ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ಘೋಷಿಸಿದ್ದಾರೆ
ಬೋರಿಸ್ ಜಾನ್ಸನ್ ಅವರ ವಿರುದ್ಧ ಸರ್ಕಾರದ ಸುಮಾರು 40 ಮಂದಿ ರಾಜೀನಾಮೆ ನೀಡಿದ್ದರು. ಹೀಗಾಗಿ ಭಾರಿ ರಾಜಕೀಯ ಕ್ಷೋಭೆ ಉಂಟಾಗಿತ್ತು. ಮೂರು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಬೋರಿಸ್ ಜಾನ್ಸನ್ ತಮ್ಮ ಭಾಷಣದಲ್ಲಿ ತಾನು ವಿಶ್ವದ ಅತ್ಯುತ್ತಮ ಉದ್ಯೋಗವನ್ನು ತ್ಯಜಿಸುತ್ತಿರುವುದು ದುಃಖವಾಗಿದೆ ಎಂದು ಹೇಳಿದರು.
ಈ ಮಧ್ಯೆ ಮುಂದಿನ ಪ್ರಧಾನಿ ಯಾರು ಎಂಬ ಚರ್ಚೆ ಕೂಡ ಶುರುವಾಗಿದ್ದು, ಪ್ರಧಾನಿ ರೇಸ್ನಲ್ಲಿ ಭಾರತ ಮೂಲದ ರಿಷಿ ಸುನಕ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.