Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

ಪ್ರತಿಧ್ವನಿ

ಪ್ರತಿಧ್ವನಿ

July 3, 2022
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ದೇಶಪ್ರೇಮ ಅನ್ನುವುದು ಬರೀ ಹಿಂದಿಯಲ್ಲಿ ಮಾತ್ರ ಪ್ರಕಟವಾಗುವುದೇ? : ಕವಿರಾಜ್

ಸರ್ಕಾರ ನಡೀತಾ ಇಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಸಚಿವ ಶ್ರೀರಾಮುಲು ಅಸಮಾಧಾನ!

ಸ್ವತಂತ್ರ್ಯ ದಿನಾಚರಣೆ ಹಿನ್ನೆಲೆ ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ!

ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ʼಗಳು, ಅರಮನೆಯಂಥ ಭಂಗಲೆಗಳ ಮೇಲೆ ಬುಲ್ಡೋಜರ್‌ʼಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ʼಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಇಂದು ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು.

ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ನಿಷ್ಕ್ರಿಯವಾಗಿದೆ. ಅದೊಂದು ಭ್ರಷ್ಟಕೂಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಒಂದರಲ್ಲೇ ಸುಮಾರು 30 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಂಡರೆ ಲಕ್ಷಾಂತರ ಬಡವರಿಗೆ ಮನೆ ಕಟ್ಟಿಕೊಡಬಹುದು. ಅಂಥ ಕೆಲಸವನ್ನು ಬಿಡಿಎ ಮಾಡುತ್ತಿಲ್ಲ. ನನಗೊಂದು ಅವಕಾಶ ಕೊಟ್ಟು ನೋಡಿ. ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸುತ್ತೇನೆ ಎಂದು ಅವರು ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿ ಆಗುತ್ತಿಲ್ಲ. ಶ್ರೀಮಂತರು ವಾಸ ಮಾಡುವ ಪ್ರದೇಶಗಳಿಗೆ ಎಲ್ಲ ಅನುಕೂಲಗಳಿದ್ದರೆ, ಬಡವರ ಬಡಾವಣೆಗಳಿಗೆ ಕೊನೆಪಕ್ಷ ರಸ್ತೆಗಳಿಗೆ ಡಾಂಬರು ಇಲ್ಲ, ವಿದ್ಯುತ್‌ ದೀಪಗಳಿಲ್ಲ. ಯಲಹಂಕ ವಿಧಾನಸಭೆ ಕ್ಷೇತ್ರದ ಬೆಟ್ಟಹಳ್ಳಿ ಗ್ರಾಮಕ್ಕೆ ಹೋದರೆ ರಾಜ್ಯ ಸರಕಾರದ ನಿಜವಾದ ಅಭಿವೃದ್ಧಿ ಮಾದರಿ ಕಣ್ಣಿಗೆ ಕಾಣುತ್ತದೆ ಎಂದು ಹರಿಹಾಯ್ದರು ಕುಮಾರಸ್ವಾಮಿ.

ನಗರದ ಅಭಿವೃದ್ಧಿ, ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಮಾಜಿ ಸಚಿವ ಕಟ್ಟಾ ಮೇಲೆ ಚಾಟಿ ಬೀಸಿದ ಹೆಚ್ಡಿಕೆ:

ಹೆಬ್ಬಾಳ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಕಟುವಾದ ಟೀಕೆ ಮಾಡಿದ ಮಾಜಿ ಮುಖ್ಯಮಂತ್ರಿಗಳು; ಕಟ್ಟಾ ಅವರು ಈಗ ಹೆಣ್ಣುಮಕ್ಕಳಿಗೆ ಅರಶಿಣ-ಕುಂಕುಮ ಕೊಡುತ್ತೇನೆ, ಲಲಿತಾ ಸಹಸ್ರನಾಮ ಕಾರ್ಯಕ್ರಮ ಏರ್ಪಡಿಸುತ್ತೇನೆ ಎಂದು ಈಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರ ಬದುಕು ಹಸನಾಗುತ್ತದೆಯೇ? ಅಲ್ಲೆಲ್ಲ ದೊಡ್ಡದಾಗಿ ಮಹಿಳೆಯರನ್ನು ಸೇರಿಸಿ ಪೂಜೆ ಪುನಸ್ಕಾರ ಅಂತ ಹೇಳಿ ಮಂಕೂಬೂದಿ ಎರಚಿ, ಗೆದ್ದುಹೋಗಿ ಮಂತ್ರಿ ಆಗುತ್ತಾರೆ. ಆಮೇಲೆ, ಸರಕಾರಿ ಭೂಮಿಯನ್ನು ಲಪಟಾಯಿಸಿ ಬಳಿಕ ಜಾಮೀನಿಗಾಗಿ ಕೋರ್ಟು ಕಚೇರಿ ಅಂತ ಅಲೆಯುತ್ತಾರೆ ಎಂದು ಪ್ರಹಾರ ನಡೆಸಿದರು.

