ಸಮಾಜದ ದುಷ್ಕರ್ಮಿಗಳಿಂದ ಇರುವ ಅಪಾಯದ ಆಧಾರದಲ್ಲಿ ಸೆಕ್ಯೂರಿಟಿ ನೀಡುವ ನಿರ್ಧಾರ ಮಾಡಲಾಗುದೆ. ಈ Y ಕೆಟಗರಿ ಭದ್ರತೆಯಲ್ಲಿ ಒಟ್ಟು 28 ಮಂದಿ ಭದ್ರತಾ ಸಿಬ್ಬಂದಿ ಇರಲಿದ್ದಾರದೆ. ಈ ಟೀಂನಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಇತ್ತರುತ್ತಾರೆ. ಇನ್ನುಳಿದಂತೆ ತರಬೇತಿ ಪಡೆದ ಪೊಲೀಸರು ಇರುತ್ತಾರೆ. ಯಾವ ಗಣ್ಯರಿಗೆ ಭದ್ರತೆ ಒದಗಿಸಲಾಗುತ್ತದೆಯೋ ಅವರಿಗೆ ಮೂರು ಪಾಳಿಗಳಲ್ಲೂ ಭದ್ರತೆ ನೀಡಲಾಗುತ್ತದೆ. ದಿನದ 24 ಗಂಟೆಗಳ ಕಾಲ ಶಸ್ತ್ರಧಾರಿತ ಕಮಾಂಡೋಗಳು ಭದ್ರತೆ ನೀಡುತ್ತಾರೆ.
ಬ್ರಾಹ್ಮಣ ಸ್ವಾಮೀಜಿ ಟಾರ್ಗೆಟ್ ಆಗಿದ್ದು ಯಾಕೆ..?
ರಾಮಾನುಜ ಜೀಯರ್ ಸ್ವಾಮೀಜಿ ಜಮ್ಮು ಕಾಶ್ಮೀರ, ಅಯೋಧ್ಯೆ ಸೇರಿದಂತೆ ಹಲವಾರು ಕಡೆಗಳಲ್ಲಿ ರಾಮಾನುಜರ ಮೂರ್ತಿಗಳನ್ನು ಸ್ಥಾಪಿಸುವ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ರಾಮಾನುಜ ಜೀಯರ್ ಸ್ವಾಮೀಜಿ ದೇಶಾದ್ಯಂತ ಧರ್ಮ ಪ್ರಚಾರ ಹಾಗು ಶಾಂತಿ ಸ್ಥಾಪನೆಯ ಕೆಲಸ ಮಾಡುತ್ತಿದ್ದರು. ಇದು ಕೆಲವು ಪಟ್ಟಭದ್ರ ಹಿತಾಸಕ್ತಿಗಳಮನ್ನು ಕೆರಳಿಸಿತ್ತು ಎನ್ನುವ ಮಾಹಿತಿ ಇದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ರಾಜ್ಯ ಪೊಲೀಸ್ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಶೀಘ್ರದಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.