ಸ್ಮೋಕ್ ಬಿಸ್ಕೆಟ್ ತಿಂದ ಬಾಲಕ ಅಸ್ವಸ್ಥಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ (Davanagere) ನಗರದ ಪಿಬಿ ರಸ್ತೆ ಬಳಿ ರೋಬೋಟಿಕ್ ಬರ್ಡ್ಸ್ ಎಕ್ಸಿಬಿಷೆನ್ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೆ ಮಗುವನ್ನು (Children) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಪಾಲಕರು. ಚಿಕಿತ್ಸೆ ನಂತರ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಮೋಕ್ ಬಿಸ್ಕೆಟ್ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಪೋಷಕರು ದೂರು (Complaint) ನೀಡಿದ್ದು, ಹೆತ್ತವರಿಂದ ದೂರು ಪಡೆದುಕೊಂಡ ಪಾಲಿಕೆ ಅಧಿಕಾರಿಗಳು, ಸ್ಮೋಕ್ ಬಿಸ್ಕೆಟ್ (Smoke Biscuit) ಮಾರಾಟ ಬಂದ್ ಮಾಡಿ, ಅವುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಮೋಕ್ ಬಿಸ್ಕೆಟ್ ತಿಂದು ಮಗು ಅಸ್ವಸ್ಥ ಆಗಿದ್ದಕ್ಕೆ ಅದನ್ನ ತಿನ್ನದಂತೆ ಪಾಲಕರು ಮನವಿ ಮಾಡಿಕೊಂಡಿದ್ದಾರೆ. ಲಿಕ್ವಿಡ್ ನೈಟ್ರೋಜನ್ (Gas) ಬಳಕೆ ಮಾಡಲಾಗುತ್ತದೆ. ನೈಟ್ರೋಜನ್ ದೇಹದ ಒಳಕ್ಕೆ ಹೋದಾಗ ಉಸಿರಾಟದ ಸಮಸ್ಯೆ ಆಗುವ ಸಾಧ್ಯತೆಗಳು ಇವೆ ಎಂದು ವೈದ್ಯರು ತಿಳಿಸಿದ್ದಾರೆ.
ಅದರಲ್ಲೂ ಮಕ್ಕಳಿಗೆ ನೈಟ್ರೋಜನ್ (Nitrogen) ಗ್ಯಾಸ್ ಹೊಂದಿರುವ ಬಿಸ್ಕೆಟ್ ಅಥವಾ ಐಸ್ಕ್ರೀಮ್ (Ice Vream) ಕೊಡುವುದರಿಂದ ಭಾರೀ ಅನಾಹುತಗಳು ಆಗುವ ಸಾಧ್ಯತೆಗಳಿವೆ. ತುಂಬಾ ಕೋಲ್ಡ್ ಆಗಿರುವುದರಿಂದ ಚರ್ಮ ಸುಟ್ಟು ಹೋಗುವ ಸಾಧ್ಯತೆಯೂ ಇದೆ. ಇನ್ನು ತಿಂದ ಕೂಡಲೇ ದೇಹದ ಭಾಗ ಸುಟ್ಟುಹೋಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು (Doctor).