ಬೆಂಗಳೂರಿನಲ್ಲಿ ಇವತ್ತು ಅನೇಕ ರಾಜಕಾರಣಿಗಳು, ಸಾರ್ವಜನಿಕ ಹಾಗೂ ಬಡಬಗ್ಗರ ಭೂಮಿಯನ್ನು ಕೊಳ್ಳೆ ಹೊಡೆದು ನೂರಾರು ಕೋಟಿ ಮಾಡಿದ್ದಾರೆ. ಅದೇ ಪಾಪದ ಹಣದಿಂದ ಫುಡ್ ಕಿಟ್‌, ಸಣ್ಣಪುಟ್ಟ ಪ್ರಮಾಣದ ಭಕ್ಷೀಸು ನೀಡಿ ಚುನಾವಣೆ ಗೆಲ್ಲುತ್ತಿದ್ದಾರೆ. ಇಂಥ ಆಮಿಷಗಳಿಗೆ ಜನರು ಮಾರುಹೋಗಬಾರದು. ಹಣ ಪಡೆದು ಸಭೆ ಸಮಾರಂಭಗಳಿಗೆ ಹೋಗಬಾರದು ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.

ಬೆಂಗಳೂರಿನಲ್ಲಿ ಬಡವರ ಬಂಧು ಕಾರ್ಯಕ್ರದ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ನೆರವಾದೆ. 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಇದೆಲ್ಲವನ್ನೂ ಫಲಾನುಭವಿಗಳ ಹೆಸರಿನ ಸಮೇತ ದಾಖಲೆ ಕೊಡಬಲ್ಲೆ, ನರೇಂದ್ರ ಮೋದಿ ಅವರಂತೆ ನಾನು ಬರೀ ಭಾಷಣ ಮಾಡಲ್ಲ ಎಂದರಲ್ಲದೆ, ಮೋದಿ ಹಿಂದೆ ಸುತ್ತುವ ಆತ್ಮೀಯನೊಬ್ಬರು ಗಂಟೆಗೆ 53 ಕೋಟಿ ದುಡಿಯುತ್ತಿದ್ದಾರಂತೆ. ಅದು ಹೇಗೆ? ಯಾವ ರೀತಿ? ಇಂಥವರನ್ನು ತೋರಿಸಿ ಭಾರತ ಉದ್ಧಾರವಾಗಿದೆ ಎಂದು ಜಗತ್ತಿಗೆ ತೋರಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮಾತನಾಡಿದರು. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮೊಯಿದ್ದೀನ್‌ ಅಲ್ತಾಫ್‌, ದಾಸರಹಳ್ಳಿ ಶಾಸಕ ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಹೆಚ್.ಎಂ.ರಮೇಶ್‌ ಗೌಡ ಸೇರಿದಂತೆ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಜನತಾಮಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮೊದಲು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಡೆದ ಜನತಾಮಿತ್ರ ಜಾಥ ಮತ್ತು ಬಹಿರಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಶಾಸಕ ಮಂಜುನಾಥ್ ಪಾಲ್ಗೊಂಡಿದ್ದರು.

RS 500
RS 1500

SCAN HERE

[elfsight_youtube_gallery id="4"]

don't miss it !

ಪ್ರಿಯಾಂಕಾ ಗಾಂಧಿ ಛತ್ತೀಸ್ ಗಢದಿಂದ ರಾಜ್ಯಸಭೆಗೆ, ನಿರ್ಮಲಾ ಸೀತಾರಾಮ್ ಗೆ ರಾಜ್ಯ ಬದಲಾವಣೆ ಸಂಭವ
ದೇಶ

ಪ್ರಿಯಾಂಕಾ ಗಾಂಧಿಗೆ 2ನೇ ಕೊರೊನಾ ಸೋಂಕು: ರಾಹುಲ್‌ ಗಾಂಧಿಗೆ ಅನಾರೋಗ್ಯ

by ಪ್ರತಿಧ್ವನಿ
August 10, 2022
ಕೆಜಿಎಫ್-‌2 ಸಿನಿಮಾ ವೀಕ್ಷಿಸುವಾಗ ಶೂಟೌಟ್! ಯುವಕನಿಗೆ ಗಾಯ
ಕರ್ನಾಟಕ

ಕೋರ್ಟ್‌ ಆವರಣದಲ್ಲೇ ಕುತ್ತಿಗೆ ಕೊಯ್ದು ಪತ್ನಿ ಕೊಂದ ಪತಿ!

by ಪ್ರತಿಧ್ವನಿ
August 13, 2022
Uncategorized

Write My Essay For Me Cheap – Things to Consider Before Hiring a Writing Service

by
August 13, 2022
ವಿಡಿಯೋ

DK SHIVAKUMAR | ಆರೋಗ್ಯಕರ ಸ್ಪರ್ಧೆ ಉತ್ತಮ : ಡಿ.ಕೆ.ಶಿವಕುಮಾರ್‌

by ಪ್ರತಿಧ್ವನಿ
August 10, 2022
ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಸಚಿವರಾಗಿ 18 ಶಾಸಕರು ಪ್ರಮಾಣ ವಚನ ಸ್ವೀಕಾರ!
ದೇಶ

ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಸಚಿವರಾಗಿ 18 ಶಾಸಕರು ಪ್ರಮಾಣ ವಚನ ಸ್ವೀಕಾರ!

by ಪ್ರತಿಧ್ವನಿ
August 9, 2022
Next Post
ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

ಕನ್ನಡಕ್ಕೆ ಬೇಕಿದೆಯೇ ಅಕ್ಷರಗಳ ಪುನರ್‌ ಸಂರಚನೆ?

ಕನ್ನಡಕ್ಕೆ ಬೇಕಿದೆಯೇ ಅಕ್ಷರಗಳ ಪುನರ್‌ ಸಂರಚನೆ?

ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!

ದ.ಕ.ದಲ್ಲಿ ಭಾರಿ ಮಳೆ : ಬೆಳ್ತಂಗಡಿ ಶಾಲಾ-ಕಾಲೇಜುಗಳಿಗೆ ರಜೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist