ಆಫೀಸಿಗೆ ಹೋಗುವವರಿಂದ ಹಿಡಿದು ಕಾಲೇಜಿಗೆ ಹೋಗುವವರು, ಮಕ್ಕಳು, ದೊಡ್ಡವರು ಎಂಬ ಬೇಧವಿಲ್ಲದೇ ಬಹುತೇಕರು ಸುಲಭವಾದ ಸಂಚಾರಕ್ಕೆ ಬಳಸುವ ಸಾರಿಗೆ ಅಂದರೆ ಅದು ನಮ್ಮ ಮೆಟ್ರೋ. ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೇ ಸಿಗ್ನಲ್ ತೊಂದರೆ ಇಲ್ಲದೆ ಶೀಘ್ರವಾಗಿ ಜನ ಟ್ರಾವೆಲ್ ಮಾಡ್ತಾರೆ. ಆದರೆ ದಿನೇ ದಿನೇ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಆಗಿರೋದ್ರಿಂದ BMRCL ಪ್ರಯಾಣಿಕರನ್ನು ಸೆಳೆಯಲು ಹೊಸ ಪ್ಲಾನ್ ಒಂದನ್ನು ಪರಿಚಯಿಸಲು ಹೊರಟಿದೆ.
ನಮ್ಮ ಮೆಟ್ರೋ ಆಗ್ತಿದೆ ಇನ್ನಷ್ಟು ಸ್ಮಾರ್ಟ್ ಹಾಗೂ ಯೂಸರ್ ಫ್ರೆಂಡ್ಲಿ
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬೇಕು ಅನ್ನೋ ಕಾರಣಕ್ಕೆ ಮೆಟ್ರೋ ಸಂಚಾರ ಆರಂಭ ಮಾಡಲಾಗಿದೆ. ಈಗಾಗಲೇ ಮೆಟ್ರೋಗೆ ಜನ ಫಿದಾ ಆಗಿದ್ದಾರೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಹಲವು ವಿನೂತನ ಯೋಜನೆಗಳನ್ನು BMRCL ಜಾರಿ ಮಾಡುತ್ತಾ ಬರುತ್ತಿದೆ. ಇದೀಗ ಮತ್ತೊಂದು ಹೊಸ ಯೋಜನೆ ಜಾರಿ ಮಾಡಲು ಮುಂದಾಗಿದೆ. ಸದ್ಯ ಬೆಂಗಳೂರು ಮೆಟ್ರೋದಲ್ಲಿ ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಅಂತ ಉದ್ದುದ್ದ ಸಾಲಿನಲ್ಲಿ ನಿಂತುಕೊಳ್ಳಬೇಕು. ಆದರೆ ಇನ್ಮುಂದೆ ಈ ಇಂತಹಾ ಕಿರಿಕಿರಿಗೆ ಇರೋದಿಲ್ಲ.
ನಮ್ಮ ಮೆಟ್ರೋದಲ್ಲಿ ಮೊಬೈಲ್ ಟೆಕೆಟ್ ಜಾರಿ
BMRCL ಮೊಬೈಲ್ ಪೋನ್ನಲ್ಲಿ ನಮ್ಮ ಮೆಟ್ರೋ ಟಿಕೆಟ್ ಲಭ್ಯವಾಗುವಂತೆ ಮಾಡಲಿದೆ. ಇದಕ್ಕೆಂದೇ ನಮ್ಮ ಮೆಟ್ರೋ ನೂತನ ಆ್ಯಪ್ ವಿನ್ಯಾಸಗೊಳಿಸುತ್ತಿದೆ. ಸರತಿ ಸಾಲಿನಲ್ಲಿ ನಿಂತು ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್ ಪಡೆಯಬೇಕಿತ್ತು. 2015ರಲ್ಲೇ ಎಎಫ್ಸಿ ಗೇಟ್ಗಳಲ್ಲಿ ಕ್ಯೂ ಆರ್ ಟಿಕೆಟ್ ವ್ಯವಸ್ಥೆಗೆ ಯೋಜನೆ ಹಾಕಲಾಗಿತ್ತು. ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಿ ಯಶಸ್ವಿಯಾಗಿದೆ. ಇದೀಗ ಅದೇ ಮಾದರಿಯಲ್ಲಿ ಕೆಲವೇ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರಲಿದೆ.
ಹೇಗೆ ಕಾರ್ಯನಿರ್ವಹಿಸಲಿದೆ ?
ಮೊದಲು ಪ್ರಯಾಣಿಕರು ತಮ್ಮ ಸ್ಮಾರ್ಟ್ ಪೋನ್ನಲ್ಲಿ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಬೇಕು. ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕು. ನಂತರ ತಾವು ಬಳಸುವ UPI ಪೇಮೆಂಟ್ ಮಾದರಿಯಲ್ಲಿ ಟಿಕೆಟ್ ದರ ಪಾವತಿಸವೇಕು. ಕೂಡಲೇ ಪ್ರಯಾಣದ ಮೊತ್ತವು ಆನ್ಲೈನ್ ಮೂಲಕ BMRCLಗೆ ಜಮಾ ಆಗಲಿದೆ. ಬಳಿಕ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕ್ಯೂ ಆರ್ ಕೋಡ್ ಗಳು ಪ್ರವೇಶ ದ್ವಾರದ ಎಎಫ್ಸಿ ಗೇಟ್ ಗಳಲ್ಲಿ ಲಭ್ಯವಿರಲಿದೆ. ಈ ವೇಳೆ ಪೇಮೆಂಟ್ ಸಕ್ಸಸ್ ಫುಲ್ ಆಗಿದ್ದರೆ ಗೇಟ್ ಗಳು ಓಪನ್ ಆಗಲಿದೆ. ಹೀಗೆ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲದೆ ಟಿಕೆಟ್ ಪಡೆಯಬಹುದು. ಪ್ರಯಾಣಿಕರು ತಾವು ಇಳಿಯುವ ಸ್ಥಳದಲ್ಲಿ ಇದರ ಅಗತ್ಯವಿರುವುದಿಲ್ಲ.
ಹೌದು, ನಿಮ್ಮ ಮೊಬೈಲ್ ಮೂಲಕವೇ ಮೆಟ್ರೋ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಪರಿಚಯ ಮಾಡ್ತಿದೆ. ಪ್ರಯಾಣಿಕರು ತಮ್ಮ ಸ್ಮಾರ್ಟ್ ಪೋನ್ನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕಾಗುತ್ತದೆ. ನಂತರ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್ಲೈನ್ ಮೂಲಕ BMRCLಗೆ ಜಮಾ ಆಗಲಿದೆ. ಇಂತಹ ನೂತನ ವ್ಯವಸ್ಥೆಯನ್ನು ತರಲು BMRCL ಮುಂದಾಗಿದೆ.
2015ರ ಪೂರ್ವದಲ್ಲಿ ಅಳವಡಿಸಿದ ಎಎಫ್ಸಿ ಗೇಟ್ಗಳಲ್ಲಿ ಕ್ಯೂ ಆರ್ ಟಿಕೆಟ್ ವ್ಯವಸ್ಥೆಗೆ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿತ್ತು. ಹಳೆಯ ದ್ವಾರಗಳನ್ನು ಕ್ಯೂ ಆರ್ ವ್ಯವಸ್ಥೆಗೆ ಸ್ಪಂದಿಸುವಂತೆ ಸಾಫ್ಟ್ ವೇರ್ ಬದಲಿಸಲಾಗುವುದು. ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಮಾತ್ರ ಮೊಬೈಲ್ ಟಿಕೆಟ್ ಸೇವೆ ಲಭ್ಯವಿದೆ. ಇದೀಗ ಮೆಟ್ರೋದಲ್ಲೂ ಲಭ್ಯವಾಗಲಿದೆ. ಕೊರೊನಾದಿಂದ ಪ್ರಯಾಣಿಕ ಸಂಖ್ಯೆ ಮೆಟ್ರೋ ದಲ್ಲಿ ಕುಸಿತವಾಗಿದೆ. ಆದರೆ ಇದೀಗ ಮತ್ತೆ ಪ್ರಯಾಣಿಕರನ್ನು ಸೆಳೆಯಲು ನಮ್ಮ ಮೆಟ್ರೋ ಹೊಸ.. ಹೊಸ ಪ್ಲಾನ್ ಗಳನ್ನು ಪರಿಚಯಿಸಲು ಮುಂದಾಗಿದ್ದು, BMRCLನ ಈ ಪ್ಲಾನ್ ಆದಷ್ಟು ಬೇಗ ಜಾರಿಯಾಗಲಿ. ಜನ ಸಾಮಾನ್ಯರಿಗೆ ಈ ವಿನೂತನ ಸೇವೆ ಎಷ್ಟರ ಮಟ್ಟಿಗೆ ಸದ್ಭಳಕೆ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